Saurabh Kumar | ಟೀಂ ಇಂಡಿಯಾ ಸೇರಿದ ಸೌರಭ್ ಯಾರು..? whos-saurabh-kumar-select-in-team-india saaksha tv
ಶ್ರೀಲಂಕಾ ತಂಡದ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟ ಮಾಡಲಾಗಿದೆ. ಇದರಲ್ಲಿ ಯುವ ಪ್ರತಿಭೆ ಸೌರಭ್ ಕುಮಾರ್ ಗೆ ಇದೇ ಮೊದಲ ಬಾರಿಗೆ ಚಾನ್ಸ್ ನೀಡಲಾಗಿದೆ.
ಬಿಸಿಸಿಐ ನಿನ್ನೆ ಭಾರತ ತಂಡವನ್ನು ಪ್ರಕಟಿಸುತ್ತಿದ್ದಂತೆ ಸೌರಭ್ ಕುಮಾರ್ ಯಾರು ಎಂಬ ಪ್ರಶ್ನೆ ಮುನ್ನಲೆಗೆ ಬಂತು.
ಯಾರೀ ಸೌರಭ್..?
28 ವರ್ಷದ ಸೌರಭ್ ಕುಮಾರ್ ಎಡಗೈ ಸ್ಪಿನ್ನರ್ ಆಗಿದ್ದು, ಉತ್ತರ ಪ್ರದೇಶದ ಮೂಲದವರಾಗಿದ್ದಾರೆ. ಅವರು ಮೊದಲು ರೈಲ್ವೇಸ್ ಅನ್ನು ಪ್ರತಿನಿಧಿಸಿದ್ದರು, ಅದಾದ ಬಳಿಕ ಉತ್ತರ ಪ್ರದೇಶವನ್ನು ಪ್ರತಿನಿಧಿಸಿದ್ದಾರೆ.
ಕಳೆದ ಎರಡು ರಣಜಿ ಸೀಸನ್ಗಳಲ್ಲಿ ಕ್ರಮವಾಗಿ 51 ಮತ್ತು 44 ವಿಕೆಟ್ಗಳನ್ನು ಪಡೆದಿರುವ ಸೌರಭ್, ಇತ್ತೀಚೆಗೆ ಭಾರತ ‘ಎ’ ಪರ ದಕ್ಷಿಣ ಆಫ್ರಿಕಾದಲ್ಲಿ ಮಿಂಚಿದ್ದರು. ನಂತರ ಅವರು ಟೆಸ್ಟ್ ಸರಣಿಗಾಗಿ ಸ್ಟ್ಯಾಂಡ್ಬೈ ಆಟಗಾರನಾಗಿ ಅಲ್ಲೇ ಉಳಿದುಕೊಂಡು ಟೀಂ ಇಂಡಿಯಾದೊಂದಿಗೆ ಅಭ್ಯಾಸ ನಡೆಸಿದ್ದರು.
ಸೌರಭ್ 46 ಪ್ರಥಮ ದರ್ಜೆ ಪಂದ್ಯಗಳಲ್ಲಿ 24.15ರ ಸರಾಸರಿಯಲ್ಲಿ 196 ವಿಕೆಟ್ ಪಡೆದಿದ್ದಾರೆ. ಅವರು ಬ್ಯಾಟಿಂಗ್ನಲ್ಲಿ ಅವರ ಖಾತೆಯಲ್ಲಿ 2 ಶತಕ ಮತ್ತು 8 ಅರ್ಧಶತಕಗಳಿವೆ.









