ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ತಮ್ಮ ನಿವೃತ್ತಿ ಕುರಿತಾದ ಚರ್ಚೆಗಳಿಗೆ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಟೀಕಾಕಾರರ ಟೀಕೆಗಳಿಗೆ ಉತ್ತರಿಸುತ್ತಾ ಅವರು, ನಾನೇಕೆ ನಿವೃತ್ತಿ ಹೊಂದಬೇಕು? ನಿಮಗೇನು ಸಮಸ್ಯೆ? ನನ್ನ ನಿವೃತ್ತಿಯಿಂದ ಯಾರಿಗಾದರೂ ಲಾಭವಾಗುತ್ತದೆಯಾ? ಬೇಸರವಾದ ದಿನ ನಾನು ಸ್ವತಃ ಹೊರಡುತ್ತೇನೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದಿದ್ದರೆ ದೇಶೀಯ ಕ್ರಿಕೆಟ್ ಇದೆ, ಅದರಲ್ಲಿ ಆಡುತ್ತೇನೆ. ನನ್ನನ್ನು ಆಯ್ಕೆ ಮಾಡಲಿಲ್ಲವೆಂದು ಯಾರನ್ನೂ ದೂಷಿಸುವುದಿಲ್ಲ. ಅವಕಾಶ ಸಿಕ್ಕಾಗ ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸುತ್ತೇನೆ. ಅದಕ್ಕಾಗಿ ನಿರಂತರವಾಗಿ ಕಷ್ಟಪಟ್ಟು ಅಭ್ಯಾಸ ಮಾಡುತ್ತಿದ್ದೇನೆ ಎಂದು ಶಮಿ ಹೇಳಿದ್ದಾರೆ
ಒಟ್ಟಿನಲ್ಲಿ, ಶಮಿ ತಮ್ಮ ಆಟದ ಜೀವನ ಮುಗಿಯುವ ಪ್ರಶ್ನೆಗಳನ್ನು ತಳ್ಳಿ ಹಾಕಿ, ತಮ್ಮ ದೃಢ ನಿಲುವು ಹಾಗೂ ಹೋರಾಟ ಮನೋಭಾವವನ್ನು ತೋರಿಸಿದ್ದಾರೆ.







