Mahathma Gandhiji : ” ವೈ ಐ ಕಿಲ್ಡ್ ಗಾಂಧಿ” ಚಿತ್ರದ ಬಿಡುಗಡೆಗೆ ತಡೆಯಿಲ್ಲ…..!!!!
ಟಾಪ್ (OTT) ವೇದಿಕೆಯಲ್ಲಿ “ವೈ ಐ ಕಿಲ್ಡ್ ಗಾಂಧಿ” ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ಕೋರಿ ಸಲ್ಲಿಸಲಾದ ರಿಟ್ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಅಲ್ಲದೇ ಈ ವಿಷಯದ ಬಗ್ಗೆ ಸಂಬಂಧಪಟ್ಟ ಹೈಕೋರ್ಟ್ಗೆ ಸಂಪರ್ಕಿಸಲು ಅರ್ಜಿದಾರರಿಗೆ ಸೂಚಿಸಿದೆ. ಹೈಕೋರ್ಟ್ಗೆ ತೆರಳಲು ಅರ್ಜಿದಾರರಿಗೆ ಸ್ವಾತಂತ್ರ್ಯವನ್ನು ನೀಡುತ್ತಾ, ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆಕೆ ಮಹೇಶ್ವರಿ ಅವರ ಪೀಠವು ಮೂಲಭೂತ ಹಕ್ಕುಗಳ ಉಲ್ಲಂಘನೆಯ ಪ್ರಶ್ನೆಯಿದ್ದಾಗ ಮಾತ್ರ ಆರ್ಟಿಕಲ್ 32 ರ ಅಡಿಯಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
ಆದ್ರೆ ಇಲ್ಲಿ ಅರ್ಜಿದಾರರ ಯಾವುದೇ ಮೂಲಭೂತ ಹಕ್ಕು ಉಲ್ಲಂಘನೆಯಾಗಿದೆ ಎಂದು ತೋರುತ್ತಿಲ್ಲ. ಹೀಗಾಗಿ ಈ ಮನವಿಯನ್ನು ಪುರಸ್ಕರಿಸಲಾಗುವುದಿಲ್ಲ ಎಂದಿದ್ದಾರೆ. ಆದಾಗ್ಯೂ ಆರ್ಟಿಕಲ್ 226 ರ ಅಡಿಯಲ್ಲಿ ಹೈಕೋರ್ಟ್ ಅನ್ನು ಸಂಪರ್ಕಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯವಿದೆ ಎಂದು ನ್ಯಾಯಾಲಯ ಹೇಳಿದೆ. ಎಲ್ಲಾ ಆನ್ಲೈನ್ ಪ್ಲಾಟ್ಫಾರ್ಮ್ಗಳಿಂದ ವಿವಾದಾತ್ಮಕ ಚಿತ್ರದ ಎಲ್ಲಾ ವಿಷಯಗಳನ್ನು ತೆಗೆದುಹಾಕುವಂತೆ ಕೋರಿ, ಅರ್ಜಿದಾರ ಸಿಕಂದರ್ ಬೆಹ್ಲ್, ವಕೀಲ ಅನುಜ್ ಭಂಡಾರಿ ಮೂಲಕ ಯಾವುದೇ ಪ್ರದರ್ಶನ ಅಥವಾ ಪ್ರಕಟಣೆಯನ್ನು ನಿಷೇಧಿಸುವಂತೆ ಕೋರಿದ್ದರು.
Why i killed gandhi , no refuse to film release – supreme court – saakshatv
ಯಾವುದೇ OTT ಪ್ಲಾಟ್ಫಾರ್ಮ್ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ರೀತಿಯಲ್ಲಿ ಚಲನಚಿತ್ರ ಅಥವಾ ಅದರ ಯಾವುದೇ ವಿಷಯಗಳು ಬಿಡುಗಡೆ ಮತ್ತು ಪ್ರದರ್ಶನವನ್ನು ನಿಲ್ಲಿಸದಿದ್ದರೆ, ಅದು ರಾಷ್ಟ್ರಪಿತನ ಪ್ರತಿಷ್ಠೆಯನ್ನು ಸರಿಪಡಿಸಲಾಗದಷ್ಟು ಕಳಂಕಗೊಳಿಸುತ್ತದೆ ಮತ್ತು ಸಾರ್ವಜನಿಕ ಅಶಾಂತಿಯನ್ನು ಉಂಟುಮಾಡುತ್ತದೆ. ದ್ವೇಷ ಮತ್ತು ಅಸಂಗತತೆಗೆ ಪ್ರಚೋದನೆ ನೀಡುತ್ತದೆ ಎಂದು ಅರ್ಜಿದಾರರು ತಮ್ಮ ಅಭಿಪ್ರಾಯವನ್ನ ಮುಂದಿಟ್ಟಿದ್ದರು..
ಚಿತ್ರದ ಎರಡು ನಿಮಿಷಗಳ ಇಪ್ಪತ್ತು ಸೆಕೆಂಡುಗಳ ಟ್ರೇಲರ್ನಲ್ಲಿ, ಭಾರತದ ವಿಭಜನೆ ಮತ್ತು ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಮಹಾತ್ಮ ಗಾಂಧಿಯನ್ನು ದೂರುವ ಪ್ರಯತ್ನವನ್ನು ಮಾಡಲಾಗಿದೆ ಮತ್ತು ಆ ಮೂಲಕ ಮಹಾತ್ಮನ ಹತ್ಯೆಯನ್ನು ಸಮರ್ಥಿಸುವ ಪ್ರಯತ್ನವನ್ನು ಮಾಡಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
Tollywood : ಕುಡಿಯಲು ಟಾಯ್ಲೆಟ್ ನೀರು ಕೊಡುತ್ತಾರೆ…!!! ಕಿರಿಯ ಕಲಾವಿದರ ಸ್ಥಿತಿ ಬಿಚ್ಚಿಟ್ಟ ನಟ..!!










