ಬಿಕಿನಿ, ಘೂಂಗ್ಹಟ್, ಒಂದು ಜೋಡಿ ಜೀನ್ಸ್ ಅಥವಾ ಹಿಜಾಬ್ ಧರಿಸುವ ಹಕ್ಕು ಮಹಿಳೆಗೆ ಇದೆ: ಪ್ರಿಯಂಕಾ ಗಾಂಧಿ Saaksha Tv
ನವದೆಹಲಿ: ಮಹಿಳೆ ತಾನು ಯಾವ ಬಟ್ಟೆ ಧರಿಸಬೇಕು ಎಂದು ನಿರ್ಧರಿಸುವ ಹಕ್ಕು ಮಹಿಳೆಗೆ ಇದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಟ್ವೀಟ್ ಮಾಡಿದ್ದಾರೆ.
ಮಹಿಳೆಯರು ತಮಗೆ ಇಷ್ಟವಾದ ಬಟ್ಟೆಗಳನ್ನು ಧರಿಸಬಹುದು. ಮಹಿಳೆಯರು ಬಿಕಿನಿ, ಘೂಂಗ್ಹಟ್, ಒಂದು ಜೋಡಿ ಜೀನ್ಸ್ ಅಥವಾ ಹಿಜಾಬ್ ಧರಿಸವ ಹಕ್ಕನ್ನು ಭಾರತೀಯ ಸಂವಿಧಾನ ನೀಡಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ,
ಉತ್ತರ ಪ್ರದೇಶದ ಮಹಿಳಾ ಸಬಲೀಕರಣದ ಕಾಂಗ್ರೆಸ್ ಚುನಾವಣಾ ಘೋಷವಾಕ್ಯ ‘ಲಡ್ಕಿ ಹೂ ಲಾಡ್ ಸಕ್ತಿ ಹೂಂ’ ಜೊತೆಗೆ ಈ ವಿಷಯವನ್ನು ಪ್ರಿಯಾಂಕಾ ಜೋಡಿಸಿ, ಮಹಿಳೆಯರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ ಎಂದು ಹೇಳಿದರು.









