ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾದಲ್ಲಿ ಸಿಲುಕಿ ನಟಿ ಮಣಿಗಳಾದ ರಾಗಿಣಿ-ಸಂಜನಾ ಅರೆಸ್ಟ್ ಆಗಿರುವ ವಿಚಾರವಾಗಿ ರಾಕಿಂಗ್ ಸ್ಟಾರ್ ಯಶ್ ತಮ್ಮದೇ ಸ್ಟೈಲಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಡ್ರ ಗ್ಸ್ ಗೂ ಸ್ಯಾಂಡಲ್‍ವುಡ್‍ಗೂ ಏನು ಸಂಬಂಧ..? ಎಲ್ಲದಕ್ಕೂ ಸ್ಯಾಂಡಲ್‍ವುಡ್‍ನ್ನೇ ಯಾಕೆ ಎಳೆದು ತರ್ತೀರಿ ಎಂದು ಎಂದು ಯಶ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಚಿತ್ರರಂಗದ ನಿಯೋಗದೊಂದಿಗೆ ಸಿಎಂ ಬಿಎಸ್‍ವೈ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಶ್, ಎಲ್ಲದಕ್ಕೂ ಚಿತ್ರರಂಗದ ಹೆಸರು ಹೇಳಬೇಡಿ. ಡ್ರಗ್ಸ್ ದಂಧೆ ಇಡೀ ದೇಶಕ್ಕೆ ಮಾರಕವಾಗಿದೆ. ಎಲ್ಲಾ ವಲಯದಲ್ಲೂ ಈ ಸಮಸ್ಯೆ ಇದೆ. ಡ್ರಗ್ಸ್ ನಿಯಂತ್ರಿಸಲು ಚಿಕ್ಕಮಕ್ಕಳಿಂದ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ ಎಂದರು.
ಈ ನಮ್ಮ ನಿಮ್ಮ ದೇಹ ಅಪ್ಪ-ಅಮ್ಮ ಕೊಟ್ಟಿರುವ ಭಿಕ್ಷೆ. ಮಕ್ಕಳು ದೊಡ್ಡವರಾದ ಮೇಲೆ ಹಾಗಾಬೇಕು, ಹೀಗಾಗಬೇಕು ಎಂದು ಕನಸು ಕಂಡು ನಮ್ಮನ್ನು ಬೆಳೆಸುತ್ತಾರೆ. ಮಕ್ಕಳಿಗೆ ಯಾವುದೇ ಸಮಸ್ಯೆ ಆಗದಂತೆ ಹಗಲು-ರಾತ್ರಿ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾರೆ. ಹೀಗಿರುವಾಗ ಡ್ರಗ್ಸ್ ಹಾಗೂ ದುಶ್ಚಟಗಳನ್ನು ಬೆಳೆಸಿಕೊಂಡು ದೇಹ ಹಾಳು ಮಾಡಿಕೊಳ್ಳಬೇಡಿ. ಅಪ್ಪ ಅಮ್ಮನಿಗೆ ನಿಯತ್ತಾಗಿರಿ. ಅವರಿಗೆ ಗೌರವ ತರುವ ಕೆಲಸ ಮಾಡಿ ಎಂದು ರಾಕಿಂಗ್ ಸ್ಟಾರ್ ಕಿವಿಮಾತು ಹೇಳಿದ್ದಾರೆ.