ರೋಹಿತ್ ಶರ್ಮಾ… ಟೀಮ್ ಇಂಡಿಯಾದ ಹಿಟ್ ಮ್ಯಾನ್.. ಆರಂಭಿಕ ಆಟಗಾರನಾಗಿರುವ ರೋಹಿತ್ ಶರ್ಮಾ ಕೂಡ ಟೀಮ್ ಇಂಡಿಯಾದ ರನ್ ಮೆಷಿನ್ಗಳಲ್ಲಿ ಒಬ್ಬರಾಗಿದ್ದಾರೆ. ಬಿರುಸಿನ ಹಾಗೂ ತಾಳ್ಮೆಯ ಬ್ಯಾಟಿಂಗ್ ಮೂಲಕವೇ ಮಿಂಚು ಹರಿಸುತ್ತಿರುವ ರೋಹಿತ್ ಶರ್ಮಾ ಇದೀಗ ಲಾಕ್ ಡೌನ್ ಟೈಮ್ ನಲ್ಲಿ ತನ್ನ ವೃತ್ತಿ ಬದುಕಿನ ಹಲವಾರು ಗೊತ್ತಿಲ್ಲದ ವಿಚಾರಗಳನ್ನು ಬಹಿರಂಗಪಡಿಸಿಕೊಂಡಿದ್ದಾರೆ.
ಹೌದು, ರೋಹಿತ್ ಶರ್ಮಾ ತುಂಬಾನೇ ಪ್ರೀತಿಯಿಂದ ಆಯ್ಕೆ ಮಾಡಿಕೊಂಡಿರುವ ಕ್ರೀಡೆ ಅಂದ್ರೆ ಕ್ರಿಕೆಟ್. ಫಿಟ್ನೆಸ್ ಕಡೆಗೆ ಹೆಚ್ಚು ಒತ್ತು ನೀಡಿಲ್ಲದಿದ್ರೆ ಕ್ರಿಕೆಟ್ಗೆ ಎಷ್ಟು ಫಿಟ್ನೆಸ್ ಬೇಕೋ ಅಷ್ಟನ್ನು ಮಾತ್ರ ಚಾಚು ತಪ್ಪದೇ ಮಾಡುತ್ತಿದ್ದಾರೆ. ಫಿಟ್ನೆಸ್ಗಿಂತಲೂ ಬ್ಯಾಟಿಂಗ್ ಟೆಕ್ನಿಕ್ ಕಡೆ ಹೆಚ್ಚು ಗಮನಹರಿಸುವ ರೋಹಿತ್ ನಾಯಕನಾಗಿಯೂ ಗಮನ ಸೆಳೆದಿದ್ದಾರೆ.
ಆದ್ರೆ ಕ್ರಿಕೆಟ್ ತನ್ನ ಬದುಕು ಅಂತ ನಂಬಿಕೊಂಡಿರುವ ರೋಹಿತ್ ಶರ್ಮಾ ಮನೆಯಲ್ಲಿ ಮಾತ್ರ ಕ್ರಿಕೆಟ್ ಆಟವನ್ನು ನೋಡುವುದೇ ಇಲ್ವಂತೆ. ಅರೇ… ಒಬ್ಬ ಕ್ರಿಕೆಟ್ ಆಟಗಾರನಾಗಿ ಕ್ರಿಕೆಟ್ ಪಂದ್ಯವನ್ನು ನೋಡಲ್ವ ಅಂದ್ರೆ ಅಚ್ಚರಿಯಾಗುವುದರಲ್ಲಿ ಸಂದೇಹವೇ ಇಲ್ಲ. ಆದ್ರೆ ರೋಹಿತ್ ಕ್ರಿಕೆಟ್ ಆಟಗಾರನಾಗಿದ್ರೂ ಫುಟ್ಬಾಲ್ ಆಟವನ್ನು ಕೂಡ ಇಷ್ಟಪಡುತ್ತಾರಂತೆ. ಹೀಗಾಗಿ ಮನೆಯಲ್ಲಿರುವಾಗ ಹೆಚ್ಚಾಗಿ ಫುಟ್ಬಾಲ್ ಪಂದ್ಯ ನೋಡ್ಕೊಂಡು ಹಾಯಾಗಿರುತ್ತಾರಂತೆ.
ಇದಕ್ಕೆ ಕಾರಣವನ್ನೂ ನೀಡಿರುವ ರೋಹಿತ್, ಫುಟ್ಬಾಲ್ ಆಟ ಹೆಚು ಕೌಶಲ್ಯವನ್ನು ಹೊಂದಿರುವ ಆಟ. ಆದ್ರಿಂದ ಫುಟ್ಬಾಲ್ ಆಟದ ರೋಚಕ ಕ್ಷಣಗಳನ್ನು ನಾನು ಕಣ್ತುಂಬಿಕೊಳ್ಳುತ್ತೇನೆ. ಹೀಗಾಗಿಯೇ ಮನೆಯಲ್ಲಿರುವಾಗ ಕ್ರಿಕೆಟ್ ಆಟವನ್ನು ಬಿಟ್ಟು ಫುಟ್ಬಾಲ್ ಮ್ಯಾಚ್ಗಳನ್ನು ನೋಡುತ್ತೇನೆ. ಫುಟ್ಬಾಲ್ ಆಟವನ್ನು ನೋಡುವುದು ಅಂದ್ರೆ ನನಗೆ ತುಂಬಾ ಖುಷಿ ಅಂತಾರೆ ರೋಹಿತ್ ಶರ್ಮಾ. ರೋಹಿತ್ ಶರ್ಮಾ ಭಾರತದ ಲಾ ಲೀಗ್ ಟೂರ್ನಿಯ ರಾಯಭಾರಿ ಕೂಡ ಹೌದು. ಲಾ ಲೀಗ್ನ ಜಾಯ್ ಮೋರಿಸನ್ ಜೊತೆಗಿನ ಫೇಸ್ ಬುಕ್ ಲೈವ್ ಚಾಟ್ ನಲ್ಲಿ ರೋಹಿತ್ ಶರ್ಮಾ ಈ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಒಂದು ವೇಳೆ ನೀವು ಫುಟ್ಬಾಲ್ ಆಟಗಾರನಾಗಿದ್ರೆ ಯಾವ ಸ್ಥಾನದಲ್ಲಿ ಆಡುತ್ತಿದ್ದೀರಿ ಅನ್ನೋ ಪ್ರಶ್ನೆಗೆ ಉತ್ತರಿಸಿದ್ದ ರೋಹಿತ್, ನಾನು ಫುಟ್ಬಾಲ್ ಆಟಗಾರನಾಗಿದ್ರೆ ನಾನು ಮಿಡ್ಫೀಲ್ಡ್ ನಲ್ಲಿ ಆಡಲು ಇಷ್ಟಪಡುತ್ತಿದೆ. ಯಾಕಂದ್ರೆ ನಾನು ಮೈದಾನದಲ್ಲಿ ಹೆಚ್ಚು ಓಡುವುದನ್ನು ಇಷ್ಟಪಡುವುದಿಲ್ಲ. ಹಾಗಂತ ಆಕ್ರಮಣಕಾರಿ ಮಿಡ್ ಫೀಲ್ಡ್ ಆಟಗಾರನಲ್ಲ. ಆದ್ರೆ ಇಲ್ಲಿ ಗೋಲು ಗಳಿಸುವಂತಹ ಅವಕಾಶಗಳನ್ನು ಸೃಷ್ಟಿಮಾಡುವಂತ ಕೌಶಲ್ಯಗಳನ್ನು ಹೊಂದಿರಬೇಕು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಭಾರತದಲ್ಲಿ ಸಾಕಷ್ಟು ಫುಟ್ ಬಾಲ್ ಅಭಿಮಾನಿಗಳಿದ್ದಾರೆ. ಭಾರತೀಯ ಫುಟ್ಬಾಲ್ ಅಭಿಮಾನಿಗಳು ಕೂಡ ಲಾ ಲೀಗ್ ಟೂರ್ನಿಯನ್ನು ವೀಕ್ಷಣೆ ಮಾಡುತ್ತಾರೆ ಎಂದು ಅವರು ಹೇಳಿದ್ರು.








