ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಸಿಸಿಬಿ ಕಚೇರಿಗೆ ತೆರಳುವ ಮುನ್ನ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ನಾನು ಸರ್ಕಾರಕ್ಕೆ ಪ್ರಾಮಾಣಿಕವಾಗಿ ಟ್ಯಾಕ್ಸ್ ಕಟ್ಟುತ್ತಿದ್ದೇನೆ. ಅದೇ ರೀತಿ ಶಾಸಕ ಜಮೀರ್ ಅಹಮದ್ರಿಂದಲೂ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುವಂತೆ ಮಾಡುತ್ತಿದ್ದೇನೆ ಎಂದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಕಪ್ಪು ಬಣ್ಣ ಫೈಲ್ನಲ್ಲಿ ದಾಖಲೆಗಳೊಂದಿಗೆ ಸಿಸಿಬಿ ಕಚೇರಿಗೆ ತೆರಳಿದ ಪ್ರಶಾಂತ್ ಸಂಬರಗಿ, ಜಮೀರ್ ಮಹಮದ್ ಅವರು ಮನೆ ಮಾರಲು ರೆಡಿಯಾಗಲಿ. ನನ್ನ ಫೈಲ್ನಲ್ಲಿರುವ ದಾಖಲೆಗಳಿಂದ ಸರ್ಕಾರಕ್ಕೆ ಇನ್ನಷ್ಟು ಟ್ಯಾಕ್ಸ್ ಬರುತ್ತೆ. ಜಮೀರ್ ಆಸ್ತಿಯನ್ನು ಸರ್ಕಾರಕ್ಕೆ ತಂದು ಕೊಡಿಸುತ್ತೇನೆ. ಇದರಿಂದ ಸರ್ಕಾರಕ್ಕೆ ಹೊಸ ಆದಾಯ ಬರುತ್ತೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಜಮೀರ್ ಅಹಮದ್ ಶ್ರೀಲಂಕಾದ ಕ್ಯಾಸಿನೋದಲ್ಲಿದ್ದ ಸಾಕ್ಷ್ಯ ಹೇಳ್ತೇನೆ. ಶ್ರೀಲಂಕಾದ ವ್ಯವಹಾರದ ದಾಖಲೆ ಕೊಡ್ತೇನೆ ಎಂದಿರುವ ಪ್ರಶಾಂತ್ ಸಂಬರಗಿ ಬಳಿ ಅದೆಂತಹ ದಾಖಲೆಗಳಿವೆ, ಈ ದಾಖಲೆಗಳು ಸ್ಯಾಂಡಲ್ವುಡ್ನ ಮತ್ತಷ್ಟು ನಟ-ನಟಿಯರಿಗೆ ಸಂಕಷ್ಟ ತಂದೊಡ್ಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.