ಬಾಲಯ್ಯನ ‘ಅಖಂಡ’ OTT ಯಲ್ಲಿ ಯಾವಾಗ..??
ಹೈದ್ರಾಬಾದ್ : ನಂದಮುರಿ ಬಾಲಕೃಷ್ಣ ಅವರ ಅಭಿನಯದ ಅಖಂಡ ಸಿನಿಮಾ ಡಿಸೆಂಬರ್ 2 ರಂದು ರಿಲೀಸ್ ಆಗಿ ಬಿಗ್ ಸಕ್ಸಸ್ ಕಂಡಿದ್ದು , ಥಿಯೇಟರ್ ಗಳಲ್ಲಿ ಧೂಳೆಬ್ಬಿಸಿದೆ.. ಈ ನಡುವೆ ಅಭಿಮಾನಿಗಳು ಸಿನಿಮಾ ಒಟಿಟಿಗೆ ಯಾವಾಗ ಬರುತ್ತೆ ಅಂತ ಎದುರುನೋಡ್ತಿದ್ದಾರೆ..
ನಂದಮೂರಿ ಬಾಲಕೃಷ್ಣ – ನಿರ್ದೇಶಕ ಬೋಯಪಾಟಿ ಶ್ರೀನು ಕಾಂಬಿನೇಷನ್ ನ ಈ ಸಿನಿಮಾ ಬ್ಲಾಕ್ ಬಾಸ್ಟರ್ ಆಗಿದ್ದು ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದೆ.. ತೆಲುಗು ರಾಜ್ಯಗಳಲ್ಲಿ ಚಿತ್ರಕ್ಕೆ ದಾಖಲೆಯ ಓಪನಿಂಗ್ಸ್ ಸಿಕ್ಕಿತ್ತು. ಮೊದಲ ವಾರದಲ್ಲಿ ರೂ. ಅಖಂಡ 88 ಕೋಟಿ ಒಟ್ಟು ಕಲೆಕ್ಷನ್ ಮಾಡಿದೆ. ಇದು 2021 ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗು ಚಿತ್ರ ಎಂಬ ದಾಖಲೆಯನ್ನು ಹೊಂದಿದೆ. ಈ ಚಿತ್ರವು 32 ದಿನಗಳಲ್ಲಿ ಪವನ್ ಕಲ್ಯಾಣ್ ಅಭಿನಯದ ವಕೀಲ್ ಸಾಬ್ ಬಾಕ್ಸ್ ಆಫೀಸ್ ಆದಾಯವನ್ನು ಮೀರಿಸಿದೆ.
ಅಂದ್ಹಾಗೆ ಪ್ರಮುಖ OTT ಕಂಪನಿ ಡಿಸ್ನಿ + ಹಾಟ್ ಸ್ಟಾರ್ ಸಂಪೂರ್ಣ ಚಿತ್ರದ ಪ್ರಸಾರ ಹಕ್ಕುಗಳನ್ನು ಬಿಡುಗಡೆಗೂ ಮುನ್ನವೇ ಪಡೆದುಕೊಂಡಿದೆ. ಒಟಿಟಿ ಹಕ್ಕುಗಳಿಗಾಗಿ ಚಿತ್ರವು 20 ಕೋಟಿ ರೂಪಾಯಿಗಳನ್ನು ಪಾವತಿಸಿದೆ ಎಂದು ಹೇಳಲಾಗಿತ್ತು. ಇದೀಗ ಜನವರಿ 21 ರಿಂದ OTT ಪ್ಲಾಟ್ ಫಾರ್ಮ್ ನಲ್ಲಿ ಸ್ಟ್ರೀಮಿಂಗ್ ಆಗಲಿದೆ.. ಡಿಸ್ನಿ + ಹಾಟ್ಸ್ಟಾರ್ ಈ ಬಗ್ಗೆ ಟ್ವೀಟ್ ಮಾಡಿದೆ. ‘ಜನವರಿ 21, 2022 ರಂದು ಅಖಂಡ ಪ್ರೀಮಿಯರ್ ಆಗಲಿದೆ ಎಂದು ನಿಮಗೆ ತಿಳಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಲಾಗಿದೆ..