ಉತ್ತರಾಖಂಡದ ಟಾಪ್ 5 ಕ್ಷೇತ್ರಗಳಲ್ಲಿ ಯಾರಿಗೆ ಗೆಲುವು ಯಾರಿಗೆ ಸಹಿ…
ಖತೀಮಾ: ನಾಲ್ಕನೇ ಸುತ್ತಿನ ಮತ ಎಣಿಕೆಯ ನಂತರ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (17,071 ಮತಗಳು) ಕಾಂಗ್ರೆಸ್ನ ಭುವನ್ ಸಿಂಗ್ ಕಪ್ರಿ (19328 ಮತಗಳು) 2288 ಮತಗಳಿಂದ ಹಿಂದುಳಿದಿದ್ದಾರೆ.
ಲಾಲ್ಕುವಾನ್: ಬಿಜೆಪಿಯ ಡಾ.ಮೋಹನ್ ಸಿಂಗ್ ಬಿಷ್ತ್ ಅವರು ಕಾಂಗ್ರೆಸ್ನ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರನ್ನು 14 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ.
ಹರಿದ್ವಾರ: ಬಿಜೆಪಿ ರಾಜ್ಯಾಧ್ಯಕ್ಷ ಮದನ್ ಕೌಶಿಕ್ ಅವರು ಕಾಂಗ್ರೆಸ್ನ ಸತ್ಪಾಲ್ ಬ್ರಹ್ಮಚಾರಿಗಿಂತ 1413 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಗಂಗೋತ್ರಿ: ಬಿಜೆಪಿಯ ಸುರೇಶ್ ಚೌಹಾಣ್ ಅವರು ಕಾಂಗ್ರೆಸ್ನ ವಿಜಯಪಾಲ್ ಸಜ್ವಾನ್ ಅವರಿಗಿಂತ 4850 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿ ಎಎಪಿಯ ಸಿಎಂ ಅಭ್ಯರ್ಥಿ ಅಜಯ್ ಕೊಥಿಯಾಲ್ ಮೂರನೇ ಸ್ಥಾನದಲ್ಲಿದ್ದಾರೆ.
ಚೌಬಟ್ಟಖಾಲ್: ಬಿಜೆಪಿಯ ಹಾಲಿ ಸಚಿವ ಸತ್ಪಾಲ್ ಮಹಾರಾಜ್ ಅವರು ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಕೇಸರ್ ನೇಗಿ ಅವರಿಗಿಂತ 2988 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.








