ಯುವರತ್ನ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ. ಈಗಾಗಲೇ ಈ ಸಿನಿಮಾದ ಟೀಸರ್, ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ಇದಕ್ಕೆ ಮುಖ್ಯ ಕಾರಣ ಅಪ್ಪು ಹಾಗೂ ಸಂತೋಷ್ ಆನಂದ್ ರಾಮ್ ಮತ್ತೆ ಒಂದಾಗಿರೋದು..
ಹೌದು..! ಈ ಹಿಂದೆ ಈ ಇಬ್ಬರ ಕಾಂಬಿನೇಷನ್ ನಲ್ಲಿ ಬಂದ ರಾಜಕುಮಾರ ಸಿನಿಮಾ ಭಾರಿ ಯಶಸ್ಸು ಕಂಡಿತ್ತು. ಸ್ಯಾಂಡಲ್ ವುಡ್ ನಲ್ಲಿ ಅಲ್ಲಿವರೆಗೆ ಇದ್ದ ದಾಖಲೆಗಳನ್ನು ಈ ಸಿನಿಮಾ ಪುಡಿಗಟ್ಟಿತ್ತು. ಈಗಾಗಿ ಯುವರತ್ನ ಸಿನಿಮಾದ ಮೇಲೂ ಸಾಕಷ್ಟು ನಿರೀಕ್ಷೆಗಳಿವೆ.
ಅಂದಹಾಗೆ ಲಾಕ್ ಡೌನ್ ನಿಂದಾಗಿ ಇಷ್ಟು ದಿನ ಮನೆಯಲ್ಲೇ ಇದ್ದ ಪುನೀತ್ ಇತ್ತೀಚಿಗಷ್ಟೆ ಚಿತ್ರದ ಕೆಲಸಕ್ಕೆ ಮರಳಿದ್ದಾರೆ. ಇದರ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಕೆಲ ಕಿಡಿಗೇಡಿಗಳು ಯುವರತ್ನ ಸಿನಿಮಾದ ಫೋಟೊಗಳನ್ನು ಲೀಕ್ ಮಾಡಿದ್ದು, ಈ ಕುರಿತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಬೇಸರ ಹೊರಹಾಕಿದ್ದಾರೆ. ಜೊತೆಗೆ ಯಾರು ಲೀಕ್ ಆಗಿರುವ ಫೋಟೋಗಳನ್ನು ಹಂಚಿಕೊಳ್ಳದ್ದಂತೆ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಂತೋಷ್ ಆನಂದ್ ರಾಮ್, ಎಲ್ಲ ಪವರ್ ಸ್ಟಾರ್ ಅಭಿಮಾನಿಗಳಲ್ಲಿ ನನ್ನ ವಿನಂತಿ ಯುವರತ್ನ ಚಿತ್ರದ ಫೋಟೋಗಳನ್ನು ಯಾರೋ ಕಿಡಿಗೇಡಿಗಳು ಲೀಕ್ ಮಾಡಿದ್ದಾರೆ. ಪ್ರತಿ ಅಭಿಮಾನಿಗೂ ನನ್ನ ಕೋರಿಕೆ ದಯವಿಟ್ಟು ನೀವು ಫೋಟೋಗಳನ್ನು ಶೇರ್ ಮಾಡುವುದು ಬಿಡಿ, ಡಿಲೀಟ್ ಮಾಡಿ. ಅದು ನೀವು ಅಪ್ಪು ಸರ್ ಹಾಗು ಯುವರತ್ನ ಸಿನಿಮಾಗೂ ಸೂಚಿಸುವ ಗೌರವ ಎಂದು ಭಾವಿಸಿದ್ದೇನೇ.” ಎಂದು ಬರೆದುಕೊಂಡಿದ್ದಾರೆ. ಅಲ್ಲದೆ #beARealpowerstarFan ಎಂದು ಅಭಿಯಾನ ಪ್ರಾರಂಭಿಸಿದ್ದಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್.
ಇನ್ನು ಇತ್ತೀಚಿಗಷ್ಟೆ ಯುವರತ್ನ ಸಿನಿಮಾತಂಡ ಚಿತ್ರದಿಂದ ಪವರ್ ಫುಲ್ ಫೋಟೋವೊಂದನ್ನು ರಿಲೀಸ್ ಮಾಡಿತ್ತು. ಚಿತ್ರದ ಪವರ್ ಆಫ್ ಯೂತ್ ಹಾಡಿನ ಅಪ್ಪು ಸ್ಟೈಲಿಶ್ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.