ಚೀನಾ ನಮ್ಮ ಪ್ರಜೆಗಳನ್ನು ಅಪಹರಿಸುತ್ತಿದ್ದರೆ, ಮೋದಿಜಿ ‘ಅಚ್ಛೇ ದಿನ್’ಗಾಗಿ ಕಾಯುತ್ತಿದ್ದಾರೆ: ರಾಹುಲ್ ಗಾಂಧಿ
ಗಡಿ ಪ್ರದೇಶಗಳಲ್ಲಿ ಚೀನಾದ ಆಕ್ರಮಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿಷ್ಕ್ರಿಯತೆಯನ್ನು ಖಂಡಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಟ್ವಿಟರ್ನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಹಿಂದಿಯ ಟ್ವೀಟ್ನಲ್ಲಿ, ಚೀನಾ ಮೊದಲು ಭಾರತದ ಭೂಮಿಯನ್ನು ಆಕ್ರಮಿಸಿಕೊಂಡಿದೆ ಮತ್ತು ಈಗ ಭಾರತೀಯ ನಾಗರಿಕರನ್ನು ಅಪಹರಿಸಿ ಚಿತ್ರಹಿಂಸೆ ನೀಡುತ್ತಿದೆ ಎಂದು ಹೇಳಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು “ಅಚ್ಛೇ ದಿನ್ ಸದ್ದಿಲ್ಲದೆ ಕಾಯುತ್ತಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.
“ಚೀನಾ ನಿರಂತರವಾಗಿ ಭಾರತೀಯರನ್ನು ಅಪಹರಿಸುತ್ತಿದೆ ಮತ್ತು ಕೇಂದ್ರವು ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಅರುಣಾಚಲ ಪ್ರದೇಶದ ಬಿಜೆಪಿ ಸಂಸದ ತಾಪಿರ್ ಗಾವೊ ಹೇಳಿರುವ ಸುದ್ದಿ ವೆಬ್ ಸೈಟ್ ವರದಿಯನ್ನ ರಾಹುಲ್ ಹಂಚಿಕೊಂಡಿದ್ದಾರೆ.
ಬುಧವಾರ ಲೋಕಸಭೆಯ ಸಂಸದ ತಪಿರ್ ಗಾವೊ ಅವರು, ”ಅರುಣಾಚಲ ಪ್ರದೇಶದ ಭಾರತೀಯ ಗಡಿಭಾಗದ ಗ್ರಾಮಸ್ಥರು ದೂರದ ಪರ್ವತ ಪ್ರದೇಶಗಳಿಗೆ ಬೇಟೆಯಾಡಲು, ಔಷಧೀಯ ಸಸ್ಯಗಳು, ಇತರ ಗಿಡಮೂಲಿಕೆಗಳು ಮತ್ತು ದೈನಂದಿನ ಅಗತ್ಯಗಳಿಗಾಗಿ ಭಾರತೀಯ ಪ್ರದೇಶದ ಅರಣ್ಯ ಪ್ರದೇಶಗಳಿಗೆ ಹೋಗುತ್ತಾರೆ. ಆದರೆ ಚೀನಾದ ಸೇನೆಗೆ ಆಗಾಗ್ಗೆ ಅವರನ್ನು ಅಪಹರಿಸಿ ಅವರ ಪ್ರದೇಶಗಳಿಗೆ ಕರೆದೊಯ್ಯುತ್ತಾರೆ. ಇದನ್ನು ನಿಲ್ಲಿಸಬೇಕು. ಭಾರತೀಯ ಅಧಿಕಾರಿಗಳು ಈ ವಿಷಯವನ್ನು ಪರಿಶೀಲಿಸಬೇಕು ಮತ್ತು ಚೀನಾದೊಂದಿಗಿನ ಗಡಿ ವಿವಾದವನ್ನು ಪರಿಹರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.” ಎಂದು ಹೇಳಿದ್ದಾರೆ.