ನಟ ಶಿವರಾಜ್ಕುಮಾರ್, ತಮ್ಮ ಕುಟುಂಬದೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಶಿವಣ್ಣ ಅವರು 18 ಡಿಸೆಂಬರ್ ರಂದು ಅನಾರೋಗ್ಯದ ಕಾರಣ ಅಮೆರಿಕಾಗೆ ತೆರಳಬೇಕಾಗಿದೆ, ಮತ್ತು ಅಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಆದರೆ, ಅಮೆರಿಕಾಗೆ ತೆರಳುವ ಮುಂಚೆ, ಅವರು ಪತ್ನಿ ಸಮೇತ ತಿರುಪತಿ ಯಾತ್ರೆ ಮಾಡಿ ದೇವರ ದರ್ಶನ ಪಡೆದಿದ್ದಾರೆ. ದೇವರ ದರ್ಶನ ಪಡೆದು, ದೇವರ ಮುಂದೆ ಮುಡಿ ಕೊಟ್ಟಿದ್ದಾರೆ.
ಇದಲ್ಲದೆ, ಶಿವಣ್ಣ ಅಭಿನಯದ ಚಿತ್ರ ಭೈರತಿ ರಣಗಲ್ ಈಗ ಬಿಡುಗಡೆಗೊಂಡಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ತಿರುಪತಿ ದರ್ಶನದ ನಂತರ ಶಿವಣ್ಣನವರ ಮುಡಿ ಕೊಟ್ಟಿರುವ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ, ಅಭಿಮಾನಿಗಳು “ಹುಷಾರಾಗಿ ಬನ್ನಿ ಶಿವಣ್ಣ” ಎಂದು ಹಾರೈಸುತ್ತಿದ್ದಾರೆ.
ಅಭಿಮಾನಿಗಳು ಶಿವಣ್ಣ ಅವರು ಶೀಘ್ರವೇ ಚೇತರಿಸಿಕೊಳ್ಳಲೆಂದು ಪ್ರಾರ್ಥಿಸುತ್ತಿದ್ದಾರೆ.