ವಿಂಬಲ್ಡನ್ – ಸ್ವೀಸ್ ಮಾಸ್ಟರ್ ಫೆಡರರ್ ಗೆ ಸುಲಭ ಜಯ.. ಅಲೆಕ್ಸಾಂಡರ್, ಡೇನಿಲ್ ಮುನ್ನಡೆ
ಟೆನಿಸ್ ಮಾಸ್ಟರ್ ರೋಜರ್ ಫೆಡರರ್ ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.
ಆಲ್ ಇಂಗ್ಲೆಂಡ್ ಕ್ಲಬ್ ನ ಸೆಂಟರ್ ಕೋರ್ಟ್ ನಲ್ಲಿ ರೋಜರ್ ಫೆಡರರ್ ತನ್ನ ಎರಡನೇ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್ ನ ರಿಚರ್ಡ್ ಗಾಸ್ಕ್ವೇಟ್ ಅವರನ್ನು ಸುಲಭವಾಗಿ ಮಣಿಸಿದ್ರು.
ಸುಮಾರು 7500 ಅಭಿಮಾನಿಗಳ ಎದುರು ತನ್ನ ನೈಜ ಆಟದ ಲಯವನ್ನು ಕಂಡುಕೊಂಡ ರೋಜರ್ ಫೆಡರರ್ 7-6, 6-1, 6-4ರಿಂದ ರಿಚರ್ಡ್ ಗಾಸ್ಕ್ವೇಟ್ ಅವರನ್ನು ಪರಾಭವಗೊಳಿಸಿದ್ರು. ಮುಂದಿನ ಸುತ್ತಿನಲ್ಲಿ ರೋಜರ್ ಫೆಡರರ್ ಅವರು ಬ್ರಿಟನ್ ನ ಕ್ಯಾಮರೊನ್ ನೊರೈ ಅವರನ್ನು ಎದುರಿಸಲಿದ್ದಾರೆ.
ಇನ್ನು ಎರಡನೇ ಶ್ರೇಯಾಂಕಿತ ರಷ್ಯಾದ ಡೇನಿಲ್ ಮಾಡ್ವೇಡೆವ್ ಅವರು 6-4, 6-2, 6-1ರಿಂದ ಯುವ ಆಟಗಾರ ಸ್ಪೇನ್ ನ ಕಾರ್ಲೊಸ್ ಆಕ್ಲಾರಾಝ್ ಅವರನ್ನು ಮಣಿಸಿ ಮೂರನೇ ಸುತ್ತು ಪ್ರವೇಶಿಸಿದ್ರು.
ಹಾಗೇ ಪುರುಷರ ಸಿಂಗಲ್ಸ್ ನ ಇನ್ನೊಂದು ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕಿತ ಅಲೆಕ್ಸಾಂಡರ್ ಝಿವೆರ್ವ್ 7-5, 6-2, 6-3ರಿಂದ ಅಮೆರಿಕಾದ ಟೆನ್ಯಾಸ್ ಸ್ಯಾಂಡಗ್ರೆನ್ ಅವರನ್ನು ಸೋಲಿಸಿದ್ರು.
ಮತ್ತೊಂದು ಸಿಂಗಲ್ಸ್ ಪಂದ್ಯದ ಎರಡನೇ ಸುತ್ತಿನಲ್ಲಿ ಆಸ್ಟ್ರೇಲಿಯಾದ ನಿಕ್ ಕೈರ್ಗಿಸೊ ಅವರು 7-6, 6-4, 6-4ರಿಂದ ಇಟಲಿಯ ಗಿಯಾನ್‍ಲುಕಾ ಮಾಜೇರ್ ಅವರನ್ನು ಪರಾಭವಗೊಳಿಸಿದ್ರು.








