WIvsIND | ಅನ್ ಲಕ್ಕಿ ರಾಹುಲ್.. 49ಕ್ಕೆ ರನೌಟ್ wi vs ind 2nd odi k l rahul runout saaksha tv
ಅಹಮದಾಬಾದ್ : ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಪಂದ್ಯದಲ್ಲಿ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ.
ಆರಂಭಿಕ ಆಘಾತದಿಂದ ಚೇತರಿಸಿಕೊಂಡಿದ್ದ ಟೀಂ ಇಂಡಿಯಾಗೆ ರಾಹುಲ್ ರನೌಟ್ ಮೂಲಕ ಮತ್ತೆ ಸಂಕಷ್ಟ ಎದುರಾಗಿದೆ. ಉಪನಾಯಕ ಕೆ.ಎಲ್.ರಾಹುಲ್ 49ಕ್ಕೆ ರನೌಟ್ ಆಗಿ ನಿರಾಸೆ ಅನುಭವಿಸಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗೆ ವಿಂಡೀಸ್ ಬೌಲರ್ ಗಳ ಶಾಕ್ ಮೇಲೆ ಶಾಕ್ ನೀಡಿದರು. 2.6 ಓವರ್ ನಲ್ಲಿ 8 ರನ್ ಗಳಿಸಿದ್ದ ರೋಹಿತ್, ಕೆಮರೋನ್ ರೋಚ್ ಬೌಲಿಂಗ್ ನಲ್ಲಿ ಶಾಯಿಗೆ ಕ್ಯಾಚ್ ನೀಡಿದರು.
ಇದಾದ ಬಳಿಕ ಕ್ರೀಸ್ ಗೆ ಬಂದ ವಿರಾಟ್ ಕೊಹ್ಲಿ, ಆರಂಭದಲ್ಲಿ ಉತ್ತಮ ಟಚ್ ನಲ್ಲಿ ಕಾಣಿಸಿಕೊಂಡರು. ಇತ್ತ ಆರಂಭದಿಂದಲೂ ನಿಧಾನಗತಿಯ ಆಟಕ್ಕೆ ಮೊರೆ ಹೋಗಿದ್ದ ರಿಷಬ್ ಪಂತ್, ಗೇರ್ ಚೇಂಜ್ ಮಾಡಿ ಬ್ಯಾಟ್ ಬೀಸಲು ಹೋಗಿ 18ಕ್ಕೆ ಔಟ್ ಆದರು. ಇದೇ ಓವರ್ ನಲ್ಲಿ ವಿರಾಟ್ ಕೊಹ್ಲಿ ಕೂಡ 18ಕ್ಕೆ ಸುಸ್ತಾದರು.
ಇದಾದ ಬಳಿಕ ಕ್ರೀಸ್ ಗೆ ಬಂದ ಉಪನಾಯಕ ಕೆ.ಎಲ್.ರಾಹುಲ್, ಸೂರ್ಯ ಕುಮಾರ್ ಯಾದವ್ ಜೊತೆ ಸೇರಿ ಎಚ್ಚರಿಕೆಯಿಂದ ಇನ್ನಿಂಗ್ಸ್ ಕಟ್ಟಿದರು.
ಅಲ್ಲದೇ ಈ ಜೊಡಿ ಅರ್ಧಶತಕದ ಜೊತೆಯಾಟವನ್ನು ಆಡಿತ್ತು. ಆದ್ರೆ ತಂಡದ ಮೊತ್ತ 134 ರನ್ ಇದ್ದಾಗ ಕೆ.ಎಲ್.ರಾಹುಲ್ ರನ್ ಔಟ್ ಗೆ ಬಲಿಯಾದರು. ಪಂದ್ಯದಲ್ಲಿ 48 ಎಸೆತಗಳನ್ನು ಎದುರಿಸಿದ್ದ ರಾಹುಲ್ ನಾಲ್ಕು ಬೌಂಡರಿ 2 ಸಿಕ್ಸರ್ ಗಳೊಂದಿಗೆ 49 ರನ್ ಗಳಿಸಿದ್ದರು.









