ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಅತಿ ಹೆಚ್ಚಿನ ಒತ್ತು ನೀಡಲು ನಿರ್ಧರಿಸಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು, ಬೆಂಗಳೂರಿನ ಸರ್ಜಾಪುರದಲ್ಲಿ `ಸ್ವಿಫ್ಟ್ ಸಿಟಿ’ ನಿರ್ಮಿಸಲು ಯೋಜನೆ ರೂಪಿಸಿದ್ದಾರೆ.
ಬೆಂಗಳೂರಿನಲ್ಲಿ 1000 ಎಕರೆ ಜಾಗದಲ್ಲಿ ನಿರ್ಮಿಸಲಾಗುತ್ತಿರುವ ಒಂದು ಅತ್ಯಾಧುನಿಕ ನಗರವೇ SWIFT City. ಇಲ್ಲಿ ನವೋದ್ಯಮಗಳು, ಕೆಲಸದ ಸ್ಥಳಗಳು, ಹಣಕಾಸು ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಇದರ ವಿಶೇಷತೆಗಳು ಏನು? ಇಲ್ಲಿದೆ ಕಂಪ್ಲೀಟ್ ಮಾಹಿತಿ
ಸಮಗ್ರ ಅಭಿವೃದ್ಧಿ: ಈ ನಗರವು ಕೇವಲ ಕಟ್ಟಡಗಳ ಸಮೂಹವಲ್ಲ. ಇದು ವಾಸ, ಕೆಲಸ, ಮನರಂಜನೆ ಮತ್ತು ಇತರ ಎಲ್ಲಾ ಅಗತ್ಯಗಳಿಗೆ ಒಂದೇ ಸ್ಥಳವಾಗಿರಲಿದೆ.
ನವೋದ್ಯಮಗಳಿಗೆ ಆಶ್ರಯ: ಹೊಸ ಆಲೋಚನೆಗಳನ್ನು ಬೆಳೆಸಲು ಮತ್ತು ಅವುಗಳನ್ನು ವಾಸ್ತವಕ್ಕೆ ತರಲು SWIFT City ಉತ್ತಮ ವೇದಿಕೆಯಾಗಲಿದೆ.
ಉತ್ತಮ ಸಂಪರ್ಕ: ಇಲ್ಲಿನ ಸಾರಿಗೆ ವ್ಯವಸ್ಥೆ ಅತ್ಯಾಧುನಿಕವಾಗಿರುತ್ತದೆ ಮತ್ತು ಇತರ ಭಾಗಗಳಿಗೆ ಸುಲಭ ಸಂಪರ್ಕವಿರುತ್ತದೆ.
ಹಸಿರು ತಂತ್ರಜ್ಞಾನ: ಪರಿಸರ ಸ್ನೇಹಿ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ನಗರವನ್ನು ನಿರ್ಮಿಸಲಾಗುತ್ತಿದೆ.
SWIFT City ನಿರ್ಮಾಣದಿಂದ ಯಾರಿಗೆ ಯಾವ ರೀತಿಯ ಪ್ರಯೋಜವಾಗಲಿದೆ..?
ಉದ್ಯೋಗ ಸೃಷ್ಟಿ: ಹೊಸ ಕಂಪನಿಗಳು ಮತ್ತು ಉದ್ಯಮಗಳು ಇಲ್ಲಿ ಬೆಳೆಯುವುದರಿಂದ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
ಆರ್ಥಿಕ ಬೆಳವಣಿಗೆ: ಈ ನಗರವು ಬೆಂಗಳೂರಿನ ಆರ್ಥಿಕ ಬೆಳವಣಿಗೆಗೆ ಹೊಸ ಆಯಾಮವನ್ನು ನೀಡಲಿದೆ.
ಜೀವನದ ಗುಣಮಟ್ಟದಲ್ಲಿ ಸುಧಾರಣೆ: ಇಲ್ಲಿ ವಾಸಿಸುವ ಜನರಿಗೆ ಉತ್ತಮ ಗುಣಮಟ್ಟದ ಜೀವನ ಸಿಗಲಿದೆ.
ಇದು ಬೆಂಗಳೂರಿನ ಭವಿಷ್ಯಕ್ಕೆ ಒಂದು ಪ್ರಮುಖ ಯೋಜನೆಯಾಗಿದೆ.