ರಾಜ್ಯದಲ್ಲಿ ಉಪುಚುನಾವಣಾ ಕಣ ರಂಗೇರಿದೆ. ರಾಜಕೀಯ ಪಕ್ಷಗಳು ಗೆಲುವಿಗಾಗಿ ನಾನಾ ತಂತ್ರಗಳನ್ನು ರೂಪಿಸುತ್ತಿದೆ. ಈ ಮಧ್ಯೆ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಬಗ್ಗೆ ಚರ್ಚೆ ಶುರುವಾಗಿದೆ.
ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಕಚ್ಚಾಟ
ರಾಜ್ಯ ಕಾಂಗ್ರೆಸ್ ನಲ್ಲಿ ಮುಗೀತಾ ಹುಲಿಯಾ ಆರ್ಭಟ..?
ಎಸ್..! ರಾಜ್ಯ ಕಾಂಗ್ರೆಸ್ ನಲ್ಲಿ ಈಗ ಮುಂದಿನ ಸಿಎಂ ಅಭ್ಯರ್ಥಿ ಯಾರು ಎಂಬ ಚರ್ಚೆ ಆರಂಭವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ವರ್ಸಸ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್. ಸದ್ಯ ರಾಜ್ಯ ಕಾಂಗ್ರೆಸ್ ನ ಪಿಲ್ಲರ್ ಗಳು. ಈ ಇಬ್ಬರಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಯಾರಾಗಬೇಕು ಎಂಬ ಚರ್ಚೆ ಕೈ ಪಡಸಾಲೆಯಲ್ಲಿ ಆರಂಭವಾಗಿದೆ.
ಅದರಲ್ಲೂ ಮುಖ್ಯವಾಗಿ ಕನಕಪುರ ಬಂಡೆ ಡಿ.ಕೆ.ಶಿವಕುಮಾರ್ ಅವರೇ ಮುಂದೆ ಸಿಎಂ ಆಗ್ಬೇಕು ಎಂದು ಕೈ ನಾಯಕರು ಬಹಿರಂಗವಾಗಿ ಹೇಳ್ತಾ ಇದ್ದಾರೆ. ಶಾಸಕಿ ಸೌಮ್ಯ ರೆಡ್ಡಿ, ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ, ಆರ್ ಆರ್ ನಗರ ಬೈ ಎಲೆಕ್ಷನ್ ನ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ತಂದೆ ಹನುಮಂತರಾಯಪ್ಪ ಕೂಡ ಡಿಕೆ ಪರ ಬ್ಯಾಟ್ ಬೀಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಜನಾರ್ದನ್ ಪೂಜಾರಿ ” ಸಿದ್ದರಾಮಯ್ಯ ಅವರು ಎಷ್ಟೇ ಪ್ರಯತ್ನಿಸಿದರೂ ಡಿ.ಕೆ.ಶಿವಕುಮಾರ್ ಅವರೇ ಗೆಲ್ಲುವುದು ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ಬೈ ಎಲೆಕ್ಷನ್ ನಲ್ಲಿ ಗೆಲುವು ಸಾಧಿಸದೇ ಡಿಕೆ ಬ್ರದರ್ಸ್ ವಿರಮಿಸಲ್ಲ : ಜನಾರ್ದನ ಪೂಜಾರಿ
ಇತ್ತ ನಾನು ಮುಂದೆ ಸಿಎಂ ಆದ್ರೆ 10 ಅಕ್ಕಿ ಉಚಿತವಾಗಿ ಕೊಡ್ತೇನೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಅಂದ್ರೆ ಈಗಲೂ ಸಿಎಂ ರೇಸ್ ನಿಂದ ಹಿಂದೆ ಸರಿದಿಲ್ಲ. ಅದರಲ್ಲೂ ಸಿದ್ದು ಆಪ್ತರು ಮುಂದಿನ ಕಾಂಗ್ರೆಸ್ ನ ಮುಂದಿನ ಸಿಎಂ ಸಿದ್ದರಾಮಯ್ಯನವರೇ ಎಂದು ಹೇಳಿಕೆಗಳನ್ನು ನೀಡ್ತಿದ್ದಾರೆ.
ಕೆಲ ದಿನಗಳ ಹಿಂದೆ ಶಾಸಕ ಜಮೀರ್ ನಮ್ಮ ಮುಂದಿನ ಸಿಎಂ ಸಿದ್ದರಾಮಯ್ಯನವರೇ ಎಂದು ಹೇಳಿಕೆ ನೀಡಿದ್ರು.
ಸದ್ಯ ಬೈ ಎಲೆಕ್ಷನ್ ನಲ್ಲಿ ಬ್ಯೂಸಿ ಆಗಿರುವ ಸಿದ್ದು ಶಿರಾ ಮತ್ತು ಆರ್ ಆರ್ ನಗರದಲ್ಲಿ ಪಕ್ಷದ ಗೆಲುವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.
ಇತ್ತ ಅಧ್ಯಕ್ಷರಾಗಿ ಈ ಬೈ ಎಲೆಕ್ಷನ್ ಅನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರೋ ಡಿಕೆ ಹಗಲು ರಾತ್ರಿ ಅಭ್ಯರ್ಥಿಗಳ ಗೆಲುವಿಗಾಗಿ ದುಡಿಯುತ್ತಿದ್ದಾರೆ.
ರಾಜ್ಯ ಕಾಂಗ್ರೆಸ್ ನಲ್ಲಿ ಮುಗೀತಾ ಹುಲಿಯಾ ಆರ್ಭಟ..?
ಸಿದ್ದರಾಮಯ್ಯ ಕಾಂಗ್ರೆಸ್ ಗೆ ಹೊಸ ಹುರುಪು ತಂದವರು. ಪಕ್ಷದಲ್ಲಿ ಘಟಾನುಘಟಿ ನಾಯಕರೇ ಇದ್ದರೂ ಎಲ್ಲರೂ ಓವರ್ ಟೆಕ್ ಮಾಡಿದರು. ಸಿದ್ದರಾಮಯ್ಯ ಅಂದ್ರೆ ಕಾಂಗ್ರೆಸ್.. ಕಾಂಗ್ರೆಸ್ ಅಂದ್ರೆ ಸಿದ್ದರಾಮಯ್ಯ ಅನ್ನುವ ರೀತಿ ಪಕ್ಷದಲ್ಲಿ ಕೆಲಸ ಮಾಡಿವರು. 2013 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಿ ಹಿಡಿಯುವಲ್ಲಿ ಸಿದ್ದರಾಮಯ್ಯ ಅವರದ್ದು ಸಿಂಹಪಾಲು. ಆಗ ಸಿದ್ದರಾಮಯ್ಯ ಕರ್ನಾಟಕ ಕಾಂಗ್ರೆಸ್ ನ ದೊರೆಯಾಗಿ ಮಿಂಚಿದವರು. ಆದ್ರೆ ಈಗ ಕಾಲ ಬದಲಾಗಿದೆ.. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಹೀನಾಯ ಸೋಲುಂಡಿದೆ.
ಇದೇ ಕಾರಣಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಕನಕಪುರ ಬಂಡೆ ಡಿ.ಕೆ.ಶಿವಕುಮಾರ್ ಅವರಿಗೆ ರಾಜ್ಯ ಕಾಂಗ್ರೆಸ್ ನ ಸಾರಥ್ಯ ವಹಿಸಿದೆ. ಅಧ್ಯಕ್ಷಗಿರಿ ದಕ್ಕುತ್ತಿದ್ದಂತೆ ಡಿಕೆ ರಾಕೇಟ್ ವೇಗದಲ್ಲಿ ಮುನ್ನುಗ್ಗುತ್ತಾ ತಮ್ಮದೇ ಆದ ಕೋಟೆಯನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇದಕ್ಕೆ ಸಿದ್ದ ವಿರೋಧಿ ಮೂಲ ಕಾಂಗ್ರೆಸ್ ನಾಯಕರೂ ಕೂಡ ಸಾಥ್ ನೀಡ್ತಿದ್ದಾರೆ.
ಇದನ್ನೂ ಓದಿ : ಹುಲಿ ಕಾಡು ಪ್ರಾಣಿ, ಅದು ಕಾಡಿಗೆ ಹೋಗಬೇಕು : ಸಿದ್ದುಗೆ ಕಟೀಲ್ ಗುದ್ದು
ಆದ್ರೆ ಇದೆನ್ನೆಲ್ಲಾ ಸೈಲಂಟ್ ಆಗಿ ಗಮನಿಸುತ್ತಿರೋ ಲಾಯರ್ ಸಿದ್ದರಾಮಯ್ಯ, ಅಷ್ಟು ಸಲೀಸಾಗಿ ಹಿಂದೆ ಸರಿಯಲ್ಲ. ಅದು ಹುಲಿಯಾನ ಜಾಯಮಾನವೂ ಅಲ್ಲ.
ಒಟ್ಟಾರೆ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಮೂರು ವರ್ಷ ಬಾಕಿ ಇದ್ದರೂ ಕಾಂಗ್ರೆಸ್ ಪಡಸಾಲೆಯಲ್ಲಿ ಮುಂದಿನ ಸಿಎಂ ಬಗ್ಗೆ ಚರ್ಚೆ ನಡೆಸುತ್ತಿರೋದು ತೀವ್ರ ಕುತೂಹಲ ಕೆರಳಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel