ಸಾಮಾನ್ಯವಾಗಿ ಪ್ರತಿ ವರ್ಷ ಫೆಬ್ರವರಿಯಲ್ಲಿ ಕೇವಲ 28 ದಿನಗಳಷ್ಟೆ ಇರುತ್ತವೆ. ಆದ್ರೆ ನಾಲ್ಕು ವರ್ಷಕ್ಕೊಮ್ಮೆ ಈ ತಿಂಗಳಿನಲ್ಲಿ 29 ದಿನಗಳು ಇರುತ್ತವೆ. ಹಾಗಾದ್ರೆ ನಾಲ್ಕು ವರ್ಷಗಳಿಗೊಮ್ಮೆ ಫೆಬ್ರವರಿಯಲ್ಲಿ ಒಂದು ದಿನ ಹೆಚ್ಚಾಗೋದೇಕೆ.. ಆ ವರ್ಷದಲ್ಲಿ 365 ದಿನಗಳ ಬದಲಿಗೆ 366 ದಿನಗಳಿರೋದೇಕೆ? ಎಂಬ ಪ್ರಶ್ನೆಗಳು ಕೆಲವರನ್ನು ಕಾಡುತ್ತಲೇ ಇರುತ್ತವೆ.
ಕಾರಣವೇನು?
ಸೂರ್ಯನ ಸುತ್ತ ಭೂಮಿ ಒಂದು ಸುತ್ತು ಸುತ್ತಿ ಬರೋದಕ್ಕೆ 365.25ದಿನಗಳನ್ನ ತೆಗೆದುಕೊಳ್ಳುತ್ತೆ. ಆದರೆ ನಮ್ಮ ಕ್ಯಾಲೆಂಡರ್ ಗಳಲ್ಲಿ ಕೇವಲ 365 ದಿನಗಳನ್ನು ಮಾತ್ರವೇ ದಾಖಲಿಸಿ ಮಿಕ್ಕ .25 ನ್ನು ಗಣನೆಗೆ ತೆಗೆದುಕೊಳ್ಳೋದಿಲ್ಲ. ಹೀಗೆ ನಾಲ್ಕು ಬಾರಿ ಸೂರ್ಯ ಭೂಮಿಯನ್ನು ಸುತ್ತಿ ಬಂದಾಗ .254 ಲೆಕ್ಕ ಹಾಕಿದ್ರೆ ಅದು ಒಂದು ದಿನಕ್ಕೆ ಸಮವಾಗುತ್ತೆ. ಹೀಗಾಗಿ ಆ ಒಂದು ಹೆಚ್ಚುವರಿ ದಿನವನ್ನ ನಾಲ್ಕು ವರ್ಷಗಳಿಗೊಮ್ಮೆ ಫೆಬ್ರವರಿ ತಿಂಗಳಿಗೆ ಸೇರಿಸಲಾಗುತ್ತೆ. ಹೀಗಾಗಿ 2020 ರ ಫೆಬ್ರವರಿ ತಿಂಗಳಲ್ಲಿ 29 ದಿನಗಳಿರ್ತವೆ.
ಮುಂದೆ 2024, 2028, 2032, 2036 ಈ ವರ್ಷಗಳೂ ಕೂಡ ಅಧಿಕ ವರ್ಷಗಳಾಗಿರುತ್ತವೆ.








