ಅರ್ಜುನ್ ತೆಂಡುಲ್ಕರ್ ಅವರನ್ನು ಖರೀದಿ ಮಾಡುವ ಐಪಿಎಲ್ ಫ್ರಾಂಚೈಸಿ ಯಾವುದು ?
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮಗ ಅರ್ಜುನ್ ತೆಂಡುಲ್ಕರ್ ಅವರನ್ನು ಯಾವ ಫ್ರಾಂಚೈಸಿ ಖರೀದಿ ಮಾಡಬಹುದು..?
ಈ ಪ್ರಶ್ನೆಗೆ ಮೊದಲ ಉತ್ತರ ಮುಂಬೈ ಇಂಡಿಯನ್ಸ್.. ಇದಕ್ಕೆ ಕಾರಣ ಸಚಿನ್ ತೆಂಡುಲ್ಕರ್ ಅನ್ನೋ ಟ್ಯಾಗ್ ಲೈನ್. ಅದನ್ನು ಬಿಟ್ಟು ಅರ್ಜುನ್ ತೆಂಡುಲ್ಕರ್ ಸ್ಥಳೀಯ ಆಟಗಾರ. ಮುಂಬೈ ನ ವಿವಿಧ ವಯೋಮಿತಿ ಟೂರ್ನಿಯಲ್ಲಿ ಆಡಿದ್ದಾರೆ. ಸ್ಥಳೀಯ ಆಟಗಾರ ಅನ್ನೋ ಮೀಸಲಾತಿಯೂ ಇದೆ.
ಹಾಗೇ ಸಚಿನ್ ತೆಂಡುಲ್ಕರ್ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದಾರೆ. ನಾಯಕನಾಗಿದ್ದಾರೆ. ಅದೇ ರೀತಿ ಕೋಚ್ ಹಾಗೂ ಮೆಂಟರ್ ಕೂಡ ಆಗಿದ್ದಾರೆ.
ಇನ್ನು ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಸಚಿನ್ ಒಡನಾಟವೂ ಇದೆ. ಹೀಗಾಗಿ ಸಚಿನ್ ತೆಂಡುಲ್ಕರ್ ಮಗ, ಅಂಬಾನಿ ಪ್ರಭಾವ, ಮುಂಬೈ ಆಟಗಾರನಾಗಿರುವುದರಿಂದ ಮುಂಬೈ ಇಂಡಿಯನ್ಸ್ ಖರೀದಿ ಮಾಡಬಹುದು ಅನ್ನೋ ಲೆಕ್ಕಚಾರವೂ ಇದೆ.
ಇನ್ನು ಮುಂಬೈ ಇಂಡಿಯನ್ಸ್ ಬಿಟ್ಟು ಬೇರೆ ಯಾವ ಫ್ರಾಂಚೈಸಿ ಖರೀದಿ ಮಾಡಬಹುದು ಅನ್ನೋ ಲೆಕ್ಕಚಾರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹೆಸರು ಕೇಳಿಬರುತ್ತಿದೆ.
ಯಾಕಂದ್ರೆ, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಯುವ ಆಟಗಾರರಿಗೆ ಅವಕಾಶ ನೀಡುತ್ತಾ ಬಂದಿದೆ. ಈಗಾಗಲೇ ಡೆಲ್ಲಿ ತಂಡ ತುಷಾರ್ ದೇಶಪಾಂಡೆ, ಮೊಹಿತ್ ಶರ್ಮಾ ಮತತ್ತು ಕೀಮೋ ಅವರನ್ನು ತಂಡದಿಂದ ಬಿಡುಗಡೆ ಮಾಡಿ ಹರ್ಷೆಲ್ ಪಟೇಲ್ ಮತ್ತು ಡೇನಿಯಲ್ ಸ್ಯಾಮ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇನ್ನುಳಿದಂತೆ ರಾಜಸ್ತಾನ ರಾಯಲ್ಸ್ ತಂಡ ಅರ್ಜುನ್ ತೆಂಡುಲ್ಕರ್ ಮೇಲೆ ಕಣ್ಣಿಟ್ಟಿದೆ. ರಾಜಸ್ತಾನ ರಾಯಲ್ಸ್ ಫ್ರಾಂಚೈಸಿ ಕೂಡ ಯುವ ಆಟಗಾರರಿಗೆ ಮಣೆ ಹಾಕುತ್ತಿದೆ.
ಇಲ್ಲಿ ಮುಖ್ಯವಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ತಾನದ ರಾಯಲ್ಸ್ ತಂಡದ ಕೋಚ್ ಹಾಗೂ ಮೆಂಟರ್ ಗಳಾಗಿರುವುದು ರಿಕಿ ಪಾಂಟಿಂಗ್ ಮತ್ತು ಶೇನ್ ವಾರ್ನ್. ಶೇನ್ ವಾರ್ನ್ ಮತ್ತು ಪಾಂಟಿಂಗ್ ಸಚಿನ್ ತೆಂಡುಲ್ಕರ್ ಗೆ ಮೈದಾನದಲ್ಲಿ ಬದ್ಧ ವೈರಿಗಳಾದ್ರೂ ಮೈದಾನದ ಹೊರಗಡೆ ಸ್ನೇಹಿತರೇ. ಈಗಾಗಲೇ ಅರ್ಜುನ್ ತೆಂಡುಲ್ಕರ್ ಮುಂಬೈ ಇಂಡಿಯನ್ಸ್ ನೆಟ್ಸ್ ನಲ್ಲಿ ಬೌಲಿಂಗ್ ಮಾಡಿದ್ದಂತಹ ಅನುಭವ ಇದೆ. ಅಲ್ಲದೆ ಡೆಲ್ಲಿ ಮತ್ತು ರಾಜಸ್ತಾನ ಫ್ರಾಂಚೈಸಿಗಳು ಅರ್ಜುನ್ ತೆಂಡುಲ್ಕರ್ ಅವರನ್ನು ಖರೀದಿ ಮಾಡಿದ್ರೆ ಮಾಜಿ ಆಟಗಾರರ ಅನುಭವನ್ನು ಪಡೆದುಕೊಳ್ಳುವಂತಾಗುತ್ತದೆ.
ಒಟ್ಟಿನಲ್ಲಿ ಅರ್ಜುನ್ ತೆಂಡುಲ್ಕರ್ ಕೇವಲ ಎರಡು ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಸಚಿನ್ ತೆಂಡುಲ್ಕರ್ ಮಗ ಅನ್ನೋದು ಒಂದು ಕಡೆಯಾದ್ರೂ ಅರ್ಜುನ್ ತೆಂಡುಲ್ಕರ್ ಆಲ್ ರೌಂಡ್ ಪ್ರದರ್ಶನ ನೀಡುತ್ತಾರೆ ಅನ್ನೋ ನಂಬಿಕೆ ಇದೆ.








