ಗ್ರಾ.ಪಂ ಚುನಾವಣೆಯಲ್ಲಿ ಪತ್ನಿ ಅವಿರೋಧ ಆಯ್ಕೆ : ಪತಿ ಆತ್ಮಹತ್ಯೆ
ಚಾಮರಾಜನಗರ : ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದ ಮಹಿಳೆಯ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ದೊಡ್ಡರಾಯಪೇಟೆಯಲ್ಲಿ ನಡೆದಿದೆ.
27 ವರ್ಷದ ನಿಂಗರಾಜು ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿಯಾಗಿದ್ದಾನೆ.
ನಿಂಗರಾಜು ಪತ್ನಿ ಗಗನಾ ಎಂಬಾಕೆ ಎರಡು ದಿನಗಳ ಹಿಂದೆಯಷ್ಟೇ ಗ್ರಾಮದ ಎರಡನೇ ವಾರ್ಡಿನಿಂದ ಅವಿರೋಧವಾಗಿ ಆಯ್ಕೆಯಾಗಿದ್ದರು.
ಇದನ್ನೂ ಓದಿ : ಕರ್ನಾಟಕ ಗೋಹತ್ಯೆ ವಿಧೇಯಕ : ಗೋವಾ ವ್ಯಾಪಾರಿಗಳಿಂದ ವಿರೋಧ
ಆದ್ರೆ ಇದನ್ನ ಸಂಭ್ರಮಿಸಬೇಕಾದ ಪತಿಯೇ ಬಾರದಲೋಕಕ್ಕೆ ಪಯಣ ಬೆಳೆಸಿದ್ದಾರೆ. ನಿಂಗರಾಜು ಆತ್ಮಹತ್ಯಗೆ ಕಾರಣವೇನೆಂಬುದು ತಿಳಿದುಬಂದಿಲ್ಲ.
ಅಚ್ಚರಿ ಏನೆಂದ್ರೆ ಈ ಘಟನೆ ಕುರಿತು ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ ಎಂದು ಚಾಮರಾಜನಗರ ಪೂರ್ವ ಠಾಣೆ ಪಿಎಸ್ ಐ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









