Wheet : ಗೋದಿ ದರದಲ್ಲಿ ಇಳಿಕೆ ಜನರಿಗೆ ಕೊಂಚ ರಿಲೀಫ್..!!
ಪ್ರಸ್ತುತ ಯಾವ ದಿನ ಬಳಕೆ ವಸ್ತು ನೋಡಿದರ ದರ ಏರಿಕೆಯಾಗುತ್ತಿದ್ದು ಸಾಮಾನ್ಯ ಜನರ ಜೀವನ ಕಷ್ಟವಾಗಿದೆ.. ಈ ನಡುವೆ ಕೊಂಚ ಜನರಿಗೆ ಖುಷಿ ಸಿಕ್ಕಿದೆ..
ಮುಂದಿನ 6 ತ್ರೈಮಾಸಿಕ ವಾರದಲ್ಲಿ ಮುಕ್ತ ಮಾರುಕಟ್ಟೆಗೆ 30 ಲಕ್ಷ ಮೆಟ್ರಿಕ್ ಟನ್ ಗೋಧಿ ಬಿಡುಗಡೆ ಮಾಡಲು ಭಾರತೀಯ ಆಹಾರ ನಿಗಮ ಟೆಂಡರ್ ಕರೆದಿದೆ.. ಇದರ ಬೆನ್ನಲ್ಲೇ ಗೋಧಿ ದರದಲ್ಲಿ ಕೊಂಚ ಇಳಿಕೆಯಾಗಿದೆ..
ಎರಡು ದಿನಗಳ ಹಿಂದಷ್ಟೇ ದೇಶದಾದ್ಯಂತ ಮಾರುಕಟ್ಟೆಗಳಲ್ಲಿ ಗೋಧಿ ಮತ್ತು ಗೋಧಿ ಹಿಟ್ಟಿನ ದರ ದಶಕದ ಗರಿಷ್ಠ ಮಟ್ಟ ತಲುಪಿದ್ದು, ಕ್ವಿಂಟಲ್ಗೆ 2,950 ರೂ. ಆಗಿತ್ತು. ಶುಕ್ರವಾರ ಸಂಜೆ ವೇಳೆಗೆ ಮಧ್ಯ ಪ್ರದೇಶ, ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನದ ಮಂಡಿಗಳಲ್ಲಿ ಗೋಧಿ ದರ ಶೇ 10ರಷ್ಟು ಇಳಿಕೆಯಾಗಿದೆ.







