ಅಕ್ರಮ ಸಂಬಂಧಕ್ಕೆ ಅಡ್ಡಿ | ಪತಿಯ ಕತ್ತು ಹಿಸುಕಿ ಪತ್ನಿ ಕೊಲೆ
ದಾವಣಗೆರೆ : ಅಕ್ರಮ ಸಂಬಂಧಕ್ಕೆ ಅಡ್ಡಿ ಎಂಬ ಕಾರಣಕ್ಕೆ ಪತ್ನಿಯೇ ಪತಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ವಡ್ನಾಳ್ ಬನ್ನಿಹಟ್ಟಿ ಗ್ರಾಮದಲ್ಲಿ ನಡೆದಿದೆ.
ವಡ್ನಾಳ್ ಬನ್ನಿಹಟ್ಟಿ ಗ್ರಾಮದ ನಿವಾಸಿ ಲೋಕೇಶಪ್ಪ (38) ಕೊಲೆಯಾದವ. ಪತ್ನಿ ಕುಸುಮ (30), ಪ್ರಿಯಕರ ಪ್ರಭು ಲಿಂಗಪ್ಪ (35) ಬಂಧಿತ ಆರೋಪಿಗಳಾಗಿದ್ದಾರೆ.
ಪ್ರಭು ಲಿಂಗಪ್ಪ, ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ನಿವಾಸಿಯಾಗಿದ್ದು, ಕುಸುಮಳೊಂದಿಗೆ ಅಕ್ರಮಸಂಬಂಧ ಇಟ್ಟುಕೊಂಡಿದ್ದನಂತೆ.
ಅಕ್ರಮ ಸಂಬಂಧದ ವಿಷಯ ತಿಳಿದು ಲೋಕೇಶಪ್ಪ ಪತ್ನಿ ಜೊತೆ ಸಾಕಷ್ಟು ಬಾರಿ ಜಗಳವಾಡಿದ್ದಾನೆ.
ಇದರಿಂದ ಲೋಕೇಶಪ್ಪನನ್ನು ಕುಸುಮ ಮತ್ತು ಲಿಂಗಪ್ಪ ಇಬ್ಬರು ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.
ಇದೀಗ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದು, ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









