WIvsIND | ಅಯ್ಯರ್ – ಪಂತ್ ಜುಗಲ್ ಬಂಧಿ.. ವಿಂಡೀಸ್ ಗೆ 266 ರನ್ ಗುರಿ wi vs ind-team india all out for 265 saaksha tv
ಶ್ರೇಯಸ್ ಅಯ್ಯರ್ – ರಿಷಬ್ ಪಂತ್ ಜುಗಲ್ ಬಂಧಿಯಾಟ.. ಕೊನೆಯಲ್ಲಿ ಆಲ್ ರೌಂಡರ್ ಗಳ ಉತ್ತಮ ಪ್ರದರ್ಶನ.. ವೆಸ್ಟ್ ಇಂಡೀಸ್ 2 ರನ್ ಗಳ ಗುರಿ. ಇದು ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಪಂದ್ಯದ ಭಾರತ ಇನ್ನಿಂಗ್ಸ್ ನ ಬ್ಯಾಟಿಂಗ್ ಹೈಲೆಟ್ಸ್..
ಅಹ್ಮದಾಬಾದ್ ನ ನರೇಂದ್ರ ಮೋದಿ ಮೈದಾನಲ್ಲಿ ನಡೆಯುತ್ತಿರುವ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ, ವಿಂಡೀಸ್ ಗೆ ಪಂದ್ಯ ಗೆಲ್ಲಲು 266 ರನ್ ಗಳ ಗುರಿ ನೀಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ತಂಡದಲ್ಲಿ ನಾಲ್ಕು ಬದಲಾವಣೆಗಳನ್ನು ಮಾಡಲಾಗಿತ್ತು. ಹಳೆ ಪಾಟ್ನರ್ ಶಿಖರ್ ಧವನ್ ಜೊತೆ ಇನ್ನಿಂಗ್ಸ್ ಆರಂಭಿಸಿದ ರೋಹಿತ್, 13 ರನ್ ಗಳಿಗೆ ಜೊಸೆಫ್ ಓವರ್ ನಲ್ಲಿ ಔಟ್ ಆದರು. ಇದೇ ಓವರ್ ನಲ್ಲಿ ವಿರಾಟ್ ಕೊಹ್ಲಿ ಡಕೌಟ್ ಆದರು. ಇದಾದ ಕೆಲವೇ ಕ್ಷಣಗಳಲ್ಲಿ ಧವನ್ (10) ಕೂಡ ಪೆವಿಲಿಯನ್ ಸೇರಿಕೊಂಡರು.
ಈ ಸಂಕಷ್ಟದ ಸ್ಥಿತಿಯಲ್ಲಿ ಯುವ ಬ್ಯಾಟರ್ ಗಳಾದ ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಎಚ್ಚರಿಕೆಯಿಂದ ಇನ್ನಿಂಗ್ಸ್ ಕಟ್ಟಿದರು. ಇಬ್ಬರೂ ತಲಾ ಅರ್ಧಶತಕ ಸಿಡಿಸಿದರು. ನೂರು ರನ್ ಗಳ ಜೊತೆಯಾಟ ಕೂಡ ನೀಡಿದರು. ಇದಾದ ಕೆಲವೇ ಹೊತ್ತಿನಲ್ಲಿ ವಾಲ್ಷ್ ಬೌಲಿಂಗ್ ನಲ್ಲಿ ಹೊಪೆಗೆ ಕ್ಯಾಚ್ ನೀಡಿ ಪಂತ್ ( 56 ರನ್, 54 ಎಸೆತ, 6ಬೌಂಡರಿ, 1 ಸಿಕ್ಸರ್) ನಿರ್ಗಮಿಸಿದರು. ನಂತರ ಬಂದ ಸೂರ್ಯಕುಮಾರ್ ಯಾದವ್ 6 ರನ್ ಗಳಿಸಿ ಅಲೆನ್ ಗೆ ವಿಕೆಟ್ ನೀಡಿದರು. ಇದರ ಬೆನ್ನಲ್ಲೇ ಶತಕದತ್ತ ಮುನ್ನುಗ್ಗುತ್ತಿದ್ದ ಶ್ರೇಯಸ್ ಅಯ್ಯರ್ 80 ರನ್ ಗಳಿಗೆ ಆಟ ಮುಗಿಸಿದರು. ಅಯ್ಯರ್ 111 ಎಸೆತಗಳಲ್ಲಿ 80 ರನ್ ಗಳಿಸಿದರು. ಇದರಲ್ಲಿ 9 ಬೌಂಡರಿಗಳಿವೆ. 187 ರನ್ ಗಳಿಗೆ ಭಾರತದ ಬ್ಯಾಟರ್ ಗಳು ಡಗೌಟ್ ಸೇರಿಕೊಂಡರು. ಇಲ್ಲಿಂದ ಆಲ್ ರೌಂಡರ್ ಗಳ ಆಟ ಶುರುವಾಯ್ತು. ದೀಪಕ್ ಚಹಾರ್ 100ರ ಸರಾಸರಿಯಲ್ಲಿ 38 ರನ್ ಗಳಿಸಿದರು. ಕುಲ್ದೀಪ್ 5 ರನ್, ವಾಷಿಂಗ್ ಟನ್ ಸುಂದರ್ 33 ರನ್, ಸಿರಾಜ್ 4 ರನ್ ಗಳಿಸಿದರು. ಅಂತಿಮವಾಗಿ ಟೀಂ ಇಂಡಿಯಾ ನಿಗದಿತ 50ಓವರ್ ಗಳಲ್ಲಿ 10 ವಿಕೆಟ್ ಕಳೆದುಕೊಂಡು 265 ರನ್ ಗಳಿಸಿದೆ.









