K.L.Rahul | ಕಾರಣವಿಲ್ಲದೇ ರಾಹುಲ್ ಕೈ ಬಿಟ್ಟಿದ್ಯಾಕೆ..?
ಅಹಮದಾಬಾದ್ ಮೈದಾನದಲ್ಲಿ ನಡೆಯುತ್ತಿರುವ ವಿಂಡೀಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಉಪನಾಯಕ ಕೆ.ಎಲ್.ರಾಹುಲ್ ಅವರನ್ನು ಡ್ರಾಪ್ ಮಾಡಲಾಗಿದೆ. Why KL Rahul Are Not Playing The 3rd ODI vs West Indies
ಅವರ ಬದಲಿಗೆ ಶ್ರೇಯಸ್ ಅಯ್ಯರ್ ಅವರಿಗೆ ಅವಕಾಶ ನೀಡಿಲಾಗಿದೆ. ಆದ್ರೆ ಪಂದ್ಯದಿಂದ ಕೆ.ಎಲ್.ರಾಹುಲ್ ಅವರನ್ನು ಕೈ ಬಿಟ್ಟಿದ್ದು ಯಾಕೆ ಎಂಬುದಕ್ಕೆ ಸ್ಪಷ್ಟತೆ ಸಿಕ್ಕಿಲ್ಲ.
ಹೌದು..! ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡುವುದಾಗಿ ಹೇಳಿದರು. ಜೊತೆಗೆ ನಾಲ್ಕು ಬದಲಾವಣೆ ಮಾಡಿರುವುದಾಗಿ ತಿಳಿಸಿದರು.
ಕೆ.ಎಲ್.ರಾಹುಲ್ ಬದಲಿಗೆ ಶ್ರೇಯಸ್ ಅಯ್ಯರ್, ಹೂಡಾ ಬದಲಿಗೆ ಶಿಖರ್, ಶರ್ದೂಲ್ ಬದಲಿಗೆ ಚಾಹರ್, ಚಾಹಲ್ ಬದಲಿಗೆ ಕುಲ್ ದೀಪ್ ಗೆ ಅವಕಾಶ ನೀಡಲಾಗಿದೆ.
ಇಲ್ಲಿ ಪ್ರಮುಖವಾಗಿ ಕಾಡುತ್ತಿರುವ ಪ್ರಶ್ನೆ ಏನಂದರೇ ಕೆ.ಎಲ್.ರಾಹುಲ್ ಅವರನ್ನ ಪಂದ್ಯದಿಂದ ಕೈ ಬಿಡೋಕೆ ಕಾರಣವೇನು ಅಂತ.
ಯಾಕಂದರೇ ಮೊದಲ ಪಂದ್ಯದಿಂದ ದೂರ ಇದ್ದ ರಾಹುಲ್ ಎರಡನೇ ಪಂದ್ಯದಲ್ಲಿ ಲಭ್ಯರಾದ್ರು. ಆದ್ರೂ ಅವರಿಗೆ ಆರಂಭಿಕರಾಗಿ ಅವಕಾಶ ನೀಡದೇ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಕೊಟ್ಟರು.
ಈ ಅವಕಾಶದಲ್ಲಿ ರಾಹುಲ್ ಉತ್ತಮವಾಗಿ ಬ್ಯಾಟ್ ಬೀಸಿದರು. ಆದ್ರೆ ಇಂದಿನ ಪಂದ್ಯದಲ್ಲಿ ಅವರಿಗೆ ಅವಕಾಶವೇ ಇಲ್ಲ.
ಭವಿಷ್ಯದ ತಂಡಕ್ಕಾಗಿ ಬದಲಾವಣೆ ಖಚಿತ ಎಂದು ರೋಹಿತ್ ಶರ್ಮಾ ಹೇಳಿದ್ದರು. ಆದ್ರೆ ಉಪನಾಯಕನಾಗಿರುವ ಕೆ.ಎಲ್.ರಾಹುಲ್ ಅವರನ್ನ ಬೆಂಜ್ ಗೆ ಸೀಮಿತ ಮಾಡೋದು ಎಷ್ಟು ಸರಿ..? ಒಂದು ವೇಳೆ ಪಂದ್ಯದಲ್ಲಿ ರೋಹಿತ್ ಇಂಚೂರಿ ಆದ್ರೆ, ತಂಡವನ್ನು ಮುನ್ನಡೆಸೋರು ಯಾರು..? ಇದು ರಾಹುಲ್ ವಿರುದ್ಧ ನಡೆಯುತ್ತಿರುವ ಷಡ್ಯಂತರವಾ..? ಆರಂಭಿಕರಾಗಿ ಮಿಂಚುತ್ತಿದ್ದ ರಾಹುಲ್ ಅವರನ್ನ ಮಿಡಲ್ ಆರ್ಡರ್ ನಲ್ಲಿ ಆಡಿಸಿದ್ದು ಯಾಕೆ,,? ಎಂಬ ಪ್ರಶ್ನೆಗಳು ಇಂದಿನ ಪಂದ್ಯದಲ್ಲಿ ಮುನ್ನಲೆಗೆ ಬಂದಿವೆ.









