ಮಡಿಕೇರಿ: ಕೊಡಗು ಜಿಲ್ಲೆ ಶನಿವಾರಸಂತೆ ಸಮೀಪ ಬಾಣಾವರ ಮೀಸಲು ಅರಣ್ಯ ಪ್ರದೇಶದಲ್ಲಿ ಕಳೆದ ಒಂದೆರಡು ದಿನಗಳಿಂದ ಒಂಟಿ ಸಲಗವೊಂದು ಬೀಡುಬಿಟ್ಟಿದ್ದು ಆಗಿಂದಾಗೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದೆ.

ಬಾಣಾವರ ಮೀಸಲು ಅರಣ್ಯ ಪ್ರದೇಶದಲ್ಲಿ ಸಮೀಪದ ಕಾಲೋನಿ ಮತ್ತು ಜನವಸತಿ ಪ್ರದೇಶಗಳ ಮೇಲೆ ಒಂಟಿ ಸಲಗ ದಾಳಿ ಮಾಡಿದ್ದು ಮನೆಯ ಹಂಚು, ಗೋಡೆ ಸೇರಿದಂತೆ ಬಾಳೆ, ತೆಂಗು, ಹಣ್ಣಿನ ಗಿಡಗಳನ್ನು ನಾಶ ಮಾಡಿದೆ.

ಸಾರ್ವಜನಿಕರೇ ಗಲಾಟೆ ಮಾಡಿ ಓಡಿಸಿದರೂ ಬಾಣಾವರ ಚೆಕ್ ಪೋಸ್ಟ್ ಬಳಿಯಲ್ಲೇ ರಸ್ತೆಗೆ ಅಡ್ಡಲಾಗಿ ನಿಂತು ದಾಳಿ ಮಾಡಲು ಮುಂದಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಅಟ್ಟುವ ಕೆಲಸ ಮಾಡಿದರೂ ಮತ್ತೊಂದು ದಿಕ್ಕಿನಿಂದ ಬಂದು ದಾಳಿ ಮಾಡುತ್ತಿರುವುದು ಸುತ್ತಮುತ್ತ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








