ಬಳ್ಳಾರಿ : ನಿರ್ಭಯಾ ಪ್ರಕರಣದಲ್ಲಿ ಬಾಯಿ ಬಡಿದುಕೊಳ್ಳುತಿದ್ದ ಬಿಜೆಪಿಯವರು ಮನೀಷಾ ಪ್ರಕರಣ(Manisha case)ದಲ್ಲಿ ಮೌನ ವಹಿಸುತ್ತಿರುವುದು ಏಕೆ ಎಂದು ಮಾಜಿ ಸಂಸದ ಉಗ್ರಪ್ಪ(Ugrappa) ಪ್ರಶ್ನಿಸಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ಉಗ್ರಪ್ಪ(Ugrappa), ಉತ್ತರ ಪ್ರದೇಶದ ದಲಿತ ಯುವತಿ ಮನೀಷಾ ವಾಲ್ಮೀಕಿ(Manisha case) ಅತ್ಯಾಚಾರ, ಹತ್ಯೆ ಘಟನೆಯನ್ನು ಖಂಡಿಸಿದರು.
ಬಳಿಕ ಬಿಜೆಪಿ ನಾಯಕರ ವಿರುದ್ಧ ಬೆಂಕಿಕಾರಿದ ಉಗ್ರಪ್ಪ, ಈ ಪ್ರಕರಣದ ಬಗ್ಗೆ ವಾಲ್ಮೀಕಿ ಸಮಯದಾಯದ ಸ್ವಾಭಿಮಾನಿ ಶ್ರೀ ರಾಮುಲು ಯಾಕೆ ಮಾತನಾಡ್ತಿಲ್ಲಾ? ರಮೇಶ್ ಜಾರಕಿಹೊಳಿ ಯಾಕೆ ಮಾತನಾಡುತ್ತಿಲ್ಲಾ.
ಯಾರು ಮಾತನಾಡದೇ ಇದ್ರೂ ಶ್ರೀ ರಾಮುಲು, ರಮೇಶ್ ಜಾರಕಿಹೊಳಿ ಮಾತನಾಡುತ್ತಾರೆ ಅಂದುಕೊಂಡಿದ್ದೆ. ಆದರೆ ಮಾತನಾಡಿಲ್ಲಾ ಯಾಕೆ.
ನಿರ್ಭಯಾ ಪ್ರಕರಣದಲ್ಲಿ ಬಾಯಿ ಬಡಿದುಕೊಳ್ಳುತಿದ್ದ ಬಿಜೆಪಿಯವರು ಮನೀಷಾ ಪ್ರಕರಣದಲ್ಲಿ ಮೌನ ವಹಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ರಾಮುಲುಗೆ 100 ಕೋಟಿ ರೂ. ಮನೆ ಕಟ್ಟೋಕೆ ಹಣ ಎಲ್ಲಿಂದ ಬಂತು : ಎಸ್.ಆರ್. ಹಿರೇಮಠ
ಇದೇ ವೇಳೆ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕಿಡಿಕಾರಿದ ಉಗ್ರಪ್ಪ, ರಾಜ್ಯದ ಸಿಎಂ ಯಡಿಯೂರಪ್ಪ ಆರ್ ಟಿಜಿಎಸ್ ಮೂಲಕ ಲಂಚ ಪಡೆಯುತ್ತಿದ್ದಾರೆ.
ಈ ಹಿಂದೆ ಚೆಕ್ ಮೂಲಕ ಪಡೆದಿದ್ದರು. ಸಾವಿರಾರು ಕೋಟಿ ರೂ.ಗಳನ್ನು ಕಿಕ್ ಬ್ಯಾಕ್ ಪಡೆದು ಸಿಎಂ ಯಡಿಯೂರಪ್ಪ ಭೂಸುಧಾರಣೆ, ಎಪಿಎಂಸಿ ಕಾಯ್ದೆಗಳನ್ನು ತಿದ್ದುಪಡಿ ಮಾಡಿದ್ದಾರೆ ಎಂದು ಆರೋಪಿಸಿದರು.
ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ಬಗ್ಗೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವಕುಮಾರ್ ಅವರ ಮನೆ ಮೇಲೆ ಸಿಬಿಐ ದಾಳಿ ಖಂಡನೀಯ.
ಉಪ ಚುನಾವಣೆ ಸಮಯದಲ್ಲಿ ಈ ದಾಳಿ ಸರಿಯಲ್ಲ ಎಂದು ಉಗ್ರಪ್ಪ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.