ಮುಂಬಯಿ: ಮಹಾರಾಷ್ಟ್ರದ 288 ಕ್ಷೇತ್ರಗಳಿಗೆ ನಡೆದ ಚುನಾವಣೆ ಮುಕ್ತಾಯವಾಗಿದ್ದು, ಎಕ್ಸಿಟ್ ಪೋಲ್ ಬಹಿರಂಗವಾಗಿದೆ.
ಸಮೀಕ್ಷೆಯಲ್ಲಿ ಎನ್ಡಿಎ ಮೈತ್ರಿಕೂಟ ಮುನ್ನಡೆ ಸಾಧಿಸಿದ್ದು, ಮತ್ತೆ ಅಧಿಕಾರದ ಗದ್ದುಗೆ ಏರುವುದು ನಿಚ್ಚಳವಾಗಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಬಹುಮತಕ್ಕೆ 145 ಸ್ಥಾನಗಳು ಬೇಕು.
ಸದ್ಯ ಸಮೀಕ್ಷೆಗಳನ್ನು ನೋಡುವುದಾದರೆ.
ಮ್ಯಾಟ್ರಿಜ್
ಮಹಾಯುತಿ 150-170, ಎಂವಿಎ 110-130 (ಮಹಾರಾಷ್ಟ್ರದಲ್ಲಿ ಎನ್ಡಿಎ ಮೈತ್ರಿಕೂಟ ಅಧಿಕಾರದ ಗದ್ದುಗೆ ಏರಲಿದೆ ಎಂದು ಮ್ಯಾಟ್ರಿಜ್ ಸಮೀಕ್ಷೆ ತಿಳಿಸಿದೆ)
ಪೀಪಲ್ಸ್ ಪಲ್ಸ್
ಮಹಾಯುತಿ 175-195, ಎಂವಿಎ 85-112, ಇತರೆ 7-12
ಚಾಣಕ್ಯ ಸ್ಟ್ರ್ಯಾಟಜೀಸ್
ಬಿಜೆಪಿ+ 150-170, ಕಾಂಗ್ರೆಸ್+ 110-130, ಇತರೆ 8-10
ಪಿ-ಮಾರ್ಕ್
ಮಹಾಯುತಿ 137-157, ಎಂವಿಎ 126-146
ಲೋಕಶಾಹಿ ಮರಾಠಿ-ರುದ್ರ
ಬಿಜೆಪಿ+ 128-142, ಎಂವಿಎ 125-140 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ಹೇಳಿವೆ.