ವಿರೋಧ ಪಕ್ಷದ ನಾಯಕ ಆರ್. ಆಶೋಕ್, ತಮ್ಮ ಟ್ವೀಟ್ ಮೂಲಕ ಕಾಂಗ್ರೆಸ್ ಪಕ್ಷದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. 144 ವರ್ಷಕ್ಕೊಮ್ಮೆ ಬರುವ ಮಹಾಕುಂಭಮೇಳದಂತಹ ಪವಿತ್ರ ಸಂಧರ್ಭವನ್ನು ಹಾಗೂ ಹಿಂದೂ ಧರ್ಮದ ನಂಬಿಕೆಗಳನ್ನು ಅಪಮಾನಿಸುತ್ತಿರುವ ಕಾಂಗ್ರೆಸ್ ನಾಯಕತ್ವದ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಶೋಕ್ ಅವರು ತಮ್ಮ ಟ್ವೀಟ್ನಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯ ಬಗ್ಗೆ ಕಿಡಿಕಾರಿದ್ದಾರೆ. ಮಹಾಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಮಿಂದರೆ ಪಾಪಗಳು ಕಳೆಯುತ್ತವೆ, ಪುಣ್ಯ ಲಭಿಸುತ್ತದೆ ಎಂಬುದು ಕೋಟ್ಯಂತರ ಹಿಂದೂಗಳ ನಂಬಿಕೆ. ಆದರೆ, ಭಾರತೀಯ ಸಂಸ್ಕೃತಿ, ಪರಂಪರೆ, ಹಾಗೂ ಹಿಂದೂ ಧರ್ಮದ ಬಗ್ಗೆ ಕಾಂಗ್ರೆಸ್ ಪಕ್ಷವು ತೋರುತ್ತಿರುವ ದ್ವೇಷ ಮತ್ತು ಅಸಡ್ಡೆ ನಿಜಕ್ಕೂ ಆಶ್ಚರ್ಯಕರವಾಗಿದೆ, ಎಂದು ಟೀಕಿಸಿದ್ದಾರೆ.
ಹಜ್ ಮತ್ತು ರಂಜಾನ್ ಬಗ್ಗೆ ಟೀಕೆ ಮಾಡುವ ಧೈರ್ಯ ತೋರಿಸಲಿ:
ಹಜ್ ಯಾತ್ರೆ ಅಥವಾ ರಂಜಾನ್ ಉಪವಾಸದಂತಹ ಇತರ ಧಾರ್ಮಿಕ ಆಚರಣೆಗಳನ್ನು ಪ್ರಶ್ನಿಸುವ ಧೈರ್ಯ ಕಾಂಗ್ರೆಸ್ ತೋರಬಹುದೇ? ಎಂಬ ಪ್ರಶ್ನೆ ಮಾಡುವ ಮೂಲಕ, ಧಾರ್ಮಿಕ ನಂಬಿಕೆಗಳಿಗೆ ಕಾಂಗ್ರೆಸ್ ಪಕ್ಷದ ದ್ವಂದ್ವ ನಿಲುವನ್ನು ಆಶೋಕ್ ಅವರು ಒತ್ತಿಹೇಳಿದ್ದಾರೆ.
ಸಂವಿಧಾನದ ಮೌಲ್ಯಗಳಿಗೆ ಅಪಚಾರ:
ಬಾಬಾಸಾಹೇಬ್ ಅಂಬೇಡ್ಕರ್ ರೂಪಿಸಿದ ಭಾರತೀಯ ಸಂವಿಧಾನದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸಲಾಗಿದೆ. ಗಂಗೆಯಲ್ಲಿ ಮಿಂದರೆ ಹಿಂದೂಗಳ ಆಚರಣೆಯನ್ನು ಪ್ರಶ್ನಿಸುವುದು ಹಿಂದೂ ಧರ್ಮಕ್ಕೆ ಮಾತ್ರವಲ್ಲ, ಸಂವಿಧಾನದ ಪರಿ ಮೌಲ್ಯಗಳಿಗೂ ಅಪಚಾರ ಮಾಡಿದಂತಾಗಿದೆ, ಎಂದು ತಮ್ಮ ಟ್ವೀಟ್ನಲ್ಲಿ ಆಶೋಕ್ ಹೇಳಿದ್ದಾರೆ.
ನಕಲಿ ಗಾಂಧಿ ಕುಟುಂಬದ ಪ್ರಭಾವ:
ಕಾಂಗ್ರೆಸ್ ಪಕ್ಷದ ನಾಯಕತ್ವವನ್ನು ಟೀಕಿಸುವ ಮೂಲಕ, ಆಶೋಕ್ ಅವರು ನಕಲಿ ಗಾಂಧಿ ಕುಟುಂಬದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಈ ಕುಟುಂಬವನ್ನು ಓಲೈಸುವ ಭರದಲ್ಲಿ ಶತಕೋಟಿ ಹಿಂದೂಗಳ ನಂಬಿಕೆಗಳಿಗೆ ಅವಹೇಳನ ಮಾಡುತ್ತಿದ್ದಾರೆ, ಎಂಬುದಾಗಿ ಹೇಳಿದ್ದಾರೆ.
ಆರ್. ಆಶೋಕ್ ಅವರ ಈ ಆರೋಪಗಳು ಕಾಂಗ್ರೆಸ್ ಪಕ್ಷದ ಧಾರ್ಮಿಕ ನಿಲುವುಗಳ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಮೂಡಿಸಿವೆ.