ಜಾಗತೀಕ ಜೀವನದ ನಿತ್ಯ ಜಂಜಾಟದಲ್ಲಿ ಸಂವಹನ ಮಾಧ್ಯಮಗಳು ನಮ್ಮ ಅವಿಭಾಜ್ಯ ಅಂಗವಾಗಿದೆ. ಇವುಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸಂದೇಶ ರವಾನೆಯ ಅಪ್ಲಿಕೇಶನ್ ವಾಟ್ಸಾಪ್‍ನ ಜಾಗತಿಕ ಬಳಕೆದಾರರ ಸಂಖ್ಯೆ ಇನ್ನೂರು ಕೋಟಿ ತಲುಪಲಿದೆ ಎಂದು ಫೇಸ್‍ಬುಕ್ ಹೇಳೀದೆ.
ಈಗಾಗಲೇ ಜಗತ್ತಿನಾದ್ಯಂತ ವಾಟ್ಸ್ ಆಪ್ ಬಳಕೆದಾರರ ಸಂಖ್ಯೆ ಶತಕ ದಾಟಿದೆ. ಇದೀಗ ವಾಟ್ಸಪ್, 2 ಶತಕೋಟಿ ಬಳಕೆದಾರರ ಸಂಖ್ಯೆಯನ್ನು ದಾಟಿತ್ತರುವುದು ಎಲ್ಲರ ನಿಬ್ಬೆರಗಾಗಿಸಿದೆ. ಈ ಮೂಲಕ ವಾಟ್ಸಾಪ್ ವಿಶ್ವದ ಎರಡನೇ ಸಾಮಾಜಿಕ ಮಾಧ್ಯಮ ವೇದಿಕೆ ಹೊರಹೊಮ್ಮಿದೆ. ಸದ್ಯ ಅಂತ್ಯದ 2019ರ ಅಂತ್ಯದ ವೇಳೆಗೆ ಪ್ರತಿ ತಿಂಗಳು 2.5 ಶತಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿದೆ ಎಂದು ಮಾತೃ ಕಂಪನಿ ಫೇಸ್ ಬುಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
2014 ರಲ್ಲಿ ವಾಟ್ಸಪ್ ಅನ್ನು 19 ಶತಕೋಟಿ ಡಾಲರ್‍ಗೆ ಫೇಸ್‍ಬುಕ್ ಖರೀದಿಸಿತ್ತು. 2016 ರಲ್ಲಿ 1 ಶತಕೋಟಿ ಬಳಕೆದಾರರನ್ನು ಹೊಂದಿದ್ದ ವಾಟ್ಸಪ್, ಎರಡು ವರ್ಷಗಳಲ್ಲಿ ಬಳಕೆದಾರರ ಸಂಖ್ಯೆಯನ್ನು 1.5 ಶತಕೋಟಿಗೆ ಹೆಚ್ಚಿಸಿಕೊಂಡಿತ್ತು. ಹೊಸ ತಂತ್ರಜ್ಞಾನದಿಂದ ವಾಟ್ಸಪ್ ಮೂಲಕ ಕಳುಹಿಸುವ ಮಾಹಿತಿ ಸುರಕ್ಷಿತವಾಗಿರುತ್ತದೆ. ಕನ್ನ ಹಾಕುವವರು ಮತ್ತು ಅಪರಾಧಿಗಳಿಂದ ವಾಟ್ಸಪ್ ಸಂದೇಶವನ್ನು ರಕ್ಷಿಸಲು ಈ ತಂತ್ರಜ್ಞಾನ ಸಹಾಯ ಮಾಡಲಿದೆ ಎಂದು ಫೇಸ್ ಬುಕ್ ತಿಳಿಸಿದೆ.








