ಕೋವಿಡ್-19 ಮೂಲ ಪತ್ತೆ ಹಚ್ಚಲು ಚೀನಾದ ವುಹಾನ್ ಗೆ ಆಗಮಿಸಿದ ವಿಶ್ವ ಆರೋಗ್ಯ ಸಂಸ್ಥೆ (WHO) ತಂಡ
ವುಹಾನ್, ಜನವರಿ15: ವಿಶ್ವ ಆರೋಗ್ಯ ಸಂಸ್ಥೆ (WHO) ತಜ್ಞರ ತಂಡವು ಚೀನಾದ ವುಹಾನ್ ಗೆ ಗುರುವಾರ ಆಗಮಿಸಿದೆ. ಅಲ್ಲಿ ಕೊರೋನವೈರಸ್ ಸಾಂಕ್ರಾಮಿಕದ ಮೂಲದ ಬಗ್ಗೆ ಸೂಕ್ಷ್ಮ ತನಿಖೆ ನಡೆಸಲಿದೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ಕೋವಿಡ್-19 ಸೋಂಕಿನ ಸೃಷ್ಟಿಗೆ ಕಾರಣ ಏನು? ಅದು ಎಲ್ಲಿಂದ ಉಗಮವಾಯಿತು ಎಂದು ತಿಳಿದುಕೊಳ್ಳುವುದು ಈ ತಜ್ಞರ ತಂಡದ ಗುರಿಯಾಗಿದೆ.
ಆದರೆ ವೈರಸ್‌ನ ಮೂಲವನ್ನು ಪತ್ತೆ ಹಚ್ಚಲು ಬಹಳಷ್ಟು ವರ್ಷಗಳು ಬೇಕಾಗಬಹುದು ಮತ್ತು ಚೀನಾಕ್ಕೆ ಮುಜುಗರ ಸನ್ನಿವೇಶವನ್ನು ತಡೆಯಲು ಅನಿಶ್ಚಿತ ಫಲಿತಾಂಶ ನಿರೀಕ್ಷಿಸಬಹುದು ಎಂಬುದು ಇತರ ದೇಶಗಳ ಆರೋಗ್ಯ ಅಧಿಕಾರಿಗಳ ಅಭಿಪ್ರಾಯವಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ವುಹಾನ್‌ಗೆ ಕಳುಹಿಸಿದ ತಂಡವನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಸರ್ಕಾರವು ಹಲವು ತಿಂಗಳುಗಳ ರಾಜತಾಂತ್ರಿಕ ಭಿನ್ನಾಭಿಪ್ರಾಯಗಳ ನಂತರ ಅಂಗೀಕರಿಸಿದೆ.
2019 ರ ಉತ್ತರಾರ್ಧದಿಂದ 1.9 ದಶಲಕ್ಷಕ್ಕೂ ಹೆಚ್ಚು ಜನರನ್ನು ಕೊಂದ ವೈರಸ್, ಬಾವಲಿಗಳು ಅಥವಾ ಇತರ ಪ್ರಾಣಿಗಳಿಂದ ಮನುಷ್ಯರಿಗೆ ಹರಡಿದೆ ಎಂದು ವಿಜ್ಞಾನಿಗಳು ಶಂಕಿಸಿದ್ದಾರೆ. ಚೀನಾದಲ್ಲಿರುವ ಕಮ್ಯುನಿಸ್ಟ್ ಪಕ್ಷವು ರೋಗವನ್ನು ಹರಡಲು ಅವಕಾಶ ಮಾಡಿಕೊಟ್ಟಿದೆ ಎಂದು ಜಗತ್ತೇ ಹೇಳುತ್ತಿದ್ದರೆ, ಈ ವೈರಸ್ ವಿದೇಶದಿಂದ ಬಂದಿದೆ, ಬಹುಶಃ ಆಮದು ಮಾಡಿದ ಸಮುದ್ರಾಹಾರದಿಂದ ಬಂದಿರಬಹುದು ಎಂದು ಚೀನಾ ಹೇಳುತ್ತಿದೆ. ಆದರೆ ಅಂತರರಾಷ್ಟ್ರೀಯ ವಿಜ್ಞಾನಿಗಳು ಇದನ್ನು ತಿರಸ್ಕರಿಸಿದ್ದಾರೆ.
ಗುರುವಾರ ಹದಿನೈದು ತಂಡದ ಸದಸ್ಯರು ವುಹಾನ್‌ಗೆ ಆಗಮಿಸಬೇಕಿತ್ತು, ಆದರೆ ಸಿಂಗಾಪುರದಿಂದ ಹೊರಡುವ ಮೊದಲು ತಂಡದ ಇಬ್ಬರು ಸದಸ್ಯರಿಗೆ ಕೊರೋನವೈರಸ್ ಸೋಂಕು ದೃಢಪಟ್ಟಿದ್ದು, ಅಲ್ಲಿ ಅವರನ್ನು ಮರುಪರಿಶೀಲಿಸಲಾಗುತ್ತಿದೆ ಎಂದು ಡಬ್ಲ್ಯುಎಚ್‌ಒ ಟ್ವಿಟರ್ ಪ್ರಕಟಣೆಯಲ್ಲಿ ತಿಳಿಸಿದೆ.
ಕೊವಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳು ಸುರಕ್ಷಿತವಾಗಿದೆ – ಐವಿಎಂಆರ್
ತಂಡದ ಉಳಿದವರು ವುಹಾನ್ ವಿಮಾನ ನಿಲ್ದಾಣಕ್ಕೆ ಸಂಪೂರ್ಣ ಮುಂಜಾಗ್ರತಾ ಕ್ರಮಗಳೊಂದಿಗೆ ಬಂದಿಳಿದರು . ಮಾಸ್ಕ್ ಧರಿಸಿದ ಸಂಶೋಧಕರಿಗೆ ವಿಮಾನ ನಿಲ್ದಾಣದ ಸಿಬ್ಬಂದಿಗಳು ಮಾಸ್ಕ್, ಕನ್ನಡಕಗಳು ಮತ್ತು ಪೂರ್ಣ ಬಾಡಿ ಸೂಟ್‌ಗಳನ್ನು ಒಳಗೊಂಡಂತೆ ಸಂಪೂರ್ಣ ರಕ್ಷಣಾತ್ಮಕ ಸಾಧನಗಳನ್ನು ನೀಡಿ ಸ್ವಾಗತಿಸಿದರು.
ಅವರು ಎರಡು ವಾರಗಳ ಕ್ವಾರಂಟೈನ್ ಹಾಗೂ ಗಂಟಲು ಸ್ವ್ಯಾಬ್ ಪರೀಕ್ಷೆ ಮತ್ತು ಕೋವಿಡ್-19 ಗಾಗಿ ಪ್ರತಿಕಾಯ ಪರೀಕ್ಷೆಗೆ ಒಳಗಾಗಲಿದ್ದಾರೆ. ಅವರು ಕ್ವಾರಂಟೈನ್ ನಲ್ಲಿರುವಾಗ ವೀಡಿಯೊ ಕಾನ್ಫರೆನ್ಸ್ ಮೂಲಕ ಚೀನೀ ತಜ್ಞರೊಂದಿಗೆ ಕೆಲಸ ಮಾಡಲು ಪ್ರಾರಂಭಿಸಲಿದ್ದಾರೆ.
ಈ ತಂಡವು ಯುನೈಟೆಡ್ ಸ್ಟೇಟ್ಸ್, ಆಸ್ಟ್ರೇಲಿಯಾ, ಜರ್ಮನಿ, ಜಪಾನ್, ಬ್ರಿಟನ್, ರಷ್ಯಾ, ನೆದರ್ಲ್ಯಾಂಡ್ಸ್, ಕತಾರ್ ಮತ್ತು ವಿಯೆಟ್ನಾಂನ ವೈರಸ್ ಮತ್ತು ಇತರ ತಜ್ಞರನ್ನು ಒಳಗೊಂಡಿದೆ.
ಸರ್ಕಾರದ ವಕ್ತಾರರು ಈ ವಾರ ಅವರು ಚೀನಾದ ವಿಜ್ಞಾನಿಗಳೊಂದಿಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಆದರೆ ಸಾಕ್ಷ್ಯಗಳನ್ನು ಸಂಗ್ರಹಿಸಲು ಅವರಿಗೆ ಅವಕಾಶವಿದೆಯೇ ಎಂಬ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ಜಾಗತಿಕ ಆರ್ಥಿಕತೆಯ ಕುಸಿತಕ್ಕೆ ಕಾರಣವಾದ ಕೋವಿಡ್-19 ವೈರಸ್ ಹರಡಲು ಚೀನಾ ಕಾರಣ ಎಂದು ಟ್ರಂಪ್ ಆಡಳಿತವು ದೂಷಿಸಿತು.
ಚೀನಾದ ಸ್ವತಂತ್ರ ವಿಚಾರಣೆಗಾಗಿ ಆಸ್ಟ್ರೇಲಿಯಾ ಏಪ್ರಿಲ್‌ನಲ್ಲಿ ಕರೆ ನೀಡಿದ ನಂತರ, ಚೀನಾ ಆಸ್ಟ್ರೇಲಿಯಾದ ಗೋಮಾಂಸ, ವೈನ್ ಮತ್ತು ಇತರ ಸರಕುಗಳ ಆಮದನ್ನು ನಿರ್ಬಂಧಿಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಮೊಟ್ಟೆಗಳ ಸೇವನೆಯಿಂದ ಮೂತ್ರಪಿಂಡ (ಕಿಡ್ನಿ) ತೊಂದರೆhttps://t.co/f1WeQRvdL9
— Saaksha TV (@SaakshaTv) January 12, 2021
ಎಷ್ಟು ಮೊತ್ತಕ್ಕಿಂತ ಹೆಚ್ಚಿನ ಆಭರಣ ಖರೀದಿಗೆ ಪ್ಯಾನ್ / ಆಧಾರ್ ದಾಖಲೆ ಕಡ್ಡಾಯ ? – ಇಲ್ಲಿದೆ ಮಾಹಿತಿhttps://t.co/CrjHYzvDzK
— Saaksha TV (@SaakshaTv) January 12, 2021