ವಾಟ್ಸಾಪ್ ಅಪ್ ಡೇಟ್ : ಮೂರು ತಿಂಗಳು ಮುಂದೂಡಿಕೆ
ಮುಂಬೈ : New Privacy Policy Update ಯಿಂದ ವಾಟ್ಸಾಪ್ ಹಿಂದೆ ಸರಿದಿದೆ. New Privacy Policy Update ಅನ್ನು ಇನ್ನೂ ಮೂರು ತಿಂಗಳುಗಳ ಕಾಲ ಮುಂದೂಡುತ್ತಿರುವುದಾಗಿ ವಾಟ್ಸಾಪ್ ತಿಳಿಸಿದೆ.
ಹತ್ತು ದಿನಗಳ ಹಿಂದೆ ವಾಟ್ಸಾಪ್ ಹೊಸ ಗೌಪ್ಯತೆ ನೀತಿ ನಿಯಮಗಳನ್ನು ತಂದಿದ್ದು ಎಲ್ಲರಿಗೂ ತಿಳಿದಿರುವ ವಿಚಾರವೇ. New Privacy Policy Update ಗೆ ಅಗ್ರಿ ಕೊಟ್ಟಿಲ್ಲ ಅಂದ್ರೆ 2021 ಫೆಬ್ರವರಿ 8 ರಿಂದ ಬಳಕೆದಾರರ ಮೊಬೈಲ್ ಫೋನ್‍ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ ಎಂದು ಘೋಷಿಸಿತ್ತು.
New Privacy Policy Update ಪ್ರಕಾರ, ಬಳಕೆದಾರರ ವೈಯಕ್ತಿಕ ಮಾಹಿತಿ, ಸಾಧನದ ಮಾಹಿತಿ, ಐಪಿ ವಿಳಾಸ ಇತ್ಯಾದಿಗಳನ್ನು ವಾಟ್ಸಾಪ್ ಫೇಸ್‍ಬುಕ್‍ನೊಂದಿಗೆ ಹಂಚಿಕೊಳ್ಳಬಹುದಾಗಿತ್ತು.
ಇದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ವಾಟ್ಸಾಪ್ ಅನ್ನ ತ್ಯಜಿಸಿ ಸಿಗ್ನಲ್, ಟೆಲಿಗ್ರಾಂನತ್ತ ಮುಖಮಾಡಿದ್ದರು.
ಇದರಿಂದ ಹೆಚ್ಚೆತ್ತುಕೊಂಡ ವಾಟ್ಸಾಪ್, ಇದೀಗ ತನ್ನ New Privacy Policy Update ನಿಂದ ಹಿಂದೆ ಸರಿದಿದೆ. ವಾಟ್ಸ್ ಆಪ್ ತನ್ನ ನಿಯಮಗಳನ್ನು ಪರಿಶೀಲನೆ ಮತ್ತು ನವೀಕರಿಸುವಂತೆ ಬಳಕೆದಾರರಿಗೆ ಕೇಳುವ ದಿನಾಂಕವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿದೆ ಎಂದು ಬ್ಲಾಗ್ ಪೋಸ್ಟ್ ನಲ್ಲಿ ಹೇಳಿದೆ.
ಇನ್ನು ಫೆಬ್ರವರಿ 8 ರಂದು ಯಾರ ಖಾತೆಯನ್ನೂ ಅಮಾನತುಗೊಳಿಸುವುದಿಲ್ಲ ಮತ್ತು ಅಳಿಸುವುದಿಲ್ಲ. ವಾಟ್ಸ್‍ಆಪ್ ನಲ್ಲಿ ಗೌಪ್ಯತೆ ಮತ್ತು ಸುರಕ್ಷತೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗೆಗಿನ ತಪ್ಪು ಮಾಹಿತಿ ತೆಗೆದುಹಾಕಲು ನಾವು ಇನ್ನೂ ಹೆಚ್ಚಿನದನ್ನು ಮಾಡಲಿದ್ದೇವೆ.
ಈ ನಂತರ ಪಾಲಿಸಿ ಪರಿಶೀಲಿಸಲು ಕ್ರಮೇಣ ಜನರ ಬಳಿಗೆ ಹೋಗುತ್ತೇವೆ. ಮೇ 15ರಂದು ಹೊಸ ವ್ಯವಹಾರ ಆಯ್ಕೆಗಳು ಲಭ್ಯವಾಗಲಿವೆ. ಅಂದು ಆಪ್ ಅನ್ನು ಅಪ್ಡೇಟ್ ಮಾಡಿಕೊಳ್ಳಬಹುದು ಎಂದು ವಾಟ್ಸಾಪ್ ತಿಳಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel