ಬೆಂಗಳೂರು : ಕೋವಿಡ್ ಸಾಮಗ್ರಿಗಳ ಖರೀದಿಯಲ್ಲಿ ಹಗರಣ ನಡೆದಿಲ್ಲ ಎನ್ನುವುದಾದರೇ ಸರ್ಕಾರ ತನಿಖೆಗೆ ಹೆದರುತ್ತಿರುವುದೇಕೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಬಿಜೆಪಿ ಸರ್ಕಾರ ಹೇಳುವಂತೆ ಕೋವಿಡ್ ಉಪಕರಣ ಖರೀದಿಯಲ್ಲಿ ಹಗರಣವೇ ಆಗಿಲ್ವೇ ? ಹಾಗಿದ್ರೆ ತನಿಖೆಗೆ ಹೆದುರುವುದು ಏಕೆ ? ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಕೆ.ಜೆ. ಜಾರ್ಜ್ ವಿರುದ್ಧ ಇದೇ ಬಿಜೆಪಿ ನಾಯಕರು ಅನಗತ್ಯ ಆರೋಪ ಮಾಡಿದ್ರು. ಆ ಸಂದರ್ಭದಲ್ಲಿ ನಮ್ಮ ಸರ್ಕಾರ ತನಿಖೆ ಮಾಡಿರಲಿಲ್ಲವೇ? ಡಿ.ಕೆ ರವಿ ಪ್ರಕರಣ ಸೇರಿದಂತೆ ಅದೆಷ್ಟೋ ಪ್ರಕರಣ ತನಿಖೆಗೆ ಮಾಡಲಿಲ್ಲವೇ? ಈಗಲೂ ಹಾಲಿ ನ್ಯಾಯಾಧೀಶರಿಂದ ತನಿಖೆಯಾಗಲಿ, ಸತ್ಯ ಹೊರಬರಲಿ ಎಂದು ಒತ್ತಾಯಿಸಿದ್ದಾರೆ.








