ASIA CUP FINALನಲ್ಲಿ ಭಾರತಕ್ಕೆ ಎದುರಾಳಿ ಯಾರು?
ಲಂಕಾ ಇಲ್ಲ ಪಾಕಿಸ್ತಾನ -ಇದು ಪಾಯಿಂಟ್ಸ್ ಟೇಬಲ್ ಲೆಕ್ಕಾಚಾರ
ಏಷ್ಯಾಕಪ್ ಫೈನಲ್ ಗೆ ಟೀಮ್ ಇಂಡಿಯಾ ಜಾಗ ಪಡ್ದಿದ್ದಾಯ್ತು..ಟೀಮ್ ಇಂಡಿಯಾಗೆ ಫೈನಲ್ ಟಿಕೆಟ್ ಸಿಕ್ಬಿಡ್ತು…ಈಗ ನಮ್ಮೆಲ್ಲರ ಮುಂದಿರೋ ದೊಡ್ಡ ಸವಾಲು ಅಂದ್ರೆ ಏಷ್ಯಾಕಪ್ ಫೈನಲ್ ಸೆಪ್ಟಂಬರ್ 17ಕ್ಕೆ ಅಂದ್ರೆ ಇದೇ ಭಾನುವಾರ ನಡೀತ್ತಿದೆ…ಈ ಫೈನಲ್ ನಲ್ಲಿ ನಮ್ಮ ಟೀಮ್ ಇಂಡಿಯಾ ಜೊತೆ ಆಡೋರು ಯಾರು ಅನ್ನೋದು ಪ್ರಶ್ನೆ..ಪಾಕಿಸ್ತಾನ ಇಲ್ಲ ಶ್ರೀಲಂಕಾನಾ… ಇವತ್ತು ಪಾಕ್ ಮತ್ತು ಶ್ರೀಲಂಕಾ ಮ್ಯಾಚ್ ಇದೆ..ಈ ಪಂದ್ಯವನ್ನ ಯಾರು ಗೆಲ್ತಾರೋ ಅವ್ರಿಗೆ ಫೈನಲ್ ಟಿಕೆಟ್ ಸಿಗುತ್ತೆ….ಆದ್ರೆ ಒಂದ್ವೆಳೆ ಮಳೆ ಬಂದ್ರೆ, ಮ್ಯಾಚ್ ರದ್ದಾದ್ರೆ ಕಥೆ ಏನು…ಯಾರಿಗೆ ಫೈನಲ್ ಟಿಕೆಟ್ ಸಿಗುತ್ತೆ…ಪಾಯಿಂಟ್ಸ್ ಟೇಬಲ್ ಏನು ಹೇಳುತ್ತೆ ಇಲ್ಲಿದೆ ನೋಡಿ ಫುಲ್ ಡಿಟೈಲ್ಸ್
ಸೂಪರ್ ಫೋರ್ ನಲ್ಲಿ ಟೀಮ್ ಇಂಡಿಯಾ 2 ಮ್ಯಾಚ್ ಆಡಿದೆ. ಎರಡನ್ನೂ ಟೀಮ್ ಇಂಡಿಯಾ ಗೆದ್ದುಕೊಂಡಿದೆ..ಹೀಗಾಗಿ ಪಾಯಿಂಟ್ಸ್ ಟೇಬಲ್ ವಿಚಾರಕ್ಕೆ ಬಂದ್ರೆ ಭಾರತ ಮೊದಲ ಸ್ಥಾನದಲ್ಲಿದೆ. ಟಾಪ್ ನಲ್ಲಿ ಇದೆ…ಇನ್ನು 2ನೇ ಸ್ಥಾನದಲ್ಲಿ ಶ್ರೀಲಂಕಾ ಇದೆ…2 ಪಂದ್ಯಗಳಲ್ಲಿ 1 ಮ್ಯಾಚ್ ಗೆದ್ದಿದೆ..2 ಪಾಯಿಂಟ್ಸ್ ಲಂಕಾ ಬಳಿ ಇದೆ..-0.200 ಇದ್ರ ರನ್ ರೇಟ್…ಇನ್ನು ಪಾಕಿಸ್ಥಾನ ಪಾಯಿಂಟ್ಸ್ ಟೇಬಲ್ ನಲ್ಲಿ 3ನೇ ಸ್ಥಾನದಲ್ಲಿದೆ…2 ಮ್ಯಾಚಲ್ಲಿ ಗೆದ್ದಿರೋದು ಒಂದು ಪಂದ್ಯ ಮಾತ್ರ..ಪಾಕ್ ಹತ್ರನೂ 2 ಪಾಯಿಟ್ಸ್ ಇದೆ..ಆದ್ರೆ ರನ್ ರೇಟ್ ವಿಚಾರಕ್ಕೆ ಬಂದ್ರೆ ಪಾಕಿಸ್ತಾನಕ್ಕಿಂತ ಶ್ರೀಲಂಕಾದ ರನ್ ರೇಟ್ ಚೆನ್ನಾಗಿದೆ..ಇಲ್ಲಿ ಇದೇ ಪಾಕಿಸ್ತಾನಕ್ಕೆ ತಲೆನೋವಾಗಿರೋದು…
ಇವತ್ತು ಪಾಕ್ ಮತ್ತೇ ಶ್ರೀಲಂಕಾ ನಡುವೆ ಮ್ಯಾಚ್ ಇದೆ..ಈ ಪಂದ್ಯದಲ್ಲಿ 2ನೇ ಫೈನಲಿಸ್ಟ್ ಯಾರು ಅನ್ನೋದು ಡಿಸೈಡ್ ಆಗುತ್ತೆ…ಯಾರು ಗೆಲ್ತಾರೋ ಅವ್ರು ಫೈನಲ್ ಗೆ ಹೋಗ್ತಾರೆ..ಒಂದು ವೇಳೆ ಮಳೆ ಬಂದ್ರೆ ಕಥೆ ಏನು .ಇಲ್ಲೇ ಇರೋದು ನೋಡಿ ಇಂಟ್ರೆಸ್ಟಿಂಗ್…
ಇವತ್ತು ಕೊಲೆಂಬೋದಲ್ಲಿ ಮಳೆ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಹೇಳಿದೆ…ಒಂದು ವೇಳೆ ಮಳೆ ಬಂದು ಮ್ಯಾಚ್ ವಾಶ್ ಔಟ್ ಆದ್ರೆ ಅಂದ್ರೆ ಮಳೆಯಿಂದಾಗಿ ಮ್ಯಾಚ್ ಕಂಪ್ಲೀಟಾಗಿ ರದ್ದಾದ್ರೆ ಎರಡು ತಂಡಕ್ಕೂ ಒಂದೊಂದು ಪಾಯಿಂಟ್ಸ್ ಸಿಗುತ್ತೆ…ಆಗ ಎರಡು ತಂಡಗಳಿಗೂ ತಲಾ 1ಪಾಯಿಂಟ್ಸ್ ಸಿಗುತ್ತೆ….ಆಗ ರನ್ ರೇಟ್ ಆಧಾರದ ಮೇಲೆ ಲಂಕಾ ತಂಡ ಫೈನಲ್ ಗೆ ಎಂಟ್ರಿಕೊಡುತ್ತೆ…ಪಾಕಿಸ್ತಾನದ ಫೈನಲ್ ಕನಸು ಭಗ್ನವಾಗುತ್ತೆ…ಯಾಕಂದ್ರೆ ಪಾಕ್ ಗಿಂತ ಲಂಕಾದ ರನ್ ರೇಟ್ ಚೆನ್ನಾಗಿದೆ…
ಈಗ ಪಾಕ್ ಟೀಮ್ ಮತ್ತು ಪಾಕಿಸ್ತಾನದ ಅಭಿಮಾನಿಗಳು ಯಾವ್ದೇ ಕಾರಣಕ್ಕೂ ಮಳೆ ಬರೋದು ಬೇಡಪ್ಪಾ ಅಂತ ಪ್ರಾರ್ಥನೆ ಮಾಡ್ಬೇಕಾಗುತ್ತೆ








