ಡಿಸಿಎಂ ಡಿ.ಕೆ.ಶಿವಕುಮಾರ್ ರಾಜಕೀಯದಲ್ಲಿ ಅತಿಯಾಗಿ ಮಹಾತ್ವಾಕಾಂಕ್ಷೆ ತೋರಿದುದರಿಂದ ಸಿಎಂ ಸ್ಥಾನಕ್ಕೆ ಹತ್ತಲು ಸೊಗಸಾದ ವೇದಿಕೆ ಸಿದ್ದಮಾಡಿಕೊಳ್ಳುವ ಬದಲು, ತಾವೇ ನಂಬಿಕೆ ಕಳೆದುಕೊಳ್ಳುವಂತಹ ರಾಜಕೀಯ ತಪ್ಪುಗಳನ್ನು ಮಾಡುತ್ತಿದ್ದಾರೆ. ಈ ಶಕ್ತಿಯ ಹೋರಾಟದಲ್ಲಿ, ತಾಳ್ಮೆಯ ಕೊರತೆ ಹಾಗೂ ಅನಾವಶ್ಯಕ ಆತುರ ಡಿಕೆಶಿಗೆ ಹಿನ್ನಡೆಯಾಗುತ್ತಿದೆ. ಯಾಕಂದ್ರೆ ರಾಜ್ಯದಲ್ಲಿ ಮತ್ತೆ ಅಧಿಕಾರ ಹಂಚಿಕೆ ವಿಷಯ ಚರ್ಚೆಯಾಗುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಸಿದ್ದರಾಮಯ್ಯ, ಪಡೆದುಕೊಳ್ಳಲು ಡಿಕೆ ಶಿವಕುಮಾರ್ ಪಟ್ಟು ಹಾಕುತ್ತಿದ್ದಾರೆ. ಸದ್ಯದ ಬೆಳವಣಿಗೆಗಳು ಚತುರ ರಾಜಕಾರಣಿ ಸಿದ್ದರಾಮಯ್ಯ ಈ ಸಲವೂ ಮೇಲುಗೈ ಸಾಧಿಸಿರುವುದನ್ನು ಸಾರಿ ಹೇಳುತ್ತಿವೆ. ಸಿದ್ದರಾಮಯ್ಯ ಗೆದ್ದಿದ್ದಾರೆ ಎನ್ನುವುದಕ್ಕಿಂತ ಮಿಗಿಲಾಗಿ ಡಿಕೆ ಶಿವಕುಮಾರ್ ಅವಸರಪಟ್ಟು ಅವಾಂತರ ಸೃಷ್ಟಿಸಿಕೊಂಡಂತೆ ಕಾಣುತ್ತಿದೆ.
ಸಿಎಂ ಕುರ್ಚಿಯ ಕುರಿತಾಗಿ ಬಂಡೆ ಡಿಕೆಶಿ
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಸಿಎಂ ಹಂಚಿಕೆ ಒಪ್ಪಂದದ ಬಗ್ಗೆ ಜಗಳ ಹೊಸತೇನಲ್ಲ. ಆದರೆ, ಈ ಸೀಟಿನ ವಿಚಾರವನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಬೇಕಾದ್ದಲ್ಲದೆ, ಶಾಸಕರ ವಿಶ್ವಾಸವೂ ಮುಖ್ಯವಾದ ಅಂಶ. ಸಿದ್ದರಾಮಯ್ಯ ಇದನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಶ್ರೇಯಸ್ಸು ಸಾಧಿಸುತ್ತಿದ್ದಾರೆ, ಆದರೆ ಡಿಕೆ ಈ ಆಟದಲ್ಲಿ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ.
ದಲಿತ ನಾಯಕರನ್ನು ವಿರೋಧಿಗಳನ್ನಾಗಿ ಮಾಡಿದ್ದು ಹೇಗೆ?
ಡಿನ್ನರ್ ಮೀಟಿಂಗ್ ಪ್ರಕರಣವೇ ಇದಕ್ಕೆ ಸಾಕ್ಷಿ. ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಡಿನ್ನರ್ ಪಾರ್ಟಿ ಡಿಕೆಶಿಗೆ ಪ್ಲಾನ್ ದಾಳಿ ಎಂದು ಭಾಸವಾಗಿದ್ದು, ಮೀಟಿಂಗ್ನ್ನ ಕ್ಯಾನ್ಸಲ್ ಮಾಡ್ಸಿದ್ರು.. ಬದಲಿಗೆ ಈ ಸಭೆಯನ್ನು ನಡೆಸಿದರೆ, ಡಿಕೆ ಅವರ ಪಕ್ಷದೊಳಗಿನ ಒಗ್ಗಟ್ಟಿಗೆ ಸಹಕರಿಸಬಹುದಿತ್ತು. ಇದರಿಂದ ಡಿಕೆ ಗಳಿಸಿದ್ದೇನು..? ಯುದ್ಧ ಗೆದ್ದರಾ..? ಕಿರೀಟ ಬಂತಾ..? ಸಿಎಂ ಆದ್ರಾ..? ಏನೂ ಇಲ್ಲ.. ಬದಲಿಗೆ ಕಾಂಗ್ರೆಸ್ ದಲಿತ ನಾಯಕರ ವಿರೋಧವನ್ನ ಕಟ್ಟಿಕೊಂಡ್ರು ಅಷ್ಟೆ.. ಅಲ್ಲ ಒಮ್ಮೆ ಸೂಕ್ಷ್ಮವಾಗಿ ನೀವೇ ಥಿಂಕ್ ಮಾಡಿ… ದಲಿತ ಸಚಿವರು ಮತ್ತು ಶಾಸಕರ ಸಭೆ ಅಥವಾ ಔತಣಕೂಟ ನಡೆದಿದ್ದರೆ ಇಷ್ಟೊತ್ತಿಗೆ ಅದು ಕೂಡ ಕಾಲಗರ್ಭ ಸೇರಿರುತ್ತಿತ್ತು. ತಡೆದದ್ದರಿಂದ ವಿಷಯವಿನ್ನೂ ಜೀವಂತವಾಗಿದೆ. ದಮನಿತರು ಒಗ್ಗೂಡುವುದನ್ನು ತಡೆದ ಅಪಕೀರ್ತಿ ಅರ್ಥಾತ್ ದಲಿತ ನಾಯಕರ ವಿರೋಧಿ ಅನ್ನೋ ಪಟ್ಟ ಡಿಕೆಶಿ ಹೆಗಲೇರಿ ಕೂತಿದೆ. ಡಿನ್ನರ್ ಮೀಟಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಆಕ್ರೋಶಗೊಂಡಿರುವ ಪರಿಶಿಷ್ಟ ಜಾತಿ-ಪಂಗಡದ ಸಚಿವರು, ಶಾಸಕರು ಸಭೆ ಮಾಡಿಯೇ ತಿರುತ್ತೇವೆ ಎಂದು ತಿರುಗೇಟು ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ
ಪರಮೇಶ್ವರ್ ಮತ್ತು ಇತರ ಹಿರಿಯರ ವಿರೋಧ
ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಮತ್ತು ಎಂ.ಬಿ.ಪಾಟೀಲ್ ಡಿಕೆಶಿ ವಿರುದ್ಧ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅವರೆಲ್ಲ ಸಿದ್ದರಾಮಯ್ಯನ ಪರವಾದಂತೆ ತೋರುತ್ತಿದ್ದಾರೆ. ಇದೇ ಸಂದರ್ಭದಲ್ಲಿ, ಡಿಕೆಶಿ ಈ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತಂದುಕೊಳ್ಳಬೇಕಾಗಿತ್ತು, ಆದರೆ ಅವರ ನಡೆಗಳನ್ನು ವಿರೋಧಿಸೋ ದಿಕ್ಕಿಗೆ ಹೊತ್ತೊಯ್ದಿದ್ದಾರೆ.
ಇದರಿಂದ ಇಷ್ಟು ದಿನಗಳ ಕಾಲ ಸಾಫ್ಟ್ ಆಗಿದ್ದ ಪರಮೇಶ್ವರ್, ರೆಬಲ್ ಆಗಿ ಬಹಿರಂಗವಾಗಿಯೇ ಡಿ.ಕೆ.ಶಿವಕುಮಾರ್ಗೆ ಟಾಂಟ್ ಮಾಡ್ತಿದ್ದಾರೆ. ಜೊತೆಗೆ ಡಿಕೆ ನಡೆಯಿಂದ ಇಷ್ಟು ದಿನಗಳ ಕಾಲ ತಮ್ಮ ತಮ್ಮಲ್ಲೇ ಕತ್ತಿ ಮಸಿಯುತ್ತಾ ಇದ್ದ ದಲಿತ ನಾಯಕರು, ಡಿಕೆ ಕಾರಣಕ್ಕಾಗಿ ಪರಂ ಪರವಾಗಿ ನಿಂತಿದ್ದಾರೆ..
ಸಿದ್ದರಾಮಯ್ಯರ ರಾಜಕೀಯ ತಂತ್ರಗಳು ಮತ್ತು ಡಿಕೆಶಿಯ ಸೋಲು
ಈ ಹಿಂದೆ 2013 ಅಥವಾ 2023ರಲ್ಲಿ ಮುಖ್ಯಮಂತ್ರಿ ವಿಷಯ ಪ್ರಸ್ತಾಪ ಬಂದಾಗೆಲ್ಲಾ ಸಿದ್ದರಾಮಯ್ಯ ಹೇಳುತ್ತಿದ್ದುದು ಒಂದೇ ಮಾತು; ಶಾಸಕರು ಯಾರನ್ನು ನಾಯಕ ಎಂದು ಒಪ್ಪಿಕೊಳ್ಳುತ್ತಾರೋ ಅವರೇ ಸಿಎಂ ಅಂತಾ.. ಅಂದ್ರೆ ಶಾಸಕರ ವಿಶ್ವಾಸ ಪಡೆದವರೇ ಸಿಎಂ ಆಗ್ತಾರೆ ಅಂತಾ ಪದೇ ಪದೇ ಹೇಳ್ತಾ ಇದ್ರು.. ಅದೂ ಡಿ.ಕೆ.ಶಿವಕುಮಾರ್ಗೂ ಗೊತ್ತಿದೆ. ಆದ್ರೆ ಅವ್ರು ಅದನ್ನ ಫಾಲೋ ಮಾಡ್ತಿಲ್ಲ.. ಬದಲಿಗೆ ಅವರದ್ದೇ ಪಟಾಲಂ ಕಟ್ಕೊಂಡು.. ಒಂದಿಷ್ಟು ಮಂದಿಯನ್ನ ಮಾತ್ರ ಹಿಂದೆ ಹಾಕ್ಕೊಂಡಿದ್ದಾರೆ.. ಅವ್ರು ಕೂಡ ಬೆರಳೆಣಿಯಷ್ಟು ಮಂತ್ರ ಇದ್ದಾರೆ. ಹಾಗೇ ನೋಡಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ವಿರುದ್ಧ ಸಮರ ಸಾರೋಕೆ ಮೊದಲು ಮಾಡ್ಬೇಕಾಗಿದ್ದು, ಎಲ್ಲರ ವಿಶ್ವಾಸ ಗಳಿಸೋದು.. ಡಿ.ಕೆ.ಶಿವಕುಮಾರ್ ಮಾತ್ ಎತ್ತಿದ್ದರೇ ಮಹಾಭಾರತದ ಕಥೆ ಹೇಳ್ತಾರೆ.. ಧರ್ಮರಾಯನ ಧರ್ಮ, ಭೀಮನ ಶಕ್ತಿ, ಅರ್ಜುನನ ಶೌರ್ಯ, ಕೃಷ್ಣನ ತಂತ್ರ.. ವಿಧುರ ಬುದ್ಧಿ ಬಗ್ಗೆ ಮಾತಾಡ್ತಾರೆ.. ಆದ್ರೆ ಅಷ್ಟೆಲ್ಲಾ ಹೇಳೋ.. ಅಥವಾ ಅಷ್ಟೆಲ್ಲಾ ಗೊತ್ತಿರೋ ಡಿ.ಕೆ.ಶಿವಕುಮಾರ್ಗೆ ಯುದ್ಧಕ್ಕು ಮೊದ್ಲು ಬೇರೆ ಬೇರೆ ರಾಜರ, ಸೈನಿಕರ ವಿಶ್ವಾಸ ಪಡೀಬೇಕು ಅಂತಾ ಕಾಣಿಸ್ತುತ್ತೆ..
ಸದಾ ವಿಧುರನ ಯುದ್ಧ ನೀತಿ ಬಗ್ಗೆ ಮಾತನಾಡುವ ಡಿ.ಕೆ.ಶಿವಕುಮಾರ್ ಯುದ್ಧ ಘೋಷಣೆಗೂ ಮುನ್ನ ಮಂತ್ರಿಗಳನ್ನು ವಿಶ್ವಾಸಕ್ಕೆ ಪಡೆಯಬೇಕೆಂಬುದನ್ನೇ ಮರೆತಿದ್ದಾರೆ. ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್ ಅವರಂತಹ ಹಿರಿಯರನ್ನು ವಿಶ್ವಾಸಕ್ಕೆ ಪಡೆಯುವುದಿರಲಿ, ವೈರಿಗಳಂತೆ ಕಾಣುತ್ತಿದ್ದಾರೆ. ಹಾಗ್ ನೋಡಿದ್ರೆ ಡಿ.ಕೆ.ಶಿವಕುಮಾರ್ ನಿಜವಾಗ್ಲೂ ತಲೆ ಇಟ್ಟು ಯೋಚ್ನೆ ಮಾಡಿದ್ದರೇ, ದಲಿತ ಸಮುದಾಯದ ವಿಶ್ವಾಸ ಗಳಿಸಬಹುದಿತ್ತು.. ಆದ್ರೆ ಆ ಅವಕಾಶವನ್ನ ಅವರೇ ತಮ್ಮ ಕೈಯಾರೇ ಕೈ ಚೆಲ್ಲಿದ್ದಾರೆ.. ಯಾಕಂದ್ರೆ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಮೊದಲಿಂದಲೂ ಹಾವು ಮುಂಗುಸಿಯಂತೆ ಇದ್ದವರೇ.. 2013ರಲ್ಲಿ ತನ್ನ ಸೋಲಿಗೆ ಕಾರಣರಾದರೆಂದು ಸಿದ್ದರಾಮಯ್ಯ ವಿರುದ್ಧ ಕತ್ತಿ ಮಸೆಯುತ್ತಿದ್ದರು ಪರಮೇಶ್ವರ್. ಪರಮೇಶ್ವರ್ ಒಬ್ಬರ ವಿಶ್ವಾಸ ಗಳಿಸಿದ್ದರೂ ಇವತ್ತು ಸಿದ್ದರಾಮಯ್ಯ ಉರುಳಿಸುತ್ತಿರುವ ‘ದಲಿತ ಸಿಎಂ’ ದಾಳವನ್ನು ಡಿಕೆಶಿ ತನ್ನದಾಗಿಸಿಕೊಳ್ಳಬಹುದಿತ್ತು. ತಾನು ಸಿಎಂ ಆಗದಿದ್ದರೂ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಆಟ ಹೂಡಬಹುದಿತ್ತು. ಯಶಸ್ವಿಯಾಗಿದ್ದರೆ ದಲಿತ ಸಿಎಂ ಮಾಡಿದೆ ಎಂಬ ಕಿರೀಟಧಾರಿ ಆಗಬಹುದಿತ್ತು. ಆದ್ರೆ ಅಂತಹ ಅವಕಾಶವನ್ನ ಮಿಸ್ ಮಾಡಿಕೊಂಡಿದ್ದಾರೆ. .
ಬೇರೆ ದಿಕ್ಕಿನಲ್ಲಿ ತೆರಳಿದ ಕನಸು
ಡಿಕೆಶಿಯ ಸಿಎಂ ಕನಸು “ತಾಳ್ಮೆ ಮತ್ತು ಸಮರ ನೀತಿಯ” ಕೊರತೆಯಿಂದ ಮಾತ್ರವಲ್ಲ, ಅವರ ಬೆಂಬಲದ ಕೊರತೆಯಿಂದಲೂ ಕನಸಾಗಿಯೇ ಉಳಿಯುವ ಸಾಧ್ಯತೆಗಳಿವೆ. ಈ ಹೋರಾಟದಲ್ಲಿ ದಲಿತ ಸಮುದಾಯದ ಮೌಲ್ಯ ಮತ್ತು ಕಾಂಗ್ರೆಸ್ ಶಾಸಕರ ವಿಶ್ವಾಸ ಕಳೆದುಕೊಂಡಿರುವುದು ಅವರಿಗೆ ದೊಡ್ಡ ಹಿನ್ನಡೆ. ಶಾಸಕರು ಯಾರನ್ನು ಒಪ್ಪಿಸುತ್ತಾರೋ ಅವರು ಸಿಎಂ” ಎನ್ನುವ ಸಿದ್ದರಾಮಯ್ಯನ ಸೂತ್ರ ಪಕ್ಷದೊಳಗಿನ ಭರವಸೆಯ ಸೂತ್ರವಾಗಿದ್ದು, ಡಿಕೆ ಈ ಮಾರ್ಗವನ್ನು ಅನುಸರಿಸುತ್ತಿಲ್ಲ.
ಜೊತೆಗಿರುವವರ ವಿಶ್ವಾಸ ಗಳಿಸದೆ ಹೈಕಮಾಂಡ್ ಮೂಲಕ ಮುಖ್ಯಮಂತ್ರಿ ಆಗುತ್ತೇನೆ ಎನ್ನುವುದು ರಾಹುಲ್ ಗಾಂಧಿ ಕಾಲದಲ್ಲಿ ಕಷ್ಟ. ಅದು ಡಿಕೆಶಿಗೆ ಯಾಕೆ ಅರ್ಥವಾಗುತ್ತಿಲ್ಲವೋ ಗೊತ್ತಿಲ್ಲ. ಇದ್ರ ಜೊತೆಗೆ ಡಿ.ಕೆ.ಶಿವಕುಮಾರ್ ಮೇಲೆ ಕಾಂಗ್ರೆಸ್ ಶಾಸಕರಿಗೇ ವಿಶ್ವಾಸವಿಲ್ಲ.. ಯಾಕಂದ್ರೆ ಡಿ.ಕೆ.ಶಿವಕುಮಾರ್ ಅವ್ರು ಅಧಿಕಾರದಲ್ಲಿದ್ದರೇ ಯಾರ ಮಾತನ್ನೂ ಕೇಳಲ್ಲ.. ಸರ್ವಾಧಿಕಾರಿ ರೀತಿಯಲ್ಲಿ ವರ್ತಿಸ್ತಾರೆ.. ಹೀಗಾಗಿ ಡಿಕೆಶಿಯನ್ನು ನಿಯಂತ್ರಿಸಲು ರಾಜ್ಯದಲ್ಲಿ ಇಬ್ಬರಿಂದ ಮಾತ್ರ ಸಾಧ್ಯ. ಒಂದು ಸಿದ್ದರಾಮಯ್ಯ, ಇನ್ನೊಂದು ಮಲ್ಲಿಕಾರ್ಜುನ ಖರ್ಗೆ. ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ರಾಜಕಾರಣಕ್ಕೆ ಬರುವ ಸಾಧ್ಯತೆಗಳಿಲ್ಲ. ಹಾಗಾಗಿ ಸಿದ್ದರಾಮಯ್ಯ ಮುಂದುವರೆಯಲಿ ಎನ್ನುವ ಕೂಗು ಇನ್ನೂ ಹೆಚ್ಚಾಗಬಹುದು! ಅಲ್ಲಿಗೆ ಈ ಅವಧಿಯಲ್ಲಿ ಡಿಕೆ ಸಿಎಂ ಕನಸು ಕನಸಾಗಿಯೇ ಇರ್ಬೋದು..








