ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಆರಾಧ್ಯ ದೈವ. “ಡಿ ಬಾಸ್” ಗೆ ಸಿನಿಮಾ ಮಾತ್ರವಲ್ಲದೇ ಅದರ ಆಚೆಗೂ ದೊಡ್ಡ ಅಭಿಮಾನಿ ಬಳಗವಿದೆ. ಅವರು “ದಾಸ”ನ ಸಾಮಾಜಿಕ ಕಾರ್ಯಗಳನ್ನು ಮೆಚ್ಚಿ ಕೊಂಡಾಡುತ್ತಾರೆ. ಇದೀಗ ರಾಬರ್ಟ್ ನಾಯಕಿ ಆಶಾ ಭಟ್, ದರ್ಶನ್ ಅವರ ಗುಣಗಾನ ಮಾಡಿದ್ದಾರೆ.
https://www.facebook.com/c5ac42b1-8215-41cf-a0ec-65937c763cd8
ನಿನ್ನೆಯಷ್ಟೇ ಫೇಸ್ಬುಕ್ ಲೈವ್ ನಲ್ಲಿ ಆಶಾ ಕಾಣಿಸಿಕೊಂಡಿದ್ದು, ಅಭಿಮಾನಿಗಳೊಂದಿಗೆ ಚರ್ಚೆ ನಡೆಸಿದ್ದರು. ಈ ವೇಳೆ ದಚ್ಚು ಬಗ್ಗೆ ಅಭಿಮಾನಿಗಳು ಪ್ರಶ್ನೆಗಳನ್ನು ಕೇಳಿದ್ದಾರೆ.
ಅಭಿಮಾನಿ: ಡಿ ಬಾಸ್ ಬಗ್ಗೆ ಒಂದು ವರ್ಡ್..?
ಆಶಾ ಭಟ್: ದರ್ಶನ್ ಅವರು ಆಲ್ ರೌಂಡರ್ ಇದ್ದಂತೆ. ಅವರಿಗೆ ಯಾವ ವಿಷಯ ಗೊತ್ತಿಲ್ಲ ಅನ್ನುವಂತಿಲ್ಲ, ಎಲ್ಲವನ್ನೂ ತಿಳಿದುಕೊಂಡಿದ್ದಾರೆ. ಊಟ, ಟ್ರಾವೆಲ್, ಪ್ರಾಣಿಗಳು, ಟೆಕ್ನಾಲಜಿ ಎಲ್ಲ ಬಗ್ಗೆಯೂ ತಿಳಿದುಕೊಂಡಿದ್ದಾರೆ.
ಅಭಿಮಾನಿ: ಕನ್ನಡದಲ್ಲಿ ನಿಮ್ಮ ನೆಚ್ಚಿನ ನಟ ಯಾರು..?
ಆಶಾ ಭಟ್: ನನಗೆ ಮೊದಲಿನಿಂದಲೂ ಅಣ್ಣಾವ್ರು ತುಂಬಾ ಇಷ್ಟ. ಈಗ ದರ್ಶನ್ ಅವರು ಇಷ್ಟ ಆಗ್ತಾರೆ. ಸೆಟ್ನಲ್ಲಿ ಅವರು ತುಂಬಾ ಸಿಂಪಲ್ ಆಗಿರ್ತಾರೆ. ಅವರಿಂದ ತುಂಬಾ ಕಲಿತಿದ್ದೀನಿ ಎಂದು ಉತ್ತರಿಸಿದ್ದಾರೆ.