ಮನೆ ಉಸ್ತುವಾರಿ ನೋಡಿಕೋ ಎಂದ್ರೆ, ಸ್ನೇಹಿತನ ಹೆಂಡತಿ ಜೊತೆಗೆ ಎಸ್ಕೇಪ್ ಆದ ಪುಣ್ಯಾತ್ಮ..!
ಬೆಂಗಳೂರು: ಹೊಸ ಮನೆ ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುವುದಕ್ಕೆ ಸ್ನೇಹಿತನ ಮೇಲೆ ನಂಬಿಕೆ ಇಟ್ಟು ಕರೆಸಿಕೊಂಡಿದ್ದ ವ್ಯಕ್ತಿ ಈಗ ಬೆಪ್ಪಾಗಿ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.
ಹೌದು.. ಕೋಣನಕುಂಟೆ ನಿವಾಸಿ ದೇವರಾಜ್ ಎಂಬಾತ ತನ್ನ ಸ್ನೇಹಿತ ಮಹೇಶ್‍ಗೆ ಮನೆ ನಿರ್ಮಾಣದ ಉಸ್ತುವಾರಿ ನೀಡಿದ್ದರು. ಈ ವೇಳೆ ದೇವರಾಜ್ ಪತ್ನಿ ಲತಾ ಜೊತೆ ಮಹೇಶ್ ಸ್ನೇಹ ಬೆಳೆಸಿದ್ದಾನೆ. ಬಳಿಕ ಇವರ ಸಂಬಂಧ ಅನೈತಿಕ ಸಂಬಂಧಕ್ಕೆ ತಿರುಗಿದ್ದು, ಲತಾ ಗಂಡನನ್ನ ಬಿಟ್ಟು ಹೋಗಿದ್ದಾಳೆ..
ಲತಾ ಹಾಗೂ ದೇವರಾಜ್ ಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಲತಾ ಮತ್ತು ದೇವರಾಜ್ ಅವರನ್ನು ಕೂರಿಸಿ ಹಿರಿಯರು ರಾಜಿ ಸಂಧಾನ ಮಾಡಿದ್ದಾರೆ. ಆದ್ರೂ ಯಾವುದೇ ಪ್ರಯೋಜನವಾಗಿಲ್ಲ..
ದೇವರಾಜ್ ಆರೋಪಿಸಿರುವ ಪ್ರಕಾರ ಮದುವೆಯ ನಂತರ ಆತ ಹೆಂಡತಿಯ ಹೆಸರಲ್ಲಿ ಆಸ್ತಿ ಮಾಡಿದ್ದಾನೆ.. ಈ ನಡುವೆ ಮನೆಯನ್ನೇ ಖಾಲಿ ಮಾಡಿಕೊಂಡುವಂತೆ ಧಮ್ಕಿ ಹಾಕಿದ್ದಾರೆ. ಧಮ್ಕಿ ಹಾಕಿ ಸ್ಟೇಷನ್ ನಲ್ಲೇ ಒಂದು ದಿನ ಕೂರಿಸಿದ್ದಾರೆ. ಪೊಲೀಸರಿಗೂ ಲಂಚವನ್ನು ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೇ ಪತ್ನಿ ಲತಾ ಗೆಳೆಯನ ಜೊತೆ ಸೇರಿ ಮನೆಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.. ಈಗ ಕೋರ್ಟ್ ನಿಂದ ಮನೆ ಮಾರಾಟಕ್ಕೆ ತಡೆಯಾಜ್ಞೆ ತಂದಿದ್ದೇನೆ ಎಂದು ದೇವರಾಜ್ ಹೇಳಿದ್ದಾರೆ.
ಇದಾದ ಬಳಿಕ ಬಸವನಗುಡಿ ಮಹಿಳಾ ಠಾಣೆಯಲ್ಲಿ ಲತಾ ಅವರು ಪತಿ ಹೊಡೆಯುತ್ತಾನೆ ಎಂದು ದೂರು ನೀಡಿದ್ದಾರೆ. ಇತ್ತ ಪತ್ನಿ ಮತ್ತು ಪ್ರಿಯಕರನ ವಿರುದ್ಧ ದೇವರಾಜ್ ದೂರು ನೀಡಲು ಹೋಗಿದ್ದು, ಕೋಣನಕುಂಟೆ ಪೊಲೀಸರು ದೂರು ಸ್ವೀಕರಿಸಿಲ್ಲ ಎನ್ನಲಾಗಿದೆ.








