ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ಬಿಜೆಪಿಯ ಹಿರಿಯ ನಾಯಕ ಹಾಗೂ ಶಾಸಕ ಉಮೇಶ್ ಕತ್ತಿ , ತಮ್ಮ ಪಕ್ಷದಲ್ಲೇ ಕತ್ತಿ ವರಸೆ ಶುರು ಮಾಡಿದ್ದಾರೆ. ಅದಕ್ಕೆ ಪೂರಕವೆಂಬಂತೆ ತಮ್ಮ ನಿವಾಸದಲ್ಲಿ 25ಕ್ಕೂ ಹೆಚ್ಚು ಶಾಸಕರನ್ನು ಸೇರಿ ಸಭೆ ನಡೆಸಿದ್ದು. ಆದರೆ ಇದು ಔಟಕೂಟವಷ್ಟೇ ಬೇರೆ ಅರ್ಥ ಕಲ್ಪಿಸಬಾರದು ಎಂದು ಹೇಳಿದ್ದರು. ಸಭೆ ಬಳಿಕ ಕೆಲ ಶಾಸಕರ ಯಡಿಯೂರಪ್ಪ ಅವರ ನಾಯಕತ್ವದ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು.
ಈ ವಿಚಾರವಾಗಿ ಮಾತನಾಡಿರುವ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪಕ್ಷದ ನಾಯಕರಾಗಲಿ, ಪದಾಧಿಕಾರಿಗಳಾಗಲಿ ಅಥವಾ ಕಾರ್ಯಕರ್ತರಾಗಲಿ, ಅನ್ಯ ರಾಜಕೀಯ ಪಕ್ಷಗಳ ಆಂತರಿಕ ಬೆಳವಣಿಗೆಗಳ ಬಗ್ಗೆ ಯಾವುದೇ ಹೇಳಿಕೆ ನೀಡಬಾರದು ಎಂದು ತಮ್ಮ ಶಾಸಕ, ಸಂಸದರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಬಿಜೆಪಿಯ ಆತಂರಿಕ ವಿಚಾರದದಲ್ಲಿ ಶಾಸಕಾಂಗ ಪಕ್ಷದ ನಾಯಕರು ಅಥವಾ ಪಕ್ಷದ ಅಧ್ಯಕ್ಷನಾಗಿ ನಾನು ಮಾತ್ರ ಮಾತನಾಡುತ್ತೇನೆ. ಸದ್ಯ ಪಕ್ಷವನ್ನು ಮತ್ತಷ್ಟು ಸಂಘಟಿಸುವುದು ಮತ್ತು ಸದೃಢಗೊಳಿಸಬೇಕಿದೆ. ಇದು ನಮ್ಮ ಏಕೈಕ ಗುರಿಯಾಗಿರಬೇಕು. ಈ ಗುರಿಸಾಧನೆಯತ್ತ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದ್ದಾರೆ.
ಇದೆ ವೇಳೆ ಸಂಸದ ಡಿಕೆ ಸುರೇಶ್ ಗೂ ಎಚ್ಚರಿಕೆ ನೀಡಿದ್ದಾರೆ. ನನ್ನ ಸಹೋದರ ಕೂಡ ನಿನ್ನೆ ಒಂದು ಕಡೆ ಹೇಳಿಕೆ ನೀಡಿದ್ದಾರೆ. ಅವರಿಗೂ ಸೇರಿ ಎಲ್ಲರಿಗೂ ಈ ವಿಚಾರವಾಗಿ ಸೂಚನೆ ನೀಡುತ್ತಿದ್ದೇನೆ. ಯಾರೂ ಬೇರೆ ಪಕ್ಷಗಳ ವಿಚಾರವಾಗಿ ಬಹಿರಂಗ ಹೇಳಿಕೆ ನೀಡಬಾರದು ಎಂದು ಮಾಧ್ಯಮಗಳ ಮೂಲಕ ತಿಳಿಸುತ್ತೇನೆ ಎಂದು ಹೇಳಿದ್ದಾರೆ.