ADVERTISEMENT
Tuesday, November 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಈ ಕುಮಾರಸ್ವಾಮಿಯನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ: ಯಾವ ಕೇಂದ್ರ ಸಚಿವರನ್ನು ಬಂಧಿಸುತ್ತಾರೋ ನೋಡೋಣ ಎಂದು ಸರ್ಕಾರಕ್ಕೆ ನೇರ ಸವಾಲು

Shwetha by Shwetha
November 3, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಹಾಗೂ ಹಾಸನದ ಪೆನ್‌ಡ್ರೈವ್ ಪ್ರಕರಣಗಳ ಸುತ್ತ ನಡೆಯುತ್ತಿರುವ ರಾಜಕೀಯ ಸಮರ ಇದೀಗ ತಾರಕಕ್ಕೇರಿದೆ. ತಮ್ಮ ವಿರುದ್ಧ ಮುಗಿಬಿದ್ದಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ದಾಖಲೆಗಳ ಸಮೇತ ಪ್ರತ್ಯಸ್ತ್ರ ಪ್ರಯೋಗಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, 2023ರ ಆಗಸ್ಟ್ ತಿಂಗಳಿನಲ್ಲಿ ಪ್ರಜ್ವಲ್ ರೇವಣ್ಣ ಅವರ ಕಾರು ಚಾಲಕ ಕಾರ್ತಿಕ್‌ನನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ನಿವಾಸಕ್ಕೆ ಎರಡು ಬಾರಿ ಕರೆಸಿಕೊಂಡು ಭೇಟಿಯಾಗಿದ್ದೇಕೆ ಎಂದು ಪ್ರಶ್ನಿಸುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

ಮಾಧ್ಯಮಗಳ ಮುಂದೆ ದೂರವಾಣಿ ಕರೆಗಳ ವಿವರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪೆನ್‌ಡ್ರೈವ್ ಹಂಚಿದ್ದು ನಾನೇ ಎಂದು ನನ್ನ ಮೇಲೆ ಗೂಬೆ ಕೂರಿಸಲಾಯಿತು. ಆದರೆ ಅಸಲಿಗೆ ಆ ಪೆನ್‌ಡ್ರೈವ್ ಹಂಚಿದ್ದು ಪ್ರಜ್ವಲ್ ಕಾರು ಚಾಲಕ ಕಾರ್ತಿಕ್. 2023ರ ಆಗಸ್ಟ್ 5 ಮತ್ತು 6ರಂದು ಇದೇ ಕಾರ್ತಿಕ್ ಡಿ.ಕೆ. ಶಿವಕುಮಾರ್ ಅವರ ಮನೆಗೆ ಹೋಗಿದ್ದ. ಆ ವಿವಾದಾತ್ಮಕ ಕ್ಯಾಸೆಟ್ ಸಿದ್ಧವಾಗಿದ್ದು ನಿಮ್ಮ ಮನೆಯಲ್ಲೇನಾ? ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆಯೇ ಎಂದು ಮುಖ್ಯಮಂತ್ರಿಗಳನ್ನು ನೇರವಾಗಿ ಪ್ರಶ್ನಿಸಿದ್ದಾರೆ. ನಾವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ರಾಹುಲ್ ಗಾಂಧಿ ಪ್ರಧಾನಿಯಾಗುವುದನ್ನು ತಪ್ಪಿಸಿದೆವು ಎಂಬ ಏಕೈಕ ಕಾರಣಕ್ಕೆ ಕಾಂಗ್ರೆಸ್ ನಾಯಕರು ನಮ್ಮ ಇಡೀ ಕುಟುಂಬವನ್ನೇ ರಾಜಕೀಯವಾಗಿ ನಿರ್ನಾಮ ಮಾಡಲು ಈ ಸಂಚು ರೂಪಿಸಿದರು ಎಂದು ಅವರು ಗಂಭೀರ ಆರೋಪ ಮಾಡಿದರು.

Related posts

ದೇಶದ ಅತ್ಯುತ್ತಮ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಯೋಗಿ ಆದಿತ್ಯನಾಥ್ ನಂಬರ್ 1: ಟಾಪ್ ಪಟ್ಟಿಯಿಂದ ಹೊರಬಿದ್ದ ಕರ್ನಾಟಕದ ಸಿಎಂ

ದೇಶದ ಅತ್ಯುತ್ತಮ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಯೋಗಿ ಆದಿತ್ಯನಾಥ್ ನಂಬರ್ 1: ಟಾಪ್ ಪಟ್ಟಿಯಿಂದ ಹೊರಬಿದ್ದ ಕರ್ನಾಟಕದ ಸಿಎಂ

November 3, 2026
ಆಂಧ್ರ ಕರಾವಳಿ ದಾಟಲಿರುವ ಚಂಡಮಾರುತ: ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ಒಳನಾಡಿನ ಕೆಲವೆಡೆ ಮಳೆ ಸಾಧ್ಯತೆ

ಆಂಧ್ರ ಕರಾವಳಿ ದಾಟಲಿರುವ ಚಂಡಮಾರುತ: ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ಒಳನಾಡಿನ ಕೆಲವೆಡೆ ಮಳೆ ಸಾಧ್ಯತೆ

November 3, 2026

ಪೊಲೀಸ್ ಆಯುಕ್ತರ ಹೇಳಿಕೆ ಕಾನೂನುಬಾಹಿರ

ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ತಮ್ಮ ದೆಹಲಿ ನಿವಾಸದ ಹೆಸರನ್ನು ಎಳೆದು ತಂದಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತರ ವಿರುದ್ಧವೂ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಿನ್ನೆ ಕಮಿಷನರ್ ನನ್ನ ವಿರುದ್ಧ ಮಾಡಿರುವ ಆರೋಪಗಳು ಸಂಪೂರ್ಣ ಕಾನೂನುಬಾಹಿರ. ಸರ್ಕಾರದ ಒತ್ತಡಕ್ಕೆ ಮಣಿದು ಅವರು ಇಂತಹ ಹೇಳಿಕೆ ನೀಡಿದ್ದಾರೆ. ಈ ವಿಚಾರದಲ್ಲಿ ನಾನು ನ್ಯಾಯಾಲಯದ ಮೆಟ್ಟಿಲೇರಿದರೆ ಏನಾಗುತ್ತದೆ ಎಂಬ ಅರಿವು ಆ ಅಧಿಕಾರಿಗೂ ಇದೆ, ಆದರೆ ನಾನು ಆ ಮಟ್ಟಕ್ಕೆ ಇಳಿಯುವುದಿಲ್ಲ ಎಂದರು.

ಬಂಧಿತ ಆರೋಪಿ ರಿತೇಶ್ ಪಾಂಡೆ ಯಾರು ಎಂಬುದೇ ನನಗೆ ತಿಳಿದಿಲ್ಲ, ಆತನ ಮುಖವನ್ನೂ ನಾನು ನೋಡಿಲ್ಲ. ಆತನನ್ನು ಬಂಧಿಸಿದ್ದು ಎಲ್ಲಿ? ನನ್ನ ದೆಹಲಿ ನಿವಾಸದಲ್ಲಿ ಬಂಧಿಸಲಾಗಿದೆಯೇ? ಕೇಂದ್ರ ಸಚಿವನಾಗಿರುವ ಕಾರಣ ನನ್ನ ದೆಹಲಿ ಮನೆಗೆ ಪ್ರತಿನಿತ್ಯ ನೂರಾರು ಜನ ಕೆಲಸ ಕಾರ್ಯಗಳ ನಿಮಿತ್ತ ಬಂದು ಹೋಗುತ್ತಾರೆ. ಆ ಬಗ್ಗೆ ತನಿಖೆ ನಡೆಸಲು ನನ್ನದೇನೂ ಅಭ್ಯಂತರವಿಲ್ಲ. ಆದರೆ ತನಿಖೆಯ ಹಂತದಲ್ಲಿರುವ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದು ಯಾರು ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಸಿದ್ದರಾಮಯ್ಯಗೆ ಕ್ಲೀನ್‌ಚಿಟ್ ನೀಡಿ ಸರ್ಕಾರ ಉಳಿಸಿಕೊಳ್ಳುವ ತಂತ್ರ

ಇಡೀ ಸ್ಟಿಂಗ್ ಆಪರೇಷನ್ ಪ್ರಕರಣವನ್ನು ಹಳ್ಳ ಹಿಡಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಆರೋಪಿಸಿದ ಎಚ್‌ಡಿಕೆ, ಪೊಲೀಸರು ತಮ್ಮ ತನಿಖಾ ವರದಿಯಲ್ಲಿ ಇದೊಂದು ಕಟ್ಟುಕಥೆ ಹಾಗೂ ಉದ್ದೇಶಪೂರ್ವಕ ಷಡ್ಯಂತ್ರ ಎಂದು ಉಲ್ಲೇಖಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಲೀನ್‌ಚಿಟ್ ನೀಡಿದ್ದಾರೆ. ಸ್ವತಃ ಸಚಿವರಾಗಿರುವ ಯತೀಂದ್ರ ಸಿದ್ದರಾಮಯ್ಯ ಅವರೇ ಈ ಪ್ರಕರಣದಲ್ಲಿ ತಮ್ಮ ಪಕ್ಷದವರ ಪಾತ್ರವಿದೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಹೀಗಿದ್ದರೂ ಸ್ಟಿಂಗ್ ಮಾಡಿಸಿದ ಅಸಲಿ ಸೂತ್ರಧಾರರನ್ನು ರಕ್ಷಿಸಿ, ಸಿದ್ದರಾಮಯ್ಯ ಅವರಿಗೆ ಕ್ಲೀನ್‌ಚಿಟ್ ನೀಡುವ ಮೂಲಕ ಸರ್ಕಾರ ಉಳಿಸಿಕೊಳ್ಳಲು ಹೊರಟಿದ್ದಾರೆ. ತಪ್ಪೇ ಮಾಡಿಲ್ಲ ಎಂದಾದರೆ ಸಿದ್ದರಾಮಯ್ಯ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು ಏಕೆ? ಸ್ಟಿಂಗ್ ಆಪರೇಷನ್‌ನ ಮೂಲ ಪುರುಷ ಕೋರ್ಟ್ ಮೊರೆ ಹೋಗಿದ್ದು ಏಕೆ ಎಂದು ಪ್ರಶ್ನಿಸಿದರು.

ಕೃಪಾ ಆಳ್ವಾ ಮತ್ತು ಕೇರಳದ ಮಹಿಳೆಯ ನಂಟೇನು?

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಇದು ಬರೀ ಟ್ರೇಲರ್, ಪಿಕ್ಚರ್ ಅಭಿ ಬಾಕಿ ಹೈ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ನನ್ನ ರಾಜಕೀಯ ಜೀವನದಲ್ಲಿ ಇಂತಹ ಎಷ್ಟೋ ಟ್ರೇಲರ್‌ಗಳನ್ನು ನೋಡಿದ್ದೇನೆ ಎಂದು ವ್ಯಂಗ್ಯವಾಡಿದರು. ಇದೇ ವೇಳೆ ಸ್ಟಿಂಗ್ ಪ್ರಕರಣದ ಹಿಂದಿನ ಮತ್ತೊಂದು ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟ ಅವರು, 2011ರಲ್ಲಿ ನಡೆದ ಘಟನೆಯೊಂದನ್ನು 2023ರಲ್ಲಿ ಚಿತ್ರೀಕರಣ ಮಾಡಲಾಗಿದೆ. ಇಷ್ಟು ವರ್ಷಗಳ ಕಾಲ ಇವರೆಲ್ಲ ಏಕೆ ಸುಮ್ಮನಿದ್ದರು? 2015ರಲ್ಲಿ ಕೃಪಾ ಆಳ್ವಾ ಅವರನ್ನು ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ಮಾಡಿದ್ದು ಅಂದಿನ ಸಿಎಂ ಸಿದ್ದರಾಮಯ್ಯ ಅವರೇ ಹೊರತು ನಾವಲ್ಲ. ಇದೇ ಕೃಪಾ ಆಳ್ವಾ, ಖಾಸಗಿ ಸುದ್ದಿ ವಾಹಿನಿಯೊಂದರ ಮುಖ್ಯಸ್ಥ ಹಾಗೂ ಮತ್ತೊಬ್ಬ ವ್ಯಕ್ತಿ ಸೇರಿಕೊಂಡು ಕೇರಳದ ಮುಸ್ಲಿಂ ಹೆಣ್ಣುಮಗಳೊಬ್ಬಳನ್ನು ಕೂರಿಸಿ ಈ ಸ್ಟಿಂಗ್ ವಿಡಿಯೋ ಮಾಡಿಸಿದ್ದಾರೆ. ಕೃಪಾ ಆಳ್ವಾ ಅವರಿಗೂ ಕೇರಳದ ಆ ಮಹಿಳೆಗೂ ಏನು ಸಂಬಂಧ? 2023ರಲ್ಲಿ ಈ ವಿಡಿಯೋ ಮಾಡಿದ್ದೇಕೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆಯೇ ಎಂದು ಸವಾಲು ಹಾಕಿದರು.

ಯಾವ ಕೇಂದ್ರ ಸಚಿವರನ್ನು ಬಂಧಿಸುತ್ತಾರೋ ನೋಡೋಣ

ರಾಜ್ಯದಲ್ಲಿ ಕೇಂದ್ರ ಸಚಿವರೊಬ್ಬರನ್ನು ಬಂಧಿಸಲಾಗುತ್ತದೆ ಎಂಬ ಚರ್ಚೆಗಳನ್ನು ಹುಟ್ಟುಹಾಕಲಾಗಿದೆ. ಅದು ಯಾವ ಕೇಂದ್ರ ಸಚಿವರನ್ನು ಬಂಧಿಸುತ್ತಾರೋ ನಾನೂ ನೋಡುತ್ತೇನೆ ಎಂದು ಕುಮಾರಸ್ವಾಮಿ ಗುಡುಗಿದರು. ಈ ಕುಮಾರಸ್ವಾಮಿಯನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ. ನಿನ್ನೆ ರಾಜ್ಯೋತ್ಸವ ಕಾರ್ಯಕ್ರಮ ಮುಗಿದ ಬಳಿಕ ನೀವೆಲ್ಲಾ ಎಲ್ಲಿ ಕುಳಿತು ಸಭೆ ನಡೆಸಿದ್ದೀರಿ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ನನ್ನ ಮೇಲೆ ಇಡಿ ದಾಳಿಗೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸುವ ಪ್ರಿಯಾಂಕ್ ಖರ್ಗೆ ಅವರೇ, ಕೆಪಿಎಸ್‌ಸಿಯಲ್ಲಿ ನಡೆದಿರುವ ನಿಮ್ಮ ಕರ್ಮಕಾಂಡಗಳನ್ನು ಮುಚ್ಚಿಹಾಕುತ್ತಿರುವವರು ಯಾರು ಎಂದು ಪ್ರಶ್ನಿಸಿದರು.

ನನ್ನ ಸಹೋದರನ ಪುತ್ರನಿಗೆ ಜೀವಾವಧಿ ಶಿಕ್ಷೆ ಕೊಡಿಸಿದಿರಿ, ಆದರೂ ನಾನು ಯಾರ ಮುಂದೆಯೂ ಹೋಗಿ ಭಿಕ್ಷೆ ಬೇಡಿಲ್ಲ. ನಿಮ್ಮಂತೆ ರಕ್ಷಣೆ ಪಡೆದುಕೊಂಡಿಲ್ಲ, ಎಲ್ಲವನ್ನೂ ಏಕಾಂಗಿಯಾಗಿಯೇ ಎದುರಿಸುತ್ತೇನೆ. ನಮ್ಮ ಕುಟುಂಬ ದೇಶದ ಪ್ರಧಾನಿ ಹುದ್ದೆಯನ್ನು ಕಂಡಿದೆ, ನಾನೂ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಆದರೆ ಎಂದಿಗೂ ಅಧಿಕಾರ ದುರುಪಯೋಗಪಡಿಸಿಕೊಂಡು ಪೊಲೀಸರನ್ನು ಹೆದರಿಸಿಲ್ಲ, ದ್ವೇಷದ ರಾಜಕಾರಣ ಮಾಡಿಲ್ಲ. ಪೊಲೀಸರು ಪ್ರಾಮಾಣಿಕವಾಗಿ ಕೆಲಸ ಮಾಡಲಿ, ನಮಗೂ ಕಾಲ ಬರುತ್ತದೆ ಎಂಬುದು ನೆನಪಿರಲಿ. ನನ್ನ ಮನೆಯ ಮೇಲೆ ದಾಳಿ ನಡೆಸುವುದಾದರೆ ಬನ್ನಿ, ನಾನು ಈಗಲೇ ಸಿದ್ಧನಿದ್ದೇನೆ ಎಂದು ಸರ್ಕಾರಕ್ಕೆ ನೇರ ಪಂಥಾಹ್ವಾನ ನೀಡಿದರು.

ShareTweetSendShare
Join us on:

Related Posts

ದೇಶದ ಅತ್ಯುತ್ತಮ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಯೋಗಿ ಆದಿತ್ಯನಾಥ್ ನಂಬರ್ 1: ಟಾಪ್ ಪಟ್ಟಿಯಿಂದ ಹೊರಬಿದ್ದ ಕರ್ನಾಟಕದ ಸಿಎಂ

ದೇಶದ ಅತ್ಯುತ್ತಮ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಯೋಗಿ ಆದಿತ್ಯನಾಥ್ ನಂಬರ್ 1: ಟಾಪ್ ಪಟ್ಟಿಯಿಂದ ಹೊರಬಿದ್ದ ಕರ್ನಾಟಕದ ಸಿಎಂ

by Shwetha
November 3, 2026
0

ನವದೆಹಲಿ: ದೇಶದಲ್ಲಿ ಅತ್ಯುತ್ತಮ ಆಡಳಿತ ನೀಡುತ್ತಿರುವ ಹಾಗೂ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಮುಖ್ಯಮಂತ್ರಿ ಯಾರು ಎಂಬ ಕುತೂಹಲಕ್ಕೆ ಫೇಮ್ ಇಂಡಿಯಾ ನಿಯತಕಾಲಿಕೆ ಮತ್ತು ಏಷ್ಯಾ ಪೋಸ್ಟ್...

ಆಂಧ್ರ ಕರಾವಳಿ ದಾಟಲಿರುವ ಚಂಡಮಾರುತ: ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ಒಳನಾಡಿನ ಕೆಲವೆಡೆ ಮಳೆ ಸಾಧ್ಯತೆ

ಆಂಧ್ರ ಕರಾವಳಿ ದಾಟಲಿರುವ ಚಂಡಮಾರುತ: ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ಒಳನಾಡಿನ ಕೆಲವೆಡೆ ಮಳೆ ಸಾಧ್ಯತೆ

by Shwetha
November 3, 2026
0

ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ತೀವ್ರ ಸ್ವರೂಪದ ‘ಮುರಸು’ ಚಂಡಮಾರುತದ ಪ್ರಭಾವ ಕರ್ನಾಟಕದ ಹವಾಮಾನದ ಮೇಲೂ ಬೀರುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆಯಂತೆ, ಮುಂದಿನ ಕೆಲವು...

ದಿನ ಭವಿಷ್ಯ (19-10-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (3-11-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
November 3, 2026
0

ದಿನ ಭವಿಷ್ಯ: 03-11-2026 1. ಮೇಷ ರಾಶಿ (ಅಶ್ವಿನಿ, ಭರಣಿ, ಕೃತ್ತಿಕಾ 1ನೇ ಪಾದ) ಗ್ರಹ ಸ್ಥಿತಿ: ನಿಮ್ಮ ರಾಶಿಯಿಂದ ಚತುರ್ಥ ಭಾವದಲ್ಲಿ ಅಂದರೆ ಸುಖ ಸ್ಥಾನದಲ್ಲಿ...

darshan-puttannaiah-solar-powered-organic-jaggery-unit-chikkabadaralli-pandavapura

ಪಾಂಡವಪುರದ ಆಲೆಮನೆಗಳಿಗೆ ಸೋಲಾರ್ ಬಲ ತುಂಬಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ

by admin
November 2, 2026
0

ಪರಿಸರ ಸ್ನೇಹಿ ಬೆಲ್ಲ ತಯಾರಿಕೆ ಮಂಡ್ಯ: ಕೃಷಿ ಕ್ಷೇತ್ರದಲ್ಲಿ ವಿನೂತನ ಪ್ರಯೋಗಗಳು ಹಾಗೂ ರೈತರ ಪರ ಕಾಳಜಿಗೆ ಸದಾ ಮುಂದಿರುವ ಮೇಲುಕೋಟೆ ಕ್ಷೇತ್ರದ ಜನಪ್ರಿಯ ಶಾಸಕ ದರ್ಶನ್...

sunkathonnur-solar-powered-jaggery-units-darshan-puttannaiah-pandavapura

ಸಾವಯವ ಕೃಷಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತೊಂದು ಬಲವಾದ ಹೆಜ್ಜೆ

by admin
November 2, 2026
0

ಸುಂಕಾತೊಣ್ಣೂರಿನ ಆಲೆಮನೆಗಳಿಗೂ ಸೋಲಾರ್ ಬಲ ಮಂಡ್ಯ: ಪಾಂಡವಪುರ ತಾಲೂಕಿನಲ್ಲಿ ಸಾವಯವ ಕೃಷಿ ಹಾಗೂ ಪರಿಸರ ಸ್ನೇಹಿ ಬೆಲ್ಲ ತಯಾರಿಕೆಯನ್ನು ಮತ್ತಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram