Wikipedia ಅಂತಹ ಆನ್ ಲೈನ್ ಮೂಲಗಳ ಮೇಲೆ ಅವಲಂಬಿಸಲು ಸಾಧ್ಯವಿಲ್ಲ – ಸುಪ್ರೀಂ ಕೋರ್ಟ್
Wikipedia….
ಯಾವುದೇ ಒಂದು ವಿಚಾರವನ್ನ ವಿಕಿಪೀಡಿಯಾ ಮೂಲಕ ತಿಳಿದುಕೊಳ್ಳ ಬಹುದು.. ಆದ್ರೆ ಕೆಲವೊಮ್ಮೆ ವಿಕಿ ಪೀಡಿಯಾದಲ್ಲಿ ಕೆಲ ತಪ್ಪು ಮಾಹಿತಿಗಳೂ ಇರುತ್ತವೆ..
ಅಂದ್ಹಾಗೆ ವಿಕಿಪೀಡಿಯಾದಂತಹ ಆನ್‌ಲೈನ್ ಮಾಹಿತಿ ಮೂಲಗಳು ಜನ ಸಮೂಹ ಒದಗಿಸುವ ಮಾಹಿತಿಯನ್ನು ಆಧರಿಸಿರುತ್ತವೆ. ತಮಗೆ ಗೊತ್ತಿರುವ ವಿಚಾರಗಳನ್ನು ಸೇರ್ಪಡೆ ಮಾಡುವ ಅವಕಾಶವನ್ನೂ ಅವು ಬಳಕೆದಾರರಿಗೆ ಒದಗಿಸುತ್ತವೆ.
ಹೀಗಾಗಿ ಅವುಗಳನ್ನು ಸಂಪೂರ್ಣವಾಗಿ ಅವಲಂಬಿಸುವಂತಿಲ್ಲ. ಅವು ದಾರಿ ತಪ್ಪಿಸುವಂತಹ ಮಾಹಿತಿ ಪಸರಿಸುವ ಸಾಧ್ಯತೆಯೂ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ…
ಈ ಸಂಬಂಧಿತ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ವಿಕ್ರಂನಾಥ್ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ವಿಕಿಪೀಡಿಯಾದಂತಹ ಮಾಹಿತಿ ಮೂಲಗಳು ಉಚಿತವಾಗಿ ಜ್ಞಾನ ಒದಗಿಸುತ್ತವೆ ಎಂಬುದನ್ನು ನಾವು ಒಪ್ಪುತ್ತೇವೆ.
ಆದರೆ ಕಾನೂನು ವಿವಾದಗಳಿಗೆ ಸಂಬಂಧಿಸಿದ ಮಾಹಿತಿಗಾಗಿ ಇಂತಹ ಮೂಲಗಳನ್ನು ಅವಲಂಬಿಸುವಾಗ ಎಚ್ಚರದಿಂದ ಅಭಿಪ್ರಾಯ ಪಟ್ಟಿದೆ..
Wikipedia , for law purpose , these platform cant be trusted – supreme court