ಮುಂಬರುವ ದಿನಗಳಲ್ಲಿ ಮತ್ತಷ್ಟು ವೇಗವಾಗಿ ಹರಡಲಿದೆ ಒಮಿಕ್ರಾನ್ : WHO
ವಿಶ್ವಾದ್ಯಂತ ಕಾಡುತ್ತಿರುವ ಕೊರೊನಾ ರೂಪಾಂತರಿ ತಳಿ ಒಮಿಕ್ರಾನ್ ವೇಗವಾಗಿ ಹರಡುತ್ತಿದ್ದು , ಮುಂಬರುವ ದಿನಗಳಲ್ಲಿ ಮತ್ತಷ್ಟು ಕ್ಷಿಪ್ರವಾಗಿ ಹರಡಲಿದೆ ಎಂದು WHO ತಿಳಿಸಿದೆ.. ರಜಾದಿನಗಳಲ್ಲಿ ಹೆಚ್ಚಿದ ಸಾಮಾಜಿಕ ಚಟುವಟಿಕೆಗಳು ಮತ್ತು ಜನರ ನಿರ್ಲಕ್ಷ್ಯದಿಂದಾಗಿ ಮುಂಬರುವ ವಾರಗಳಲ್ಲಿ ಪ್ರಕರಣಗಳಲ್ಲಿ ಏರಿಕೆ ಉಂಟಾಗಬಹುದು. ಆಸ್ಪತ್ರೆಗಳ ಮೇಲೆ ಉತ್ತಡ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಈ ಹಿಂದೆ ಅಂದ್ರೆ ಒಮಿಕ್ರಾನ್ ಹರಡುತ್ತಿದ್ದ ಆರಂಭದಲ್ಲಿ , ಒಮಿಕ್ರಾನ್ ಗಿಂತಲೂ ಡೆಲ್ಟಾ ತೀವ್ರತೆ ಹೆಚ್ಚಿದೆ ಎಂದು WHO ತಿಳಿಸಿತ್ತು.. ಆದರೆ 2021ರ ಆಗಸ್ಟ್ 21ರಲ್ಲಿ ಏರುಗತಿ ಕಂಡಿದ್ದ ಕೋವಿಡ್ ಸಾವಿನ ಪ್ರಕರಣಗಳಲ್ಲಿ ಸದ್ಯ ಇಳಿಕೆ ಕಂಡುಬಂದಿದೆ ಎಂದು ತಿಳಿಸಿದೆ.
ನವೆಂಬರ್ ಮತ್ತು ಡಿಸೆಂಬರ್ನಲ್ಲಿ ಒಮಿಕ್ರಾನ್ ಪ್ರಕರಣಗಳಲ್ಲಿ ಕ್ಷಿಪ್ರ ಏರಿಕೆಯನ್ನು ಕಂಡಿದ್ದ ದೇಶಗಳಲ್ಲಿ ಸದ್ಯ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂದು ಹೇಳಿದೆ. WHOನ ಎಲ್ಲಾ 6 ವಲಯಗಳಲ್ಲಿ ಈ ವಾರ 1.8 ಕೋಟಿ ಹೊಸ ಪ್ರಕರಣಗಳು ವರದಿಯಾಗಿವೆ.