ಯಾರು ಈ ಸಾಯಿ ಸುದರ್ಶನ್…?
ಅನೇಕ ಯುವ ಪ್ರತಿಭೆಗಳಿಗೆ ಇಂಡಿಯನ್ ಪ್ರಿಮಿಯರ್ ಲೀಗ್ ವೇದಿಕೆಯಾಗಿದೆ. ಇಲ್ಲಿ ಮಿಂಚಿದ ಆಟಗಾರರು ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಧೂಳೇಬ್ಬಿಸುತ್ತಿದ್ದಾರೆ.
ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಇಶಾಂತ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಇದಕ್ಕೆ ಸ್ಪಷ್ಟ ಉದಾಹರಣೆ.
ಪ್ರಸಕ್ತ ಐಪಿಎಲ್ ಸೀಸನ್ ನಲ್ಲೂ ಯುವ ಆಟಗಾರರು ಬೆಳಕಿಗೆ ಬರುತ್ತಿದ್ದಾರೆ. ಈಗಾಗಲೇ ಆಯುಷ್ ಬಡೋನಿ, ವೈಭವ್ ಅರೋರಾ ಮತ್ತು ತಿಲಕ್ ವರ್ಮಾ ಅವರಂತಹ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಇದೀಗ ಮತ್ತೊಬ್ಬ ಯುವ ಸೆನ್ಸೇಷನ್ ಬೆಳಕಿಗೆ ಬಂದಿದ್ದಾರೆ. ಅವರೇ ಸಾಯಿ ಸುದರ್ಶನ್..
ಸಾಯಿ ಐಪಿಎಲ್ ಚೊಚ್ಚಲ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಸಾಯಿಸುದರ್ಶನ್ ಐಪಿಎಲ್-2022ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಶುಕ್ರವಾರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಶುಭ್ಮನ್ ಗಿಲ್ ಅವರೊಂದಿಗೆ ಸಾಯಿಸುದರ್ಶನ್ ನಿರ್ಣಾಯಕ ಇನ್ನಿಂಗ್ಸ್ ಆಡಿದರು.
ಇವರಿಬ್ಬರು ಮೂರನೇ ವಿಕೆಟ್ಗೆ 100 ರನ್ಗಳ ಜೊತೆಯಾಟ ನೀಡಿದರು.
ಈ ಪಂದ್ಯದಲ್ಲಿ 30 ಎಸೆತಗಳಲ್ಲಿ 35 ರನ್ ಗಳಿಸಿದ್ದ ಸಾಯಿ ಗುಜರಾತ್ ಗೆಲುವಿನಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಿದರು.
ಅವರ ಇನ್ನಿಂಗ್ಸ್ನಲ್ಲಿ 4 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿವೆ.
ಯಾರು ಈ ಸಾಯಿ ಸುದರ್ಶನ್?
ಸಾಯಿ ಸುದರ್ಶನ್ ಅವರು ಅಕ್ಟೋಬರ್ 15, 2001 ರಂದು ಚೆನ್ನೈನಲ್ಲಿ ಜನಿಸಿದರು.
ಸಾಯಿ ಸುದರ್ಶನ್ ದೇಶೀಯ ಪಂದ್ಯಾವಳಿಗಳಲ್ಲಿ ತಮಿಳುನಾಡು ಪರ ಆಡುತ್ತಾರೆ.
ಅವರು 2021 ರಲ್ಲಿ ಮುಂಬೈ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು.
ಸುದರ್ಶನ್ 2021 ರಲ್ಲಿ ಮಹಾರಾಷ್ಟ್ರ ವಿರುದ್ಧ T20ಗೆ ಪಾದಾರ್ಪಣೆ ಮಾಡಿದರು.
ಲಿಸ್ಟ್-ಎ ವೃತ್ತಿಜೀವನದಲ್ಲಿ ಇದುವರೆಗೆ 3 ಪಂದ್ಯಗಳನ್ನು ಆಡಿರುವ ಸುದರ್ಶನ್ 54 ರನ್ ಗಳಿಸಿದ್ದಾರೆ.
7 ಟಿ20 ಪಂದ್ಯಗಳಲ್ಲಿ 182 ರನ್ ಗಳಿಸಿದ್ದಾರೆ.
ಅವರು ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲಿ 87 ರನ್ ಗಳಿಸಿದರು.
ಸುದರ್ಶನ್ ತಮಿಳುನಾಡು ಪ್ರೀಮಿಯರ್ ಲೀಗ್-2021 ರಲ್ಲಿ ಒಟ್ಟು 8 ಪಂದ್ಯಗಳನ್ನು ಆಡಿದ್ದಾರೆ ಮತ್ತು 358 ರನ್ ಗಳಿಸಿದ್ದಾರೆ. Who Is Sai Sudharsan ipl 2022