ಅಹಮದಾಬಾದ್ ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗಾಂಧಿ ಬಗ್ಗೆ ಮಾತನಾಡದೇ ಪ್ರಧಾನಿ ಮೋದಿಗೆ ಥ್ಯಾಂಕ್ಸ್ ಹೇಳಿದ್ದಾರೆ ಎಂದು ಮಹಾತ್ಮ ಗಾಂಧಿಯವರ ಮೊಮ್ಮಗ ತುಷಾರ್ ಗಾಂಧಿ ಹೇಳಿದ್ದಾರೆ.
ಅಹಮದಾಬಾದ್‍ನಲ್ಲಿ ಮಾತನಾಡಿದ ತುಷಾರ್ ಗಾಂಧಿ, ಸಬರಮತಿ ಆಶ್ರಮದಲ್ಲಿ ಮೆಲಾನಿಯ ಗಾಂಧಿಯವರ ಚರಕವನ್ನು ತಿರುಗಿಸಿದ್ದಾರೆ. ಟ್ರಂಪ್ ಮಾತ್ರ ಅದರ ಬಳಿ ಸುಮ್ಮನೆ ಕುಳಿತಿದ್ದರು ಅಷ್ಟೆ ಎಂದು ಹೇಳಿದ್ದಾರೆ. ಅಮೆರಿಕಾ ಅಧ್ಯಕ್ಷರು ಅತಿಥಿಗಳ ಪುಸ್ತಕದಲ್ಲಿಯೂ ಮಹಾತ್ಮ ಗಾಂಧಿಯವರ ಹೆಸರನ್ನು ಬರೆದಿಲ್ಲ. ಅಲ್ಲಿಯೂ ಸಹ ತನ್ನ ಗೆಳೆಯ ಮೋದಿಗೆ ಧನ್ಯವಾದ ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ನಿನ್ನೆ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದ ಟ್ರಂಪ್ ಅತಿಥಿಗಳ ಪುಸ್ತಕದಲ್ಲಿ ಗಾಂಧಿಯ ಹೆಸರನ್ನೂ ಉಲ್ಲೇಖಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.








