ಬೇರೊಬ್ಬಳಿಗೆ ಪತಿಯನ್ನ ಬಿಟ್ಟು ಕೊಟ್ಟ ಪತ್ನಿ: 1.5 ಕೋಟಿ ರೂಪಾಯಿಗೆ ಪತಿಯ ಮಾರಾಟ..!
ಮಧ್ಯಪ್ರದೇಶ: ಪತ್ನಿಯೊಬ್ಬಳು ತನ್ನ ಪತಿಯನ್ನ 1.5 ಕೋಟಿ ರೂಪಾಯಿ ಬೇರೊಬ್ಬ ಮಹಿಳೆಗೆ ಮಾರಾಟ ಮಾಡಿರೋ ವಿಚಿತ್ರ ಘಟನೆಯೊಂದು ಮಧ್ಯಪ್ರದೇಶದ ಭೋಪಾಲ್ ನಲ್ಲಿ ಬೆಳಕಿಗೆ ಬಂದಿದೆ. ಮೂರು ಮಕ್ಕಳ ತಂದೆಯೋರರ್ವ ತನ್ನ ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ಮಹಿಳೆ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ. ಇದರಿಂದಾಗಿ ಮನೆಯಲ್ಲಿ ಪತಿ ಪತ್ನಿ ನಡುವೆ ಜಗಳ ನಡೆಯುತ್ತಿತ್ತು. ಪತಿಗೆ ಪ್ರೇಯಸಿಯೊಂದಿಗೆ ಬದುಕುವ ಆಸೆಯಿದ್ದ ಹಿನ್ನೆಲೆ ಗಲಾಟೆ ಏರ್ಪಟ್ಟಿತ್ತು. ಇದರಿಂದಾಗಿ ಮನನೊಂದಿದ್ದ ಅವರ ಮಗಳು ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಳು.
ಅನೈತಿಕ ಸಂಬಂಧಕ್ಕೆ ಅಡ್ಡಿ: ಮಕ್ಕಳಿಗೆ ವಿಷ ಉಣಿಸಿದ ಪಾಪಿ ತಾಯಿ!
ನನ್ನ ತಂದೆ ಸಹೋದ್ಯೋಗಿಯೊಂದಿಗೆ ವಿವಾಹೇತರ ಸಂಬಂಧವನ್ನು ಹೊಂದಿದ್ದಾರೆ. ಇದರಿಂದಾಗಿ ಮನೆಯಲ್ಲಿ ಪ್ರತಿನಿತ್ಯವೂ ತಂದೆ ಮತ್ತು ತಾಯಿಗೆ ಜಗಳವಾಗುತ್ತಿದೆ. ಇದರ ಪರಿಣಾಮ ನನ್ನ ಮತ್ತು ಸಹೋದರಿಯ ಶಿಕ್ಷಣದ ಮೇಲೆ ಬೀಳುತ್ತಿದೆ ಎಂದು ದಂಪತಿಯ ಮಗಳು ದೂರಿನಲ್ಲಿ ಉಲ್ಲೇಖಿಸಿದ್ದಳು.
ಬಳಿಕ ಪ್ರಕರಣ ಸಂಬಂಧ ಎಲ್ಲರನ್ನ ಒಟ್ಟಾಗಿ ಕೂರಿಸಿ ಮಾತುಕತೆ ನಡೆಸಲಾಗಿದೆ. ಕೊನೆಗೆ ಒಂದು ನಿರ್ಧಾರಕ್ಕೂ ಬಂದಿದ್ದಾರೆ. ಅದದರಂತೆ ತನ್ನ ಜೊತೆಗೆ ಬದುಕಲು ಇಚ್ಛೆ ಇಲ್ಲದ ವ್ಯಕ್ತಿಯೊಂದಿಗೆ ನಾನು ಸಹ ಇರುವುದಿಲ್ಲ. ಆದ್ರೆ ಪತಿಯನ್ನ ಬಿಟ್ಟು ಕೊಡಲು, ನನ್ನ ಮಕ್ಕಳ ಭವಿಷ್ಯಕ್ಕಾಗಿ 27 ಲಕ್ಷ ನಗದು ಜೊತೆಗೆ ಪತಿಯ ಪ್ರೇಯಸಿ ವಾಸಿಸುತ್ತಿರುವ ಪ್ಲಾಟ್ ಬಿಟ್ಟುಕೊಡಬೇಕು ಎಂಬ ಷರತ್ತಿಟ್ಟಿದ್ದಾಳೆ. ಅದರಂತೆಯೇ 1.5ಕೋಟಿ ರೂಪಾಯಿಗೆ ಪತ್ನಿಯಿಂದ ಆಕೆಯ ಪತಿಯನ್ನ ಆತನ ಪ್ರೇಯಸಿ ಖರೀದಿಸಿದ್ದಾಳೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








