ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಅರಣ್ಯದಂಚಿನ ಪ್ರದೇಶ, ಕಾಫಿ ತೋಟಗಳಲ್ಲಿ ಕಾಣ ಸಿಗುತ್ತಿದ್ದ ಕಾಡಾನೆಗಳ ಹಿಂಡು ಇದೀಗ ನಗರ ಪ್ರದೇಶದತ್ತ ಕಂಡುಬರುತ್ತಿದೆ.
ಕುಶಾಲನಗರ ಸಮೀಪದ ಸೀಗೆ ಹೊಸೂರಿಗೆ ಸೇರಿದ ಬಾಣಾವರ ಮೀಸಲು ಅರಣ್ಯ ಪ್ರದೇಶದಿಂದ ಕಣಿವೆ ಸೇತುವೆ ಬಳಿ ಕಾಣಿಸಿಕೊಂಡ ಕಾಡಾನೆಗಳಿಂದ ಸ್ಥಳೀಯರು ಆತಂಕಕ್ಕೆ ಈಡಾಗಿದ್ದಾರೆ.

ಕಣಿವೆ ಸೇತುವೆ ಬಳಿ ಒಂಟಿ ಸಲಗ ಏಕಾಏಕಿ ಅಡ್ಡಾಡುತ್ತಿದ್ದ ತಿರುಗುತ್ತಿದ್ದ ಕಾರಣ ಕುಶಾಲನಗರ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ಸೀಗೆಹೊಸೂರಿನ ಮುಖ್ಯರಸ್ತೆಯಲ್ಲೇ ಹಿಂಡಿನಿಂದ ಬೇರ್ಪಟ್ಟ ಒಂಟಿ ಸಲಗ ಅಡ್ಡಾದಿಡ್ಡಿ ಓಡಾಡುತ್ತಿದ್ದಲ್ಲದೆ, ಕಾವೇರಿ ನದಿ ತಟ ಕಣಿವೆ ಸೇತುವೆ ಬಳಿ ಗ್ರಾಮಸ್ಥರ ಚೀರಾಟದಿಂದ ದಿಕ್ಕಾಪಾಲಾಗಿತ್ತು. ಇದೇ ಹಿಂಡಿನಲ್ಲಿ ಇದ್ದ ಕೆಲವು ಆನೆಗಳು ಚಿಕ್ಕಬೆಟ್ಟ ಪ್ರದೇಶದ ಮನೆ ಮೇಲೆ ದಾಳಿ ಮಾಡಿ, ದನದ ಕೊಟ್ಟಿಗೆಯೊಳಗೆ ನುಸುಳಿದ ವೇಳೆ ಹಸುವೊಂದಕ್ಕೆ ಗಾಯವಾಗಿದೆ.

ಕಣಿವೆ ಸೇತುವೆ ಪ್ರದೇಶ ಕೊಡಗು-ಮೈಸೂರು ಗಡಿಯಾಗಿರುವ ಹಿನ್ನಲೆಯಲ್ಲಿ ಯಾವ ಜಿಲ್ಲೆಯ ಅರಣ್ಯ ಇಲಾಖೆಯವರು ಕಾರ್ಯಾಚರಣೆ ಮಾಡಬೇಕು ಎನ್ನುವಷ್ಟರಲ್ಲೇ ಹಲವು ನಷ್ಟಗಳು ಸಂಭವಿಸಿದೆ. ಬಳಿಕ ಮೈಸೂರು ಜಿಲ್ಲೆ ಪಿರಿಯಾಪಟ್ಟಣದಿಂದ ಬಂದ ಅರಣ್ಯಾಧಿಕಾರಿಗಳ ತಂಡ ಪಟಾಕಿ ಸಿಡಿಸಿ ಕಾಡಾನೆಗಳನ್ನು ಮತ್ತೆ ಕಾಡಿಗೆ ಓಡಿಸುವ ಕೆಲಸ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








