ಅಯೋಧ್ಯೆ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಶಿಲಾನ್ಯಾಸಕ್ಕೆ ಕ್ಷಣಗಣನೆ ಶುರುವಾಗಿದೆ. ನಾಳೆ ಪ್ರಧಾನಿ ನರೇಂದ್ರ ಮೋದಿ ರಾಮಮಂದಿರ ಭೂಮಿ ಪೂಜೆ ಮಾಡಲಿದ್ದಾರೆ. ನಾಳೆ ಅಯೋಧ್ಯಗೆ ಭೇಟಿ ನೀಡೋ ಪ್ರಧಾನಿಗಳು ನೇರವಾಗಿ ರಾಮಮಂದಿರಕ್ಕೆ ತೆರಳದೇ ಮೊದಲು ಹನುಮಂತನ ದೇವಾಲಯಕ್ಕೆ ಹೋಗ್ತಾರೆ. ಅಲ್ಲಿ 7 ನಿಮಿಷಗಳ ಕಾಲ ಪೂಜೆಯಲ್ಲಿ ಭಾಗಿಯಾದ ಬಳಿಕ ರಾಮಜನ್ಮಭೂಮಿಗೆ ಪ್ರಧಾನಿ ಗೇಟ್ ನಂ.3ರ ಮೂಲಕ ಆಗಮಿಸಲಿದ್ದಾರೆ.
ಇಲ್ಲಿ ಮೋದಿ ಮೊದಲು ಹನುಮಂತನ ಮಂದಿರಕ್ಕೆ ಹೋಗೋದ್ಯಾಕೆ..? ನೇರವಾಗಿ ರಾಮಮಂದಿರ ಭೂಮಿಗೆ ಭೇಟಿ ನೀಡಬಹುದಲ್ಲವೇ ಎಂಬ ಪ್ರಶ್ನೆಗಳು ಮೂಡುವುದು ಸಹಜ.
ಈ ಎಲ್ಲ ಪ್ರಶ್ನೆಗಳಿಗೆ ಅಯೋಧ್ಯೆಯ ಹನುಮಂತ ದೇವಾಲಯದ ಅರ್ಚಕ ಮಾಧವನ್ ದಾಸ್ ಅವರು ಉತ್ತರ ನೀಡಿದ್ದು,
“ಹನುಮಂತ ಇಲ್ಲದೇ ರಾಮನ ಯಾವುದೇ ಕೆಲಸ ಆರಂಭಗೊಳ್ಳುವುದಿಲ್ಲ. ಈ ಕಾರಣಕ್ಕೆ ನರೇಂದ್ರ ಮೋದಿ ಅವರು ಮೊದಲು ಹನುಮಂತನ ಪೂಜೆ ಮಾಡಿ ಆಶೀರ್ವಾದ ಪಡೆದ ಬಳಿಕ ರಾಮ ದೇವಸ್ಥಾನದ ಭೂಮಿ ಪೂಜೆಗೆ ತೆರಳುತ್ತಿದ್ದಾರೆ ಎಂದು ತಿಳಿಸಿದರು.








