6000 ರೈಲು ನಿಲ್ದಾಣಗಳಿಗೆ ಭಾರತೀಯ ರೈಲ್ವೆಯಿಂದ ವೈ-ಫೈ ..!
ನವದೆಹಲಿ : ಭಾರತೀಯ ರೈಲ್ವೆಯ ಪ್ರಯಾಣಿಕರು ಮತ್ತು ಸಾರ್ವಜನಿಕರನ್ನು ಸಂಪರ್ಕಿಸಲು ದೂರದ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯವನ್ನು ವಿಸ್ತರಿಸುತ್ತಿದೆ. ಹೌದು ಭಾರತೀಯ ರೈಲ್ವೆಯಿಂದ 6,000ನೇ ರೈಲ್ವೆ ನಿಲ್ದಾಣದಲ್ಲಿ ವೈ-ಫೈ ಸೌಲಭ್ಯ ಕಲ್ಪಿಸಲಾಗಿದೆ. ಜಾರ್ಖಂಡ್‌ನ ಹಝಾರಿಬಾದ್‌ನ ಪೂರ್ವ ಕೇಂದ್ರೀಯ ರೈಲ್ವೆಯ ಧನ್ ಬಾದ್ ವಿಭಾಗದ ಹಝಾರಿಬಾದ್ ಪಟ್ಟಣದಲ್ಲಿ ವೈ-ಫೈ ಸೌಲಭ್ಯ ಕಲ್ಪಿಸಲಾಗ್ತಿದೆ.
2016 ರ ಜನವರಿಯಲ್ಲಿ ಮುಂಬೈ ರೈಲ್ವೆ ನಿಲ್ದಾಣದಲ್ಲಿ ಮೊದಲನೇ ವೈ-ಫೈ ಸೌಲಭ್ಯ ಕಲ್ಪಿಸಲಾಗಿತ್ತು. ಇದಾದ ನಂತರ ಪೂರ್ವ ಬಂಗಾಳದ ಮಿಡ್ನಾಪುರದಲ್ಲಿ 5000 ನೇ ರೈಲ್ವೆ ನಿಲ್ದಾಣ ಮತ್ತು ಹಝಾರಿಬಾಗ್ ನಲ್ಲಿ 6000ನೇ ರೈಲ್ವೆ ನಿಲ್ದಾಣದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಇದೇ ದಿನದಂದು ಒಡಿಶಾದ ಅಂಗುಲ್ ಜಿಲ್ಲೆಯ ಜಾರಪದ ನಿಲ್ದಾಣದಲ್ಲಿ ವೈ-ಫೈ ಸೌಲಭ್ಯ ಕಲ್ಪಿಸಲಾಗಿದೆ.
ಗ್ರಾಮೀಣ ಮತ್ತು ನಗರದ ನಾಗರಿಕರ ನಡುವೆ ಇರುವ ಡಿಜಿಟಲ್ ಅಂತರವನ್ನು ತಗ್ಗಿಸುವ, ಗ್ರಾಮೀಣ ಭಾಗದಲ್ಲಿ ಡಿಜಿಟಲ್ ಹೆಜ್ಜೆ ಗುರುತುಗಳನ್ನು ಹೆಚ್ಚಿಸುವ ಮತ್ತು ಬಳಕೆದಾರರ ಅನುಭವವನ್ನು ವೃದ್ಧಿಸುವ ಉದ್ದೇಶವನ್ನು ಇದು ಒಳಗೊಂಡಿದೆ. ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯದಿಂದ ರೈಲ್ವೆಗೆ ಯಾವುದೇ ವೆಚ್ಚವಾಗುವುದಿಲ್ಲ, ಸ್ವಯಂ ಸುಸ್ಥಿರತೆ ಆಧಾರದ ಮೇಲೆ ಈ ಸೌಕರ್ಯ ಒದಗಿಸಲಾಗುತ್ತಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.