‘ಫೋರ್ಟ್ಸ್ ಮೋಸ್ಟ್ ಪವರ್ಫುಲ್ ವುಮೆನ್-2024’ ಪಟ್ಟಿ ಬಿಡುಗಡೆಯಾಗಿದ್ದು, ವಿಶ್ವದ 100 ಮಂದಿ ಮಹಿಳೆಯರನ್ನು ಅತ್ಯಂತ ಪ್ರಭಾವಿ ಮಹಿಳೆಯರನ್ನಾಗಿ ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ಮೂವರು ಭಾರತೀಯ ಮಹಿಳೆಯರು ಸ್ಥಾನ ಪಡೆದಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಂ.1 ಪವರ್ಫುಲ್ ಮಹಿಳೆಯಾಗಿ ಕಾಣಿಸಿಕೊಂಡಿದ್ದರೆ, ಇನ್ನುಳಿದಂತೆ HCL ಕಾರ್ಪೊರೇಷನ್ CEO ರೋಷನಿ ನಾಡಾರ್ ಮಲ್ಲೋತ್ರಾ & ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಮ್ಹಾರ್ ಷಾ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ದೆಹಲಿಗೆ ಪಾದಯಾತ್ರೆ : ರೈತರ ಮೇಲೆ ಅಶ್ರುವಾಯು, 8 ಮಂದಿ ಗಾಯ
ಹರಿಯಾಣ-ಪಂಜಾಬ್ ಗಡಿಯ ಶಂಭು ಪ್ರದೇಶದಲ್ಲಿ ದೆಹಲಿಯತ್ತ ಪಾದಯಾತ್ರೆಗೆ ತೆರಳಲು ಯತ್ನಿಸಿದ ರೈತರು ಹಾಗೂ ಪೊಲೀಸರು ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಮಧ್ಯಾಹ್ನ 12 ಗಂಟೆಗೆ ಆರಂಭವಾದ ಈ...