ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಕಾಳಗ ಶುರುವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡಿತ್ತು. ಇದಾದ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ಜೊತೆಗೆ ಬಿಜೆಪಿ ಸರ್ಕಾರದಲ್ಲೂ ಕೆಲವೊಂದು ಭಿನ್ನಭಿಪ್ರಾಯವಿದೆ. ಅಲ್ಲದೆ ಅಸಮಾಧಾನ ಸ್ಪೋಟಗೊಳುತ್ತಿದೆ. ಇಂತಹ ಸಂದರ್ಭದಲ್ಲಿ ಸಚಿವ ಎಸ್.ಟಿ ಸೋಮಶೇಖರ್ ಮೈತ್ರಿ ಸರ್ಕಾರ ಪತನದ ಹಿಂದಿರುವ ಗುಟ್ಟುರಟ್ಟು ಮಾಡಿದ್ದಾರೆ.
ಸದ್ಯ ರಾಜಕೀಯ ವಲಯದಲ್ಲಿ ಮೈತ್ರಿ ಸರ್ಕಾರ ಪತನಗೊಳ್ಳಲು ಹೆಚ್. ವಿಶ್ವನಾಥ್ ಪ್ರಮುಖ ಪಾತ್ರವಹಿಸಿದ್ದರು ಎಂಬ ಚರ್ಚೆ ನಡೆದಿದೆ. ಆದರೆ ಸರ್ಕಾರದ ಪತನಕ್ಕೆ ಅಡಿಯಿಟ್ಟವರೇ ಬೇರೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಈ ವಿಚಾರವಾಗಿ ಇಂದು ರಹಸ್ಯ ಬಿಚ್ಚಿಟ್ಟಿ ಸಚಿವ ಎಸ್.ಟಿ.ಸೋಮಶೇಖರ್, ಮೈತ್ರಿ ಸರ್ಕಾರ ಪತನಗೊಂಡಿದ್ದಕಾಗಿ ನಾವು ಸಚಿವರಾಗಿದ್ದೇವೆ. ಮೈತ್ರಿ ಸರ್ಕಾರದ ಪತನಕ್ಕೆ ಮುಖ್ಯ ಕಾರಣ ಆನಂದ್ ಸಿಂಗ್. ಇದಾದ ಬಳಿಕವೇ ಎಲ್ಲರೂ ಒಬ್ಬರ ಹಿಂದೆ ಒಬ್ಬರು ಎಂಬಂತೆ ರಾಜೀನಾಮೆ ನೀಡಿದ್ದು. ಎಲ್ಲರೂ ರಾಜೀನಾಮೆ ನೀಡುತ್ತೇವೆ ಎಂದು ಹೇಳಿದ್ದೇವೆ. ಆದರೆ ರಾಜೀನಾಮೆ ನೀಡರಲಿಲ್ಲ. ಯಾವಗ ಆನಂದ್ ಸಿಂಗ್ ರಾಜೀನಾಮೆ ನೀಡಿದರೊ ಅವಾಗ ನಾವೆಲ್ಲ ರಾಜೀನಾಮೆ ನೀಡಿದ್ದೇವೆ.
ಆನಂದ್ ಸಿಂಗ್ ದೈರ್ಯ ಮಾಡಿ ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಪತನಕ್ಕೆ ನಾಂದಿ ಹಾಡಿದರು. ಇದಾದ ಬಳಿಕ ನಾವು ಮುಂದಡಿಯಿಟ್ಟಿದ್ದು. ಆಗ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆ ಆಗಿದೆ ಎಂದು ಸಚಿವರು ಹೇಳಿದ್ದಾರೆ.








