ಸಾಮಾನ್ಯವಾಗಿ ಸಂಭಾವನೆ ವಿಚಾರಕ್ಕೆ ಬಂದಾಗ ಹೀರೋಗಳದ್ದೆ ಮೇಲುಗೈ ಆಗಿರುತ್ತದೆ. ಆ ನಟ ಇಷ್ಟು ಸಂಭಾವನೆ ಪಡೆದ ಈ ನಟ ಇಷ್ಟು ಹಣ ಪಡೆಯುತ್ತಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಲೇ ಇರುತ್ತದೆ. ಅಂತೆಯೇ ಒಂದು ಹಾಡಿಗೆ ಒಬ್ಬ ಗಾಯಕ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂದು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತೆ.
ಹಾಗಿದ್ರೆ, ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕ ಯಾರಿರಬಹುದು? ಯಾವ ಗಾಯಕರಿಗೆ ಹೆಚ್ಚು ಬೇಡಿಕೆ ಇದೆ ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ..
ಬಹು ಬೇಡಿಕೆಯ ಗಾಯಕ ವಿಜಯ್ ಪ್ರಕಾಶ್!
ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಗಾಯಕ ವಿಜಯ್ ಪ್ರಕಾಶ್. ಇವರು ೨೦೧೮ರ ಸಾಲಿನಲ್ಲಿ ಸುಮಾರು ೫೦ಕ್ಕೂ ಅಧಿಕ ಹಾಡು ಹಾಡಿದ್ದಾರೆ. ೨೦೧೯ನೇ ಸಾಲಿನಲ್ಲಿ ಹತ್ತು ಹಾಡು ಹಾಡಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, ವಿಜಯ್ ಪ್ರಕಾಶ್ ಒಂದು ಹಾಡಿಗೆ ಒಂದು ಲಕ್ಷ ಚಾರ್ಜ್ ಮಾಡ್ತಾರಂತೆ.
ಲಕ್ಷದವರೆಗೂ ಸಂಭಾವನೆ ಪಡೆಯುತ್ತಾರೆ ರಾಜೇಶ್ ಕೃಷ್ಣನ್!
ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಅವರ ಸಂಭಾವನೆ ಹೆಚ್ಚಿದ್ದು, ಈಗಿನ ಸಮಯದಲ್ಲಿ ಹಾಡೋದು ಕಮ್ಮಿ ಆಗಿದೆ. ಆದರೆ, ಬೇಡಿಕೆ ಮತ್ತು ಸಂಭಾವನೆ ಮಾತ್ರ ಕಡಿಮೆಯಾಗಿಲ್ಲ. ಇವರು ಹಾಡೊಂದಕ್ಕೆ ಒಂದು ಲಕ್ಷದವರೆಗೂ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.
ಸಂಜಿತ್ ಹೆಗ್ಡೆ ರಾಕಿಂಗ್!
ಸಂಜಿತ್ ಹೆಗ್ಡೆ, ಸದ್ಯ ಗಾಂಧಿನಗದ ಗಲ್ಲಿ ಗಲ್ಲಿಯಲ್ಲೂ ಇವರದ್ದೆ ಸೌಂಡು. ವಿಜಯ್ ಪ್ರಕಾಶ್ ನಂತರ ಇಂಡಸ್ಟ್ರಿಯಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಗಾಯಕ ಸಂಚಿತ್ ಹೆಗ್ಡೆ. ಸಂಭಾವನೆ ವಿಚಾರದಲ್ಲಿ ಕಮ್ಮಿ ಇದ್ದರೂ ಬೇಡಿಕೆ ಮಾತ್ರ ಹೆಚ್ಚಿದೆ.
ಕನ್ನಡದ ಶ್ರೇಯಾ ಘೋಷಲ್ ಅನುರಾಧ ಭಟ್
ಗಾಯಕಿಯರ ಪೈಕಿ ಅನುರಾಧ ಭಟ್ ಕನ್ನಡದ ಶ್ರೇಯಾ ಘೋಷಲ್. ‘ಅಪ್ಪ ಐ ಲವ್ ಯೂ’ ಖ್ಯಾತಿಯ ಅನುರಾಧ್ ಭಟ್ ಗಾಯಕಿಯ ಪೈಕಿ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಕನ್ನಡದ ಮತ್ತೊಬ್ಬ ಗಾಯಕಿ ಶಮಿತಾ ಮಲ್ನಾಡ್ ಕೂಡ ಕನ್ನಡ ಇಂಡಸ್ಟ್ರಿಯಲ್ಲಿ ಬೇಡಿಕೆ ಹೊಂದಿದ್ದಾರೆ.
ಒಟ್ಟಾರೆ ಗಾಯಕ ಅಥವಾ ಗಾಯಕಿಯ ಸಂಭಾವನೆ ವಿಚಾರದಲ್ಲಿ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಯಾಕಂದ್ರೆ, ಇಲ್ಲಿ ಸಂಭಾವನೆ ಅನ್ನುವುದಕ್ಕಿಂತ ಅವಕಾಶ ನೀಡಿದ್ರು ಎಂಬುದೇ ವಿಶೇಷವೆನಿಸಿಕೊಳ್ಳುತ್ತೆ.