ನವದೆಹಲಿ: ತನ್ನ ಪಕ್ಷದ ಎಲ್ಲಾ ಸಂಸದರಿಗೆ ವಿಪ್ ಜಾರಿ ಮಾಡಿರುವ ಬಿಜೆಪಿಯ ನಡೆ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಬಜೆಟ್ ಅಧಿವೇಶನದ ಕೊನೆ ದಿನವಾದ ಇಂದು ಸಂಸದರ ಕಡ್ಡಾಯ ಹಾಜರಾತಿಗೆ ಬಿಜೆಪಿ ಆದೇಶ ನೀಡಿದ್ದು, ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆಯಾಗಲಿದೆಯಾ ಎಂಬ ಅನುಮಾನ ಮೂಡುವಂತೆ ಮಾಡಿದೆ. ಇನ್ನೂ ಈ ಹಿಂದೆಯೇ ಬಿಲ್-೨೦೨೦ ಹೆಸರಿನಲ್ಲಿ ಮಸೂದೆ ಮಂಡನೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಬಿಲ್ ಮಂಡನೆ ಸಂಬಂಧ ಕಳೆದ ಶುಕ್ರವಾರವೇ ಶೆಡ್ಯೂಲ್ ಆಗಿತ್ತು, ಆದ್ರೆ ಆ ದಿನ ಬಹುತೇಕ ಸಂಸದರು ಗೈರಾಗಿದ್ದರಿಂದ ಇಂದು ಕಡ್ಡಾಯ ಹಾಜರಾತಿಗೆ ನಿರ್ಮಲಾ ಸೀತಾರಾಮನ್ ಸೂಚನೆ ನೀಡಿದ್ದಾರೆ. ಇನ್ನೂ ಕೂಡಲೇ ವಿಪ್ ಜಾರಿ ಮಾಡಿರೋ ನಡೆಯನ್ನು ಗಮನಿಸಿದ್ರೆ, ಜನಸಂಖ್ಯಾ ನಿಯಂತ್ರಣ, ಮೀಸಲಾತಿಗೆ ಸಂಬಂಧಿಸಿದಂತೆ ಮಸೂದೆ ಮಂಡನೆಯಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!
ಬೆಂಗಳೂರು: ರಾಜ್ಯ ಕಾಂಗ್ರೆಸ್ ವಲಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಮತ್ತು ಅಧಿಕಾರ ಹಸ್ತಾಂತರದ ಚರ್ಚೆಗಳು ಗರಿಗೆದರಿವೆ. ಕರ್ನಾಟಕದಲ್ಲಿ ಪ್ರಭಾವಿ ಸಿಎಂ ಇದ್ದಾರೆ, ಸದ್ಯಕ್ಕೆ ಸಿಎಂ ಹುದ್ದೆ ಖಾಲಿ...








