ಅಕ್ಟೋಬರ್ 1 ರ ನಂತರ ವಾಹನ ಚಾಲನೆ ಮಾಡುವಾಗ
ಮೊಬೈಲ್ ಬಳಸಿದರೆ ಜೈಲು ಶಿಕ್ಷೆ ಗ್ಯಾರಂಟಿ
ಹೊಸದಿಲ್ಲಿ, ಸೆಪ್ಟೆಂಬರ್28: ವಾಹನ ಚಾಲನೆ ಮಾಡುವಾಗ ಚಾಲಕರು ಮೊಬೈಲ್ ಫೋನ್ ಅನ್ನು ಸಂಚರಣೆ(ನ್ಯಾವಿಗೇಷನ್) ಗಾಗಿ ಮಾತ್ರ ಬಳಸಬಹುದಾಗಿದೆ ಎಂದು ರಸ್ತೆ ಸಾರಿಗೆ ಸಚಿವಾಲಯ ಶುಕ್ರವಾರ ತಿಳಿಸಿದೆ. ದಾಖಲೆಗಳ ಸುಗಮ ಪರಿಶೀಲನೆ ಮತ್ತು ಉಲ್ಲಂಘನೆಗಳ ವಿದ್ಯುನ್ಮಾನ ದಾಖಲಾತಿಗೆ ದಾರಿ ಮಾಡಿಕೊಟ್ಟ ಸಚಿವಾಲಯವು ಚಾಲನಾ ಪರವಾನಗಿ, ನೋಂದಣಿ, ವಿಮೆ ಮತ್ತು ಫಿಟ್‌ನೆಸ್ ಪ್ರಮಾಣಪತ್ರಗಳಂತಹ ಡಿಜಿಟಲ್ ದಾಖಲೆಗಳನ್ನು ಬಳಸಲು ಅನುಮತಿ ನೀಡಿದೆ.
ಈ ನಿಯಮಗಳು ಅಕ್ಟೋಬರ್ 1 ರಿಂದ ಜಾರಿಗೆ ಬರಲಿವೆ.
ಚಾಲನೆ ಮಾಡುವಾಗ ಮೊಬೈಲ್ ಫೋನ್‌ನ ಬಳಕೆಯನ್ನು ನಿರ್ದಿಷ್ಟಪಡಿಸಿದ ಸಚಿವಾಲಯದ ಅಧಿಸೂಚನೆಯು ವಾಹನ ಚಾಲಕರು ಪಥ ತಿಳಿಯಲು ಮಾತ್ರ ಮೊಬೈಲ್ ಬಳಕೆಗೆ ಅನುಮತಿಸಲಾಗುವುದು ಎಂದು ಹೇಳಿದೆ. ವಾಹನ ಚಾಲನೆ ಮಾಡುವಾಗ ನ್ಯಾವಿಗೇಷನ್ ಗಾಗಿ ಡ್ಯಾಷ್ಬೋರ್ಡ್ ಮೇಲೆ ಮೊಬೈಲ್ ಫೋನ್ ಇರಿಸಿರಬೇಕು ಮತ್ತು ಮೆಸೇಜ್ ಅಥವಾ ಮೊಬೈಲ್ ಕರೆ ಮಾಡುವಂತಿಲ್ಲ ಎಂದು ಅಧಿಸೂಚನೆಯಲ್ಲಿ ಸೂಚಿಸಿದೆ.

ಜಾಗತಿಕ ಅಧ್ಯಯನಗಳು ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸುವ ಚಾಲಕರು ಚಾಲನೆಯ ಸಮಯದಲ್ಲಿ ಅಪಘಾತದಲ್ಲಿ ಸಿಲುಕುವ ಸಾಧ್ಯತೆ ಸುಮಾರು ನಾಲ್ಕು ಪಟ್ಟು ಹೆಚ್ಚು ಮತ್ತು ಇದು ವಿಶೇಷವಾಗಿ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್‌ಗಳ ಬಳಕೆಯನ್ನು ತಿದ್ದುಪಡಿ ಮಾಡಿದ ಮೋಟಾರು ವಾಹನ ಕಾಯ್ದೆಯಲ್ಲಿ ಅಪಾಯಕಾರಿ ಚಾಲನಾ ವಿಭಾಗಕ್ಕೆ ಒಳಪಡಿಸಲಾಗಿದೆ. 5,000 ರೂ.ವರೆಗೆ ದಂಡ ಅಥವಾ ಒಂದು ವರ್ಷದವರೆಗೆ ಜೈಲು ಅಥವಾ ಎರಡನ್ನೂ ವಿಧಿಸುತ್ತದೆ.
ಎಲ್ಲ ಕ್ರಮಗಳ ಕುರಿತು ಡಿಜಿಟಲ್ ದಾಖಲಾತಿ ಯಿದ್ದರೆ ಭ್ರಷ್ಟಾಚಾರ ನಿಯಂತ್ರಣ ಸಾಧ್ಯ ಎಂದು ಕೇಂದ್ರ ರಸ್ತೆ ಸಚಿವಾಲಯದ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದು, ಅಕ್ಟೋಬರ್ 1 ರಿಂದ ದೇಶದಾದ್ಯಂತ ಏಕ ರೂಪದ ಡಿಎಲ್ ಮತ್ತು ಆರ್ಸಿ ನೀಡಲಾಗುತ್ತದೆ.








